ಹಿಜಾಬ್ ಬಗ್ಗೆ ಪ್ರಚೋದಿತ ಪೋಸ್ಟ್ ಹಾಕುವವರ ಮೇಲೆ ಖಾಕಿ ಕಣ್ಣು ಇಡಲಾಗಿದೆ. ಇನ್ಮುಂದೆ ಪ್ರಚೋದಿತ ಪೋಸ್ಟ್ ಹಾಕಿದ್ರೆ ಪ್ರಕರಣ ದಾಖಲಾಗುತ್ತದೆ.ಈ ಬಗ್ಗೆ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಹಿಜಾಬ್ ಬಗ್ಗೆ ಆಕ್ಷನ್ , ರಿಯಾಕ್ಷನ್ ಪೋಸ್ಟ್ ಹಾಕಿದ್ರೆ ಪತ್ತೆ ಮಾಡಲಾಗುತ್ತದೆ. ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಟ್ಟಿಟರ್ ಮೇಲೆ ನಿಗಾ ಇಡಲಾಗಿದೆ
ವಿವಾದಾತ್ಮಕ ಪೋಸ್ಟ್ ಹಾಕಿದ್ರೆ ಪತ್ತೆ ಮಾಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಧಾರ್ಮಿಕ ಮುಖಂಡ ಜೊತೆ ಕೂಡಲೇ ಸಭೆ ನಡೆಸುವಂತೆ ಡಿಸಿಪಿಗಳಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.