ಈಗೀಗ ಎಲ್ಲರಿಗೂ ,ಎಲ್ಲವಕ್ಕೂ ಒಂದು ದಿನವನ್ನ ಆಚರಿಸುವ ರೂಢಿ ಬಂದಿದೆ. ಏನಿಲ್ಲ ಅಂದರೂ ಆವತ್ತೊಂದು ದಿನ ಅವರ,ಅದರ ಬಗ್ಗೆ ಒಂದಿಷ್ಟು
ಹೊತ್ತು ಮಾತಾಡುವುದು . ಒಂದು ಸಮಾರಂಭ ಏರ್ಪಡಿಸುವುದು ಸರ್ವೇಸಾಮಾನ್ಯ ಸಂಗತಿ.
ನಮ್ಮ ನಿಮ್ಮ ಗಮನ ಈಗ ಹೊರಳಬೇಕಾದದ್ದು ನಮಗೆಲ್ಲಾ ಪ್ರೀಯವಾದ ತಿಂಡಿ ಪದಾರ್ಥ ಇಡ್ಲಿ ಬಗ್ಗೆ.
2015 ರಲ್ಲಿ ಚೆನೈನ ಬಾಣಸಿಗ ಎನಿಯವನ್ ಎಂಬ ಮಹಾನುಭಾವ ಈ ಇಡ್ಲಿಗೆ ಒಂದು ದಿನ ಇರಲಿ ಎಂದು ಆಚರಣೆ ಶುರುಮಾಡಿದನಂತೆ.ಆತ ಸಾಮಾನ್ಯ ಅಂದುಕೋ ಬೇಡಿ.ಇಡ್ಲಿಯ ವೆರೈಟಿಯಲ್ಲೇ ಸು 1328 ತರಹ ಇಡ್ಲಿ ಬೇಯಿಸಿ ತೋರಿಸಿದ ಭೂಪ.
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ,ನಾಲಗೆ ಪ್ರಿಯ ತಿಂಡಿ ಅಂದರೆ
ಇಡ್ಲಿ ಸಾಂಬಾರ್. ಎಂತಹ ಆರೋಗ್ಯದ ತೊಂದರೆ ಇರಲಿ ಸಾಮಾನ್ಯವಾಗಿ ವೈದ್ಯರು ಸೂಚಿಸುವುದು ಇಡ್ಲಿ ತಿನ್ನಿ ಪರವಾಗಿಲ್ಲ.ಏಕೆಂದರೆ ಎಣ್ಣೆ, ಬೆಣ್ಣೆ ರಹಿತ
ಕೇವಲ ಆವಿಯಲ್ಲೇ ಬೇಯುತ್ತದೆ. ಅದರ ಮೃದುತ್ವ ಮಧುರತೆ ತಿನ್ನುವವರೇ ಹೇಳಬೇಕು.
ಬಗೆಬಗೆಯ ಇಡ್ಲಿ ಮಾಡುವ ಕಲಾವಂತ ಬಾಣಸಿಗರೂ ಈಗ ಎಲ್ಲ ಕ್ಯಾಂಟೀನ್ ,ರೆಸ್ಟುರಾ ಗಳಲ್ಲಿ ಸಿಗುತ್ತಾರೆ. ಯಾರೇ ಆಗಿರಲಿ ಸ್ವಯಂ ಉದ್ಯೋಗದ ಕ್ಯಾಂಟೀನ್ ತೆರೆದರೆ ಅಲ್ಲಿ ಇಡ್ಲಿ ಬಿಟ್ಟು ಬೇರೆ ಏನೂ ಆರಂಭದಲ್ಲಿ ಮಾಡುವುದಿಲ್ಲ. ಇಡ್ಲಿ ಸಾಂಬಾರ್ ತಯಾರಿಸಿದರೇ ಮಾತ್ರ ಗಿರಾಕಿಗಳು
ಬರುವುದು. ಈ ದೃಶ್ಯ ನಮ್ಮಲ್ಲಿ ಸಾಮಾನ್ಯ.
ಏನೇ ಆಗಲಿ ಇಡ್ಲಿಗೆ ಅಂತ ಒಂದು ದಿನ ಆಚರಣೆಗೆ ಮೀಸಲಿಟ್ಟರಲ್ಲ
ಆ ಮಹಾಶಯ ಎನಿಯವನ್ ಗೆ ನಮೋನಮಃ.