Sunday, October 6, 2024
Sunday, October 6, 2024

ಸ್ನೇಹ ಮಾಡಬೇಕೆ? ಕೆಲವು ಟಿಪ್ಸ್ ಇಲ್ಲಿವೆ ನೋಡಿ

Date:

ಮನುಷ್ಯ ಜೀವನವೇ ವಿಚಿತ್ರ. ಜೀವನದಲ್ಲಿ ಯಾರು ಯಾವಾಗ ಯಾವ ಸಮಯದಲ್ಲಿ ಇಷ್ಟ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ಅದರಲ್ಲೂ ಈ ಪ್ರೀತಿ ಅಥವಾ ಸ್ನೇಹದ ವಿಷಯಕ್ಕೆ ಬಂದ್ರೆ ಅದು ಹೇಗೆ ಶುರುವಾಯ್ತು ಅಂತ ಹೇಳೋದೇ ಕಷ್ಟ. ಆದರೆ ಒಪ್ಪಿಕೊಂಡ ಸ್ನೇಹವಿರಲಿ ಪ್ರೀತಿಯಿರಲಿ ಅದನ್ನ ಕೊನೆವರೆಗೂ ಉಳಿಸಿಕೊಳ್ಳೋದು ಒಂದು ದೂಡ್ಡ ಸವಾಲೇ ಸರಿ.

ಒಂದು ಚೂರು ಹೆಚ್ಚು ಕಮ್ಮಿ ಆದ್ರೂ ಅದ್ಭುತವಾಗಿರುವ ಒಂದು ಸಂಬಂಧನೇ ಮುರಿದು ಬೀಳುವ ಸಾಧ್ಯತೆಗಳಿರುತ್ತೆ. ಹಾಗಾಗಿ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು.

ಯಾವುದೇ ಸಂಬಂಧವಿರಲಿ ಅಥವಾ ಸ್ನೇಹವಿರಲಿ ಅದರಲ್ಲಿ ನಾವು ಒಪ್ಪಿಕೊಳ್ಳಬೇಕಾದಂತ ಅಂಶಗಳಿವೆ.

ಅದನ್ನ ಅರ್ಥ ಮಾಡಿಕೊಂಡು ಮುಂದುವರೆದರೆ ಯಾವುದೇ ಸಂಬಂಧ ಅಥವಾ ಸ್ನೇಹದಲ್ಲಿ ವಿಶ್ವಾಸದಿಂದ ಇರಬಹುದಾಗಿದೆ.
ಕುಟುಂಬದವರನ್ನ ಹೊರತುಪಡಿಸಿ ಸ್ನೇಹಿತರಿಗೆ ತುಂಬಾ ಹತ್ತಿರದವರಾಗಿರುತ್ತೇವೆ. ಮನುಷ್ಯ ಜೀವನದಲ್ಲಿ ಅಪ್ಪ,ಅಮ್ಮ ಅಣ್ಣ ತಂಗಿ ಮತ್ತು ತಮ್ಮ ಸಂಬಂಧಿಕರ ಸಂಬಂಧ ಹುಟ್ಟಿದಾಗಿನಿಂದಲೇ ಜೊತೆಗೂಡಿ ಬರುತ್ತದೆ. ಆದರೆ ಜೀವನದ ಬಹುಮುಖ್ಯ ಸಂಬಂಧವಾದ ಸ್ನೇಹವು ನಮ್ಮ ಆಯ್ಕೆಗೆ ಸೀಮಿತ. ಒಳ್ಳೆಯ, ಕೆಟ್ಟ ಸ್ನೇಹಿತರ ಸಂಗ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತೆ.

ಒಳ್ಳೆಯ ಸ್ನೇಹ ಪ್ರೀತಿಯನ್ನು ಬಯಸದವರು ಬಹುಶಃ ಈ ಜಗತ್ತಿನಲ್ಲಿಯೇ ಯಾರೂ ಇಲ್ಲ.
ಹಾಗಾಗಿ ಸ್ನೇಹಕ್ಕೆ ಸಂಬಂಧಪಟ್ಟ ಹಲವಾರು ವಿಷಯಗಳನ್ನ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದು ಉತ್ತಮ.

ಪರಿಪೂರ್ಣ ಸ್ನೇಹ ಎಂದಿಗೂ ಅಸ್ತಿತ್ವದಲ್ಲಿಲ್ಲ.
ಒಬ್ಬ ಮನುಷ್ಯ ಪರಿಪೂರ್ಣ ಎಂದು ಎಂದಿಗೂ ಹೇಳಲು ಸಾಧ್ಯವಿಲ್ಲ. ಸ್ನೇಹದಲ್ಲಿ, ಸ್ನೇಹಿತರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ನಮ್ಮ ಸ್ನೇಹಕ್ಕೇ ಕುತ್ತಾಗಬಹುದು. ಹಾಗಾಗಿ ನಿಮ್ಮ ಸ್ನೇಹಿತರನ್ನು ಅವರು ಇರುವ ರೀತಿಯಲ್ಲಿಯೇ ಅವರನ್ನು ಸ್ವೀಕರಿಸುವುದು ಉತ್ತಮ.

ನಿಮ್ಮ ಸ್ನೇಹಿತರ ನ್ಯೂನತೆಗಳು ಮತ್ತು ಅಪೂರ್ಣತೆಗಳನ್ನು ಎತ್ತಿ ತೋರಿಸುವುದರ ಬದಲು ಅವರು ಒಬ್ಬ ಉತ್ತಮ ವ್ಯಕ್ತಿಯಾಗಲು ನೀವು ಅವರಿಗೆ ಸಹಾಯ ಮಾಡಬಹುದು.

ನಮಗೆ ನಮ್ಮ ಕುಟುಂಬದವರನ್ನ ಹೊರತುಪಡಿಸಿ ಸ್ನೇಹಿತರಿಗೆ ತುಂಬಾ ಹತ್ತಿರದವರಾಗಿರುತ್ತೇವೆ. ಕುಟುಂಬದವರ ಹತ್ತಿರ ಹೇಳಿಕೊಳ್ಳಲಾಗದ ಅದೆಷ್ಟೋ ವಿಷಯಗಳನ್ನ ನಾವು ಸ್ನೇಹಿತರ ಹತ್ತಿರ ಹೇಳಿಕೊಳ್ಳುತ್ತೇವೆ.

ಯಾರನ್ನಾದರೂ ಅತಿಯಾಗಿ ಹಚ್ಚಿಕೊಂಡಾಗ ಕೆಲವೊಮ್ಮೆ ನೋವುಂಟಾಗುವುದು ಸಹಜ. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾತಂತ್ರ್ಯ, ಸ್ಪೇಸ್ ಕೊಡಬೇಕಾಗುತ್ತದೆ. ನಿಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಅಥವಾ ಸಂಗಾತಿ ನಿಮ್ಮನ್ನು ಬಿಟ್ಟು ಬೇರೆ ಸ್ನೇಹಿತರನ್ನೂ ಹೊಂದಿರಬಹುದು. ಅವರು ಆ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು, ಅವರೊಂದಿಗೆ ಮಾತಿಗೆ ನಿಲ್ಲಬಹುದು.
ಆದರೆ ನೀವು ಇದನ್ನು ಸಹಿಸದೇ ಇದ್ದರೆ ಅಥವಾ ನಿಮ್ಮನ್ನು ಹೊರತಾಗಿಯೂ ಅವರಿಗೆ ಬೇರೊಬ್ಬರ ಸ್ನೇಹವಿದೆ ಎಂಬ ಸತ್ಯವನ್ನು ಅರಿತುಕೊಳ್ಳದಿದ್ದರೆ ಸಮಸ್ಯೆಯಾಗುವುದು ಖಂಡಿತ. ಈ ಬಗ್ಗೆ ಅಸೂಯೆ ಪಟ್ಟುಕೊಳ್ಳದೇ, ಅಥವಾ ಸ್ನೇಹಿತೆ/ಸ್ನೇಹಿತ ಬಿಟ್ಟು ಹೋಗಬಹುದು ಎಂಬ ಅಸುರಕ್ಷಿತ ಭಾವನೆಯನ್ನು ಬೆಳೆಸಿಕೊಳ್ಳದೆ ಸಂಗತಿಯನ್ನು ಹಾಗೆಯೇ ಒಪ್ಪಿಕೊಂಡರೆ ಅವರ ವೈಯಕ್ತಿಕ ಜೀವನವನ್ನು ಗೌರವಿಸುವುದು ಸೂಕ್ತ.

