Monday, April 6, 2026
Monday, April 6, 2026

ನಟ ಅಂಬರೀಶ್ ಸ್ಮಾರಕ ವಿಶಿಷ್ಟವಾಗಿ ನಿರ್ಮಿಸುತ್ತೇವೆ- ಸಿಎಂ ಬೊಮ್ಮಾಯಿ

Date:

ನಟ ಅಂಬರೀಶ್ ಅವರ ಸ್ಮಾರಕವನ್ನು ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ಜನರು ಬಂದು ನೋಡುವ ರೀತಿಯಲ್ಲಿ ವಿಶಿಷ್ಟವಾಗಿ ನಿರ್ಮಾಣ ಮಾಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿ ಅವರು, ಅಂಬರೀಶ್ ಮತ್ತು ನಮ್ಮದು 40ವರ್ಷ ಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ. ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ. ಅವರ ಜೊತೆ ಮಾಡಬಹುದಾದ ದ್ದನ್ನು ಮಾಡಬಾರದ್ದನ್ನೂ ಮಾಡಿದ್ದೇವೆ ಎಂದು ಅಂಬರೀಶ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

ಅಂಬರೀಶ್ ಬದುಕು ತೆರೆದ ಪುಸ್ತಕವಿದ್ದಂತೆ. ಯಾವುದನ್ನು ಮುಚ್ಚಿಡುತ್ತಿರಲಿಲ್ಲ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗುತ್ತದೆಯೋ ಅವರು ನಿಜವಾದ ಧೀರ. ಏನೇ ಆದರೂ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಅಂಬರೀಶ್ ಬದುಕಲಿಲ್ಲ ಎಂದು ಹೇಳಿದರು.

ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಮತ್ತು ಪುನೀತ್ ರಾಜಕುಮಾರ್ ಅವರಂತಹ ಮೇರು ನಟನನ್ನು ಕಳೆದುಕೊಂಡಿದೆ. ಪುನೀತ್ ಅವರ ಸ್ಮಾರಕವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರಕ್ತದಾನವು ಮಹತ್ವದ ಸೇವೆ- ಡಿ.ಎಸ್.ಅರುಣ್

Rotary Shivamogga ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ, ರೋಟರಿ...

B.Y. Raghavendra ಕೇಂದ್ರ ಸಚಿವರೊಂದಿಗೆ ಅಡಿಕೆ ಕೃಷಿಕರ ಸಮಸ್ಯೆ ಚರ್ಚಿಸಿದ ಬಿ.ವೈ.ರಾಘವೇಂದ್ರ

B.Y. Raghavendra ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ...

Chamber of Commerce Shivamogga ಸಂಗೀತದಿಂದ ಖಿನ್ನತೆ ದೂರವಾಗಿ ಜೀವನೋತ್ಸಹ ