Friday, October 4, 2024
Friday, October 4, 2024

ಆರಕ್ಕೇರದ ಮೂರಕ್ಕಿಳಿಯದ …!

Date:

3 ದಿನಗಳ ಹಿಂದೆ ಗೆಳತಿಯ ಮನೆಗೆ ಹೋಗಿದ್ದೆ. ಅಲ್ಲಿ ನನ್ನ ಪರಿಚಯಸ್ತ ಸಾವಿತ್ರಿ ಆಂಟಿ ಜೊತೆ ಪಕ್ಕದ ಮನೆಯ ಆಂಟಿಯೊಬ್ಬರು ಮಾತನಾಡುತ್ತಿದ್ದರು. ಅಪರೂಪಕ್ಕೊಮ್ಮೆ ಗೆಳತಿಯರು ಸಿಕ್ಕರೆ ಮಾತಿಗೆ ಏನು ಭಾರವೇ?
ಊಟ ತಿಂಡಿ ಮನೆ ಕೆಲಸದ ವಿಷಯ ಮಾತನಾಡುತ್ತಾ, ಮಾತು ಮಕ್ಕಳೆಡೆಗೆ ತಿರುಗಿತು.
ಏನ್ರಿ ನಿಮ್ಮ ಮಗ ಕಂಪನಿ ಸೆಕ್ರೆಟರಿ ಆಗಿ ಆಯ್ಕೆಯಾಗಿ ಕೆಲಸಕ್ಕೆ ಸೇರಿದ್ದು ನೆನಪಾಯಿತು. ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಸ್ಯಾಲರಿ ಯು ತುಂಬಾ ಚೆನ್ನಾಗಿಯೇ ಬರ್ತಾ ಇದೆ ಏನೋ. ನೀವಂತೂ ಮಸ್ತ್ ಮಜಾ ಮಾಡಬಹುದು ಎಂದರು.
ಆಗ ಸಾವಿತ್ರಿ ಆಂಟಿ ಬೇಸರದಿಂದ ಮಗನಿಗೆ ಒಳ್ಳೆಯ ಸಂಬಳ ಬರುತ್ತಿದೆ ನಿಜ. ಆದರೆ ಅವನ ಸಂಸಾರದ್ದೇ ಖರ್ಚು ಜಾಸ್ತಿ ಇರುತ್ತದೆ. ಹಾಗಾಗಿ ನಾವು ಕೇಳೋಕೆ ಹೋಗಲ್ಲ. ಅವನಿಗೆ ಕೊಡಬೇಕು ಎಂದು ಎನಿಸಿದರೂ ಹಲವಾರು ಖರ್ಚುಗಳ ಸರಮಾಲೆ. ಅವನದ್ದು ಅವನಿಗೆ, ನಮ್ಮದು ನಮಗೆ..ಎಂದರು. ಅವರು ಹೇಳಿದ್ದು ನೋಡಿ ಅಯ್ಯೋ ಪಾಪ ಎನಿಸಿತು…

ಸುಮ್ಮನೆ ಯೋಚಿಸಿ ನೋಡಿದರೆ, ಸುಮಾರು ಎಲ್ಲಾ ಮಧ್ಯಮ ವರ್ಗದವರ ಕಥೆ ಇದೇ ಆಗಿರುತ್ತದೆ. ಆರಕ್ಕೆ ಏರದ ಮೂರಕ್ಕಿಳಿಯದ ಸಂಸಾರದಲ್ಲಿ ಜೀವನ ಸಾಗಿಸುತ್ತಾರೆ. ಇರುವ ಒಂದೋ ಎರಡೋ ಮಕ್ಕಳನ್ನು ಪ್ರೀತಿಯಿಂದ ಸಾಕಿ, ಯಾವುದೇ ಕಷ್ಟಕೋಟಲೆಗಳು ಗೊತ್ತಾಗದಂತೆ ಮಾಡುತ್ತಾರೆ.
ಮಕ್ಕಳು ಚೆನ್ನಾಗಿ ಬೆಳೆಯಲಿ , ಚೆನ್ನಾಗಿ ಓದಲಿ ಎಂದು ಕಷ್ಟವಾದರೂ ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಾರೆ.

ತಾವು ಹತ್ತು ರೂಪಾಯಿ ಖರ್ಚು ಮಾಡುವಾಗ ಹತ್ತು ಸಲ ಯೋಚಿಸುವವರು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ.
ಪ್ರತಿ ಪೈಸೆ ಪೈಸೆಗೂ ಲೆಕ್ಕಹಾಕಿ ಜೀವನ ಸಾಗಿಸುವ ಪಾಲಕರು ಸಾವಿರಾರು ಮಂದಿ.