ಸ್ನೇಹದಲ್ಲಿ ಜಗಳಗಳು, ಮುನಿಸು ಉಂಟಾದಾಗಲೇ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಹಾಗಂತ ಅದು ಅತಿರೇಕಕ್ಕೆ ಹೋಗುವುದೂ ಸರಿಯಲ್ಲ.

ಸಾಕಷ್ಟು ಸಲ ಪರಸ್ಪರ ಒಬ್ಬರನ್ನೊಬ್ಬರು ಒಪ್ಪದಿರಬಹುದು. ಇದರಿಂದ ನಿಮಗೆ ನಿಮ್ಮ ಸ್ನೇಹಿತರ ಮೇಲೆ ಕಿರಿಕಿರಿ ಉಂಟಾಗಬಹುದು ಆದರೆ ಯಾವುದೇ ಮನುಷ್ಯನು ಪರಿಪೂರ್ಣನಲ್ಲ ಎಂಬುದನ್ನು ಮೊದಲು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಸ್ನೇಹಿತರನ್ನು ಬದಲಾಯಿಸಲು ಪ್ರಯತ್ನಿಸುವ ಬದಲು, ಜೀವನದ ಬಗ್ಗೆ ಹೊಸ ಮತ್ತು ಉತ್ತಮ ದೃಷ್ಟಿಕೋನವನ್ನು ಬೆಳೆಸಲು ನೀವು ಅವರಿಗೆ ಸಹಾಯ ಮಾಡಬಹುದು. ನಿಮ್ಮ ಸ್ನೇಹದಲ್ಲಿ ಅತೀ ಮುಖ್ಯವಾದುದು ನೀವು ಪರಸ್ಪರ ಒಪ್ಪಿಕೊಂಡು ಮುಂದುವರೆಯುವುದು.

ಪ್ರತಿಯೊಬ್ಬರೂ ಶಾಶ್ವತವಾಗಿ ಉಳಿಯುವುದಿಲ್ಲ
ಇದನ್ನು ನಾವು ಮೊದಲು ಅರಿತುಕೊಳ್ಳಬೇಕು. ನಿಮ್ಮ ಜೀವನದಲ್ಲಿ ನೀವು ಅನೇಕ ಜನರನ್ನು ಭೇಟಿ ಮಾಡುತ್ತೀರಿ, ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತೀರಿ. ಆದರೆ ಅವರು ಎಂದೆಂದಿಗೂ ನಿಮ್ಮ ಜೊತೆಯಲ್ಲಿಯೇ ಇರಬೇಕೆಂದೇನೂ ಇಲ್ಲ.
ಕೆಲವೊಮ್ಮೆ ವಿಷಯಗಳು ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕೈತಪ್ಪಿ ಹೋಗಬಹುದು ಅಥವಾ ನಿಮ್ಮ ಸ್ನೇಹಿತರೊಂದಿಗೆ ಇನ್ನು ಮುಂದೆ ಸಂಪರ್ಕ ಇಟ್ಟುಕೊಳ್ಳದಂತ ಸ್ಥಿತಿ ನಿರ್ಮಾಣವಾಗಬಹುದು. ಅದಕ್ಕೆಲ್ಲಾ ಮೊದಲೇ ತಯಾರಿರಬೇಕು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ನಗು, ನಾಳೆ ದುಃಖ. ಎರಡನ್ನೂ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ, ಬದುಕು ಉಲ್ಲಾಸಮಯ.

ನಿಮಗೆ ಒಬ್ಬರು ಅಥವಾ ಇಬ್ಬರು ಸ್ನೇಹಿತರು ಇದ್ದರೂ ಸಾಕು, ನಿಮ್ಮ ಜೀವನ ಸಂತೋಷದಿಂದ ಕೂಡಿರಬಹುದು! ಹೊಂದಾಣಿಕೆಯಾಗದ ಮತ್ತು ನಕಲಿ ಸ್ನೇಹಿತರ ಒಂದು ಸೈನ್ಯವನ್ನೇ ಹೊಂದಿರುವುದಕ್ಕಿಂತ ಬೆರಳೆಣಿಕೆಯಷ್ಟು ವಿಶ್ವಾಸಾರ್ಹ ಸ್ನೇಹಿತರನ್ನು ಉಳಿಸಿಕೊಳ್ಳುವುದು ಉತ್ತಮ.

ಕೆಲವು ಸ್ನೇಹಿತರು ತಮ್ಮ ಕೆಟ್ಟ ಸ್ವಭಾವದೊಂದಿಗೆ ನಿಮ್ಮಲ್ಲಿರುವ ಸಕಾರಾತ್ಮಕ ಭಾವನೆಯನ್ನು ಹಾಳುಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಸಂತೋಷದ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಮ್ಮ ಸಮಯ ಮತ್ತು ಭಾವನೆಗಳನ್ನು ಅರ್ಥಪೂರ್ಣ ಸಂಬಂಧದಲ್ಲಿ ಕಳೆಯುವುದು ಒಳ್ಳೆಯದು.

ಎಲ್ಲರೊಂದಿಗಿನ ಬಂಧಗಳು ಒಂದೇ ರೀತಿ ಇರುವುದಿಲ್ಲ
ನಿಮ್ಮ ಜೀವನದುದ್ದಕ್ಕೂ ನೀವು ನಿಮ್ಮ ಪ್ರತಿಯೊಬ್ಬ ಸ್ನೇಹಿತರೊಂದಿಗೆ ಒಂದೇ ರೀತಿಯ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಬೆಳೆದು ಪ್ರಬುದ್ಧರಾದಂತೆ, ಅಗತ್ಯವಿಲ್ಲದ ಗಾಸಿಪ್ ಮಾತುಗಳನ್ನಾಡುವ ಸ್ನೇಹಿತರಿಗಿಂತ ಕೆಲವು ಅರ್ಥಪೂರ್ಣ ಜನರನ್ನು ನೀವು ಹುಡುಕಬಹುದು. ಅಥವಾ ನಿಮ್ಮ ಬಾಲ್ಯದಲ್ಲಿ ಅಥವಾ ನಿಮ್ಮ ಕಾಲೇಜು ದಿನಗಳಲ್ಲಿ ನಡೆದ ಸಂಗತಿಗಳ ಬಗ್ಗೆ ಮಾತನಾಡಲು ನಿಮಗೆ ಇಷ್ಟವಿಲ್ಲದಿರಬಹುದು. ದಿನಕಳೆದಂತೆ ನಿಮ್ಮ ಆಯ್ಕೆಗಳು ಭಿನ್ನವಾಗಿ, ನೀವು ಒಮ್ಮೆ ಹೊಂದಿದ್ದಂತಹ ನಿಕಟತೆಯನ್ನು ಮತ್ತೆ ಹೊಂದಲು ಸಾಧ್ಯವಾಗದೇ ಹೋಗಬಹುದು.

ಜೀವನವು ಸಾಕಷ್ಟು ಅನಿರೀಕ್ಷತೆಯನ್ನು ಒಳಗೊಂಡಿರುತ್ತದೆ. ನಿಮ್ಮ ಜೀವನದಲ್ಲಿ ಪಡೆಯಬೇಕೆಂದುಕೊಂಡಿರುವ ಜನರು ನಿಮ್ಮೊಂದಿಗೆ ಇರಲು ಖಂಡಿತವಾಗಿಯೂ ಒಂದಿಲ್ಲೊಂದು ಮಾರ್ಗ ದೊರೆತೇ ದೊರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.

ಪರಿಪೂರ್ಣ ಸ್ನೇಹವನ್ನು ಹೊಂದುವ ಕಲ್ಪನೆಯೊಂದಿಗೆ ನೀವು ಕಳೆದುಹೋಗಬೇಡಿ. ಇಲ್ಲದ ಸ್ನೇಹದ ಹುಡುಕಾಟದಲ್ಲಿ ಕಳೆದ ವರ್ಷಗಳನ್ನು ಎಣಿಸಬೇಡಿ, ಬದಲಿಗೆ ಉತ್ತಮ ಸ್ನೇಹವನ್ನು ನಿಮ್ಮದಾಗಿಸಿಕೊಳ್ಳಿ.

ನೀವು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತ ಸಿಹಿ ನೆನಪುಗಳು ಖಂಡಿತವಾಗಿಯೂ ನಿಮ್ಮದಾಗಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...