ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಗುತ್ತಿದೆ. ಕಿಡ್ನಿ ಸಂಬಂಧಿ ರೋಗಗಳ ಅರಿವು ಮೂಡಿಸುವ ಸಲುವಾಗಿ ಮತ್ತು ಕಿಡ್ನಿಗಳ ಕಾಳಜಿ ಬಗೆಗಿನ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಹಿಂದಿನ ಉದ್ದೇಶವಾಗಿದೆ.
2016 ರಲ್ಲಿ 66 ದೇಶಗಳು ಜಾರಿಗೆ ತಂದ ಈ ಸದುದ್ದೇಶದ ಆಚರಣೆಯು ಇಂದು 150 ಕ್ಕೂ ಹೆಚ್ಚಿನ ದೇಶಗಳಲ್ಲಿ ಆಚರಿಸಲಾಗುತ್ತಿದೆ.
ರಾಜ್ಯದಲ್ಲಿ ನಾನಾರೀತಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಸಾವಿರಾರು.
ಇತ್ತೀಚಿನ ವರ್ಷಗಳಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗಿಂತ ಕಿಡ್ನಿ ಸಮಸ್ಯೆಯಿಂದ ಬಳಲುವವರು ಹೆಚ್ಚಾಗಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಸುವವರಲ್ಲಿ ನಗರವಾಸಿಗಳು ಹೆಚ್ಚಾಗಿ ಇರುವುದು ಗಮನಾರ್ಹ. ಅದರಲ್ಲಿಯೂ ಹೆಚ್ಚಾಗಿ ಯುವಜನರು ಈ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕದ ವಿಷಯ.
ರಾಜ್ಯದಲ್ಲಿ ಇತರ ಅಂಗಾಂಗ ಗಳಿಗಿಂತ ಕಿಡ್ನಿಗೆ ಬೇಡಿಕೆ ಹೆಚ್ಚಾಗಿದೆ. ಬದಲಾಗಿರುವ ಆಹಾರ ಪದ್ಧತಿ ಜೀವನಶೈಲಿಯಿಂದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ.
ಕಿಡ್ನಿ ಸ್ಟೋನ್, ಕಿಡ್ನಿ ಕ್ಯಾನ್ಸರ್, ಕಿಡ್ನಿ ಸೋಂಕು, ರಕ್ತನಾಳದ ಸಮಸ್ಯೆಗಳಿಂದಲೂ ಕಿಡ್ನಿಯಲ್ಲಿ ನೀರುಗುಳ್ಳೆ ಸೇರಿ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ರಾರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಪಲ್ಯವಾಗುವ ಸಂದರ್ಭ ಎದುರಾಗಬಹುದು. ಹಾಗಾಗಿ ವರ್ಷಕ್ಕೊಮ್ಮೆ ಕಿಡ್ನಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಮೂತ್ರಪಿಂಡ ಅಥವಾ ಕಿಡ್ನಿಯು ಮಾನವನ ದೇಹ ಸರಿಯಾಗಿ ಕಾರ್ಯನಿರ್ವಹಿಸಲು ಉಪಯುಕ್ತವಾಗಿದೆ. ರಕ್ತ ಶುದ್ಧೀಕರಿಸಿ ತ್ಯಾಜ್ಯ ಹೊರಹಾಕಲು ಕಿಡ್ನಿ ಸಹಾಯ ಮಾಡುತ್ತವೆ. ಮೂತ್ರಪಿಂಡ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಹೆಚ್ಚು ನೀರು ಕುಡಿಯಬೇಕು.
ಮೂತ್ರಪಿಂಡದ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಲು ಕೆಲವೊಂದು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವುದು ಉತ್ತಮ.
ಯಥೇಚ್ಛವಾಗಿ ಹಣ್ಣುಗಳನ್ನು ತಿನ್ನುವುದರ ಮೂಲಕ ಕಿಡ್ನಿಯನ್ನು ಕಾಪಾಡಿಕೊಳ್ಳಬಹುದು. ಇದರೊಂದಿಗೆ ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳು ಸಹ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ತಿನ್ನಲು ಇಷ್ಟಪಡದವರು ಸಲಾಡ್, ಜ್ಯೂಸ್ ರೂಪದಲ್ಲಿ ತೆಗೆದುಕೊಳ್ಳಬಹುದು. ಮೊಳಕೆಕಾಳುಗಳನ್ನು ಸಹ ಸೇವಿಸಬಹುದು.
ಕಿಡ್ನಿ ಸಮಸ್ಯೆಯ ಲಕ್ಷಣಗಳನ್ನು ಅರಿತು ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಶ್ವ ಕಿಡ್ನಿ ದಿನದ ಅಂಗವಾಗಿ ಹಲವಾರು ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.