10ನೇ ತರಗತಿ ಮುಗಿಯುತ್ತಿದ್ದಂತೆ ತಮ್ಮ ಮಕ್ಕಳನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹರಸಾಹಸ ಪಡುತ್ತಾರೆ. ಡೊನೇಷನ್ ಸೀಟು ಸಿಕ್ಕರಂತೂ ಮುಗಿಯಿತು . ಯಾವ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತೆ ಅಂತ ಕುತ್ತಿಗೆ ಉದ್ದ ಮಾಡಿಕೊಂಡು ಹುಡುಕುತ್ತಾರೆ.
ಮಗ ಅಥವಾ ಮಗಳು ಕಾಲೇಜಿಗೆ ಸೇರಿ ಓದು ಮುಗಿಸುವಷ್ಟರಲ್ಲಿ ಪ್ರತಿ ಸೆಮಿಸ್ಟರ್ ಫೀಸ್ ಕಟ್ಟುತ್ತಾ ನಿಟ್ಟುಸಿರು ಬಿಡುತ್ತಾರೆ. ಇನ್ನು ಒಂದೇ ವರ್ಷ,, ಇನ್ನು ಆರೇ ತಿಂಗಳು ಎಂದು ಮಕ್ಕಳು ಕೆಲಸಕ್ಕೆ ಸೇರುವುದನ್ನು ನೋಡಬೇಕು ಎಂಬ ಮಹಾದಾಸೆಯನ್ನು ಮನಸ್ಸಿನಲ್ಲಿಯೇ ಬಚ್ಚಿಡುತ್ತಾರೆ.
ಮಗ ಅಥವಾ ಮಗಳು ಓದು ಮುಗಿಸುವಷ್ಟರಲ್ಲಿ ಎಷ್ಟು ಖರ್ಚು ಬರಬಹುದು ಎಂದು ಇದ್ದ ಒಂದೇ ಒಂದು ಚಿನ್ನದ ಸರವನ್ನೂ ಗಿರವಿ ಇಡುತ್ತಾ ಹೇಗ್ಹೇಗೋ ಜೀವನ ನಿಭಾಯಿಸುವವರಿಗೆ ಮಕ್ಕಳಿಗೆ ಒಂದು ನೌಕರಿ ಅಂತ ಆದ ಮೇಲೆ ಸರಿಯಾಗಿ ಉಸಿರಾಡುತ್ತಾರೆ.

ಮಕ್ಕಳಿಗೆ ಕೆಲಸ ಸಿಕ್ಕ ಒಂದೆರಡು ವರ್ಷದ ಸಂಬಳ ಬ್ಯಾಂಕ್ ಲೋನ್ ಕಟ್ಟುವುದಕ್ಕಾಯ್ತು. ಹೆಣ್ಣು ಮಕ್ಕಳಾದರೆ ಬಂಗಾರ, ಒಂದಷ್ಟು ಒಳ್ಳೆದಾಯಿತು. ಗಂಡುಮಕ್ಕಳಿಗೊ ಮುಂದಿನ ಭವಿಷ್ಯದ ಚಿಂತೆ. ಮದುವೆಯಾದರಂತೂ ಮುಗೀತು. ಅಗತ್ಯಕ್ಕೆ ತಕ್ಕಂತೆ ಬೈಕ್, ಫ್ರಿಜ್, ವಾಷಿಂಗ್ ಮಷೀನ್ ಮುಂತಾದ ಸಾಮಾನುಗಳನ್ನು ಖರೀದಿಸುವುದು.
ಈಗಿನ ಆಧುನಿಕ ಕಾಲದ ಅವಶ್ಯಕತೆಗಳಂತೂ ಹೆತ್ತವರಿಗಿಂತ ಭಿನ್ನ. ಪ್ರೆಸ್ಟೀಜ್, ಸ್ಟೇಟಸ್, ಲೆವೆಲ್ ಎನ್ನುವ ಜನ.
ಮನೆ ಬಾಡಿಗೆಯದಾದರೂ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿಯೇ ಇರಬೇಕು. ಒಳ್ಳೆಯ ಕಂಪನಿ ಲ್ಯಾಪ್ಟಾಪ್, ಮೊಬೈಲ್ ,ಬೈಕ್ ಇರಲೇಬೇಕು.

