ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ರಾಜ್ಯದಲ್ಲಿ ಮನೆ ಮನೆಗೂ ಗಂಗೆ ಹೆಸರಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿ 2020ರಲ್ಲಿ ಮನೆ ಮನೆಗೂ ಗಂಗೆ ಯೋಜನೆಯು ಆರಂಭಿಸಲಾಯಿತು.
ಈಗಾಗಲೇ 3,000 ಗ್ರಾಮಗಳಿಗೆ ಶೇ.100ರಷ್ಟು ಮನೆಗಳಿಗೆ ಕೊಳಾಯಿ ಮೂಲಕ ವೀರು ಸರಬರಾಜು ಮಾಡಲಾಗುತ್ತಿದೆ. 50,000 ಹೆಚ್ಚಿನ ಗ್ರಾಮಗಳಲ್ಲಿ ಮನೆ ಮನೆಗೂ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಕೇಂದ್ರ ಸರ್ಕಾರ ಈಗಾಗಲೇ 3,325 ಕೋಟಿ ರೂಪಾಯಿ ಹಣವನ್ನು ಮತ್ತು ರಾಜ್ಯದ ಪಾಲಾದ 2,323 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಮುಂದಿನ 1 ವರ್ಷದಲ್ಲಿ ಎಲ್ಲಾ ಮನೆಗಳಿಗೂ ನೀರಿನ ಸಂಪರ್ಕ ಆಗಲಿದೆ. ರಾಜ್ಯದ 97 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆಯಲಿದೆ. ಈ ಮೊದಲು ಶೇ. 25 ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇತ್ತು. ಈಗ ಶೇ. 46 ರಷ್ಟು ಮನೆಗಳಿಗೆ ನೀರು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಈ ಬಾರಿಯೂ ಮನ್ ರೇಗಾ ಕಾರ್ಯಕ್ರಮದ ಅನುಷ್ಠಾನದಲ್ಲಿ ದಾಖಲೆ ಪ್ರಗತಿಯನ್ನು ಸಾಧಿಸಿದೆ. 21-22 ರಲ್ಲಿ 13 ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗಿತ್ತು ಅದನ್ನು ಡಿಸೆಂಬರ್ ಅಂತ್ಯಕ್ಕೆ ಮುಟ್ಟಲಾಯಿತು. ಹೆಚ್ಚವರಿ 3ಕೋಟಿ ದಿನಗಳ ಗುರಿಯನ್ನು ನೀಡಲಾಯಿತು. ಮಾರ್ಚ್ ಅಂತ್ಯಕ್ಕೆ 3 ಕೋಟಿ 13 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಿ ಗುರಿ ಮೀರಿದ ಸಾಧನೆ ಮತ್ತೊಮ್ಮೆ ಮಾಡಲಾಗಿದೆ ಎಂದರು.