ಅಮೆರಿಕದ ಪ್ರಸಿದ್ಧ ಚಿಪ್ ಮೇಕರ್ ಕಂಪನಿಯಾದ ಇಂಟೆಲ್ ಕಾರ್ಪೊರೇಷನ್ ರಷ್ಯಾದಲ್ಲಿ ತನ್ನ ವಹಿವಾಟನ್ನು ಸ್ಥಗಿತಗೊಳಿಸಿರೋದಾಗಿ ಘೋಷಿಸಿದೆ.
ಈ ಮೂಲಕ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾದಿಂದ ಗಂಟುಮೂಟೆ ಕಟ್ಟಿಕೊಂಡು ಹೊರಬಂದ ಕಂಪನಿಗಳ ಸಾಲಿಗೆ ಸೇರಿಕೊಂಡಿದೆ ಇಂಟೆಲ್.
ಜೊತೆಗೆ ರಷ್ಯಾ ಆಕ್ರಮಣವನ್ನ ಖಂಡಿಸುವ ಕಂಪನಿಗಳ ಪಟ್ಟಿಗೆ ಸೇರಿದೆ. ಕಳೆದ ತಿಂಗಳಷ್ಟೇ ರಷ್ಯಾ ಮತ್ತು ಅದರ ಫ್ರೆಂಡ್ ಬೆಲಾರುಸ್ನಲ್ಲಿರೋ ಗ್ರಾಹಕರಿಗೆ ಚಿಪ್ ಕೊಡೋದನ್ನ ನಿಲ್ಲಿಸಿರೋದಾಗಿ ಕಂಪನಿ ಹೇಳಿಕೊಂಡಿತ್ತು. ಇದೀಗ ರಷ್ಯಾದಲ್ಲಿ ವಹಿವಾಟನ್ನು ಬಂದ್ ಮಾಡಿದೆ. ಇತ್ತೀಚೆಗೆ ಐಬಿಎಂ ಕೂಡ ರಷ್ಯಾಗೆ ತನ್ನ ಶಿಪ್ಮೆಂಟ್ಸ್ ಸ್ಥಗಿತಗೊಳಿಸಿತ್ತು.
ರಷ್ಯಾದ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಪಡಿಸಿರೋ ತಂತ್ರಜ್ಞಾನದ ಮೇಲೆ ದೀರ್ಘಕಾಲದಿಂದ ಡಿಪೆಂಡ್ ಆಗಿವೆ.
ಐಬಿಎಂ, ಡೆಲ್ ಟೆಕ್ನಾಲಜೀಸ್ ಮತ್ತು ಹೆಚ್ಪಿ ಎಂಟರ್ಪ್ರೈಸಸ್ನ ಸರ್ವರ್ಗಳು ರಷ್ಯಾದ ಮಾರ್ಕೆಟ್ನಲ್ಲಿ ಟಾಪ್ ಆಗಿವೆ. ಆದ್ದರಿಂದ, ಅಮೆರಿಕದ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸಾಫ್ಟ್ವೇರ್ ಕಂಪನಿಗಳು ರಷ್ಯಾ ಜೊತೆಗಿನ ಸಂಬಂಧವನ್ನ ಕಟ್ ಮಾಡಬೇಕು ಅಂತ ಉಕ್ರೇನ್ ಆಗ್ರಹಿಸುತ್ತಾ ಬಂದಿದೆ.