ಕಾರು, ಸ್ವಂತ ಮನೆ ಮಕ್ಕಳಿಗೆ ಒಳ್ಳೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ, ಕುಟುಂಬದವರೊಂದಿಗೆ ವಿದೇಶ ಪ್ರವಾಸ, ಇವೆಲ್ಲವೂ ಮುಂದಿನ ಬೇಡಿಕೆಗಳು.
ತನ್ನನ್ನು ಆ ಮಟ್ಟಕ್ಕೆ ಬೆಳೆಸುವಲ್ಲಿ ಹೆತ್ತವರು ಪಟ್ಟ ಕಷ್ಟದ ಅರಿವಿದ್ದರೂ ಅವನಿಗೆ ತನ್ನದೇ ಆದ ಏನೇನೋ ಹೊಸ ಹೊಸ ಖರ್ಚುಗಳು. ಮದುವೆ ವಾರ್ಷಿಕೋತ್ಸವ ಕ್ಕೆ ಒಂದು ಪಾರ್ಟಿ, ಮಕ್ಕಳ ಹುಟ್ಟುಹಬ್ಬಕ್ಕೊಂದು ಪಾರ್ಟಿ, ಕೆಲಸದಲ್ಲಿ ಪ್ರಮೋಷನ್ ಸಿಕ್ಕರೆ ಒಂದು ಪಾರ್ಟಿ, ಹೀಗೆ ಖರ್ಚುಗಳ ಸರಮಾಲೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಪಾಲಕರಿಗೆ ಒಂದಿಷ್ಟು ಕೊಡಬೇಕು. ಏನಾದರೂ ಮಾಡಬೇಕು ಎನ್ನುವ ಕನಸು ಕನಸಾಗಿಯೇ ಉಳಿಯುತ್ತದೆ.

ಹೆತ್ತವರಿಗೆಂದು ಮೊದಲ ಸಂಬಳದಲ್ಲಿ ಶರ್ಟು, ಸೀರೆ ತಂದುಕೊಟ್ಟಿದ್ದೇ ಬಂತು. ಮಗನ ಸಂಸಾರದಷ್ಟೇ ದೊಡ್ಡದು ಅವನ ಖರ್ಚುಗಳು ಎಂದುಕೊಂಡು ಥಳ-ಥಳ ಹೊಳೆಯುವ ಟೈಲ್ಸ್ ನೆಲ, ಪಳಪಳ ಹೊಳೆಯುವ ಕಾರು, ಫ್ರಿಡ್ಜ್ ನೋಡುತ್ತಾ ಆನಂದ ಪಡುತ್ತಾ ತಮ್ಮ ಅದೇ ಲಟೂರಿ ಮನೆಗೆ ಹಿಂದಿರುಗುವವರಿಗೆ ಏನನ್ನೋ ಕಳೆದುಕೊಂಡ ಭಾವ.
ಮಗನಿಗೆ ಕೆಲಸ ಸಿಕ್ಕಿದ ತಕ್ಷಣ ಕರಿಮಣಿ ಸರ ಕಟ್ಟಿಕೊಳ್ಳಬೇಕು. ಮನೆಯಾರಿಗಾದರೂ ಒಂದಿಷ್ಟು ಹಣ ಕೇಳಬೇಕು ಎನ್ನುವ ಬಯಕೆಗಳೆಲ್ಲಾ ಮಾತಾಗಿ ಬಾರದೆ, ಗಂಟಲಲ್ಲೇ ಮೌನ ತಾಳುತ್ತವೆ. ಡಿಸ್ಕೌಂಟ್ ದರದಲ್ಲಿ ತೆಗೆದುಕೊಂಡ ಸೀರೆ ಉಡುತ್ತಾ, ಹರಿದ ಚಪ್ಪಲಿಗಳನ್ನು ಹಾಕಿಕೊಂಡು ಕಾಲೆಳೆಯುತ್ತ, ಪೆನ್ಶನ್ ನಲ್ಲಿ ಬಿಪಿ, ಡಯಾಬಿಟಿಸ್ ಮಾತ್ರೆಗಳಿಗೆ ಸಾಕಾಗುತ್ತಾ ಎಂದು ಲೆಕ್ಕಹಾಕುತ್ತಾ , ಎಲ್ಐಸಿ ಹಣದಲ್ಲಿಯೇ ಜೀವನ ಸಾಗಿಸುತ್ತಾ ಬಡತನ, ಕಂಜೂಸಿತನವನ್ನೇ ಅಭ್ಯಾಸ ಮಾಡಿಕೊಂಡು ಬದುಕಿನ ಮುಸ್ಸಂಜೆಯಲ್ಲಿ ಕಳೆಯುವ ಹೆತ್ತವರ ಕಷ್ಟಕ್ಕೆ ಕೊನೆಯಿಲ್ಲವೇ?

