ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಯುಕೆ ಯಲ್ಲಿ ಹೊಸ ಕೊರೋನಾ ರೂಪಾಂತರಿತ ಎಕ್ಸ್ ಇ ಕಂಡುಬಂದಿದೆ ಮತ್ತು ಇದು ಕೊರೋನಾ ದ ಬಿಎ.2 ಉಪವರ್ಗಕ್ಕಿಂತ ಹೆಚ್ಚು ಹರಡಬಹುದು ಎಂದು ಹೇಳಿದೆ . ಈ ನಡುವೆ ಗುಜರಾತ್ ನಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾವೈರಸ್ ರೂಪಾಂತರ ಎಕ್ಸ್ ಇ ಸೋಂಕಿಗೆ ಒಳಗಾಗಿದ್ದಾನೆ ಎಂದು ವರದಿಯಾಗಿದೆ.
ಕೊರೋನಾ ರೂಪಾಂತರಿ ಎಕ್ಸ್ ಇ ಭಾರತದಲ್ಲಿ ಮೊದಲು ಮುಂಬೈನಲ್ಲಿ ದಾಖಲಾಗಿದೆ ಎನ್ನಲಾಗಿತ್ತು. ಇದೀಗ ಗುಜರಾತ್ ನಲ್ಲಿ ಎಕ್ಸ್ ಇ ರೂಪಾಂತರಿಯ ಇನ್ನೊಂದು ಕೇಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಎಕ್ಸ್ ಇ ಒಮಿಕ್ರಾನ್ ನ ಉಪ ರೂಪಾಂತರಿಯಾಗಿದೆ. ವಡೋದರಾದ ಗೋತ್ರಿ ಎಂಬ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದೆ ಎನ್ನಲಾಗಿದೆ.