Friday, February 6, 2026
Friday, February 6, 2026

ನಾವು ಮಂಡ್ಯದಲ್ಲಿ ಸೌಹಾರ್ದದಿಂದ್ದೇವೆ ಮುಸ್ಕಾನ್ ತಂದೆ ಹುಸೇನ್ ಖಾನ್ ಪ್ರತಿಕ್ರಿಯೆ

Date:

ಹಿಜಾಬ್‌ ವಿವಾದದ ಪ್ರತಿಭಟನೆ ನಡೆಯುವ ವೇಳೆ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಭಾರೀ ಸುದ್ದಿ ಮಾಡಿದ್ದಳು. ಆಕೆಯ ಹೆಸರು ಮುಸ್ಕಾನ್.

ಇದೀಗ ಇದೇ ವಿದ್ಯಾರ್ಥಿನಿ ಹೆಸರು ಮತ್ತೆ ಸುದ್ದಿಯಲ್ಲಿದೆ. ಅದು ಜಗತ್ತಿನ ಮೋಸ್ಟ್ ವಾಟೆಂಡ್‌ ಉಗ್ರ ಸಂಘಟನೆ ಆಲ್ ಖೈದಾದ ಉಗ್ರನೊಬ್ಬ ಈ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹಾಡಿ ಹೊಗಳಿದ್ದಾರೆ. ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದೇ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.

ಅಲ್ ಖೈದಾ ಉಗ್ರನ ಹೇಳಿಕೆಗೆ
ಮಂಡ್ಯದಲ್ಲಿ ಮೊಳಗಿದ “ಜೈ ಶ್ರೀರಾಮ್” ಎಂಬ ಘೋಷಣೆಗೆ ಪ್ರತಿಯಾಗಿ “ಅಲ್ಲಾಹು ಅಕ್ಬರ್” ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು, ಮುಸ್ಲಿಂ ರಾಜಕಾರಣಿಗಳು ಲಕ್ಷ ಲಕ್ಷ ಬಹುಮಾನ ನೀಡಿದ್ದರು.

ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾರೆ. 9 ನಿಮಿಷಗಳ ವಿಡಿಯೋದಲ್ಲಿ “ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್‌ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.

ಇನ್ನು ಉಗ್ರನ ಹೇಳಿಕೆ ಬಗ್ಗೆ ವಿದ್ಯಾರ್ಥಿನಿ ತಂದೆ ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್‌ಖೈದಾ ಏನು ಅಂತ ನಮಗೆ ಗೊತ್ತಿಲ್ಲ. ಮಾಧ್ಯಮದ ಮೂಲಕವೇ ನನಗೂ ಗೊತ್ತಾಗಿದ್ದು. ಈ ರೀತಿ ಮಾಡುತ್ತಿರುವುದು ತಪ್ಪು. ನಮ್ಮ ನಮ್ಮಲ್ಲಿ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮುಸ್ಕಾನ್‌ ತಂದೆ ಹುಸೇನ್‌ ಖಾನ್‌ ಹೇಳಿದ್ದಾರೆ.

ನಮಗೆ ಅವರು ಯಾರು ಅಂತಾನೇ ಗೊತ್ತಿಲ್ಲ. ನಾವು ಅವರ ಬಗ್ಗೆ ಏನು ಹೇಳೋದು? ಇದೇ ಫಸ್ಟ್ ಟೈಮ್ ನಾವು ನೋಡಿದ್ದು ಅವರನ್ನು. ಅವರು ಏನೋ ಏನೋ ಮಾತನಾಡ್ತಾರೆ. ನಾವು ಮಂಡ್ಯದಲ್ಲಿ ಹಿಂದೂ ಮುಸ್ಲಿಮರು ಅಣ್ಣ-ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದೇವೆ. ಈ ವಿಚಾರವಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.

ಈ ರೀತಿಯ ಘಟನೆಗಳು ಕುಟುಂಬದಲ್ಲಿ ಶಾಂತಿಯನ್ನು ಹದಗೆಡಿಸುತ್ತದೆ. ಅಲ್ ಖೈದಾ ಉಗ್ರ ಸಂಘಟನೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ರೀತಿಯ ತನಿಖೆಯನ್ನು ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಉಗ್ರ ಸಂಘಟನೆ ಮುಖ್ಯಸ್ಥನ ವಿಡಿಯೋ ಬಗ್ಗೆ ನಮಗೆ ಏನು ತಿಳಿದಿಲ್ಲ. ಇದೇ ಮೊದಲ ಬಾರಿಗೆ ಮುಸ್ಕಾನ್ ಬಗ್ಗೆ ಅಲ್ ಖೈದಾ ಉಗ್ರ ಸಂಘಟನೆ ಮಾತನಾಡಿರುವ ವಿಡಿಯೋ ನೋಡುತ್ತೇವೆ. ಅರೇಬಿಕ್ ನಲ್ಲಿ ಅವರೇನೋ ಹೇಳಿದ್ದಾರೆ. ಭಾರತದಲ್ಲಿ ನಾವೆಲ್ಲರೂ ನಂಬಿಕೆ, ಭ್ರಾತೃತ್ವದಲ್ಲಿ ನೆಲೆಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...