ಎಲ್ಲರೂ ಹೀಗೇ ಇರುತ್ತಾರೆ ಎಂದಲ್ಲ. ಕೆಲವು ಅಪವಾದಗಳು ಇರಬಹುದು. ಹಲವಾರು ಪಾಲಕರ ಪರಿಸ್ಥಿತಿ ಹೀಗೆಯೇ ಆಗಿರುತ್ತದೆ. ಇದಕ್ಕೆ ಪರಿಹಾರವೂ ನಮ್ಮಲ್ಲಿಯೇ ಇದೆ. ಮಕ್ಕಳು ತಮಗೆ ಕೆಲಸ ಸಿಕ್ಕ ನಂತರ ಹೆತ್ತವರಿಗಾಗಿಯೇ ತಮ್ಮ ಸಂಬಳದಲ್ಲಿ ಶೇ.ಐದರಷ್ಟೋ, ಹತ್ತರಷ್ಟೋ ತಮ್ಮ ಅನುಕೂಲಕ್ಕೆ ತಕ್ಕಂತೆ ಆ ಹಣವು ನೇರವಾಗಿ ಹೆತ್ತವರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ವ್ಯವಸ್ಥೆ ಮಾಡಬೇಕು.

ಈಗ ಎಲ್ಲರ ಹೆಸರಿನಲ್ಲಿಯೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಮೊದಲಿನಿಂದಲೂ ಈ ವ್ಯವಸ್ಥೆ ಮಾಡಿಕೊಂಡರೆ ಸಮಸ್ಯೆ ಕಡಿಮೆಯಾಗುತ್ತದೆ. ಮಕ್ಕಳಿಗೆ ಸಂಪೂರ್ಣ ಮನಸ್ಸಿರಬೇಕು ಅಷ್ಟೇ. ಹೆಣ್ಣು ಮಕ್ಕಳು ಅಷ್ಟೇ. ನೇರವಾಗಿ ಹೆತ್ತವರ ಖಾತೆಗೆ ದುಡ್ಡು ಹಾಕುತ್ತಾ ಬಂದರೆ, ಮುಂದೆ ಗಂಡನ ಮನೆಗೆ ಹೋದ ನಂತರವೂ ಸಮಸ್ಯೆ ಎದುರಾಗಲಾರವು. ತಮ್ಮ ತುಂಬು ಮನಸ್ಸಿನಿಂದ ಈ ರೀತಿ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟರೆ ಹೆತ್ತವರಿಗೂ ಸಂತೋಷ.
ಮಕ್ಕಳೆದುರೂ ಕುಬ್ಜರಾಗಿ ನಿಂತು ಹಣ ಕೇಳುವ ಮುಜುಗರದ ಸಂಗತಿಯೂ ತಪ್ಪಿದಂತಾಗುತ್ತದೆ. 5 ಸಾವಿರೋ 10 ಸಾವಿರೋ ಮಕ್ಕಳಿಂದಲೇ ಬಂದಾಗ ಹೆಚ್ಚುವರಿಗಾಗುವ ಖುಷಿಯನ್ನು ವರ್ಣಿಸಲಾಗದು. ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದ್ದಕ್ಕೂ ಸಾರ್ಥಕ ಭಾವ. ಹೆತ್ತವರಿಗೆ ಮಕ್ಕಳು ಅಲ್ಪ ಕೊಟ್ಟರೂ ಅದೇ ದೊಡ್ಡದಾಗಿ ಕಾಣುತ್ತದೆ. ಅವರು ಯಾರ ಹಂಗಿಲ್ಲದೆ ಆ ದುಡ್ಡನ್ನು ಬಳಸಬಹುದು ಅಥವಾ ಉಳಿಸಲು ಬಹುದು. ಇದರೊಂದಿಗೆ ಮುಂದೊಂದು ದಿನ ಕುಟುಂಬದ ಕಷ್ಟಕ್ಕೆ ಅವರು ಸಹ ಸಹಾಯ ಮಾಡಬಹುದು. ಇದರಿಂದ ಪೈಸೆ ಪೈಸೆಗೂ ಲೆಕ್ಕ ಹಾಕುತ್ತಾ ಬಡತನಕ್ಕೆ ಜೋತು ಬೀಳುವ ಪ್ರಸಂಗ ತಪ್ಪಿದಂತಾಗುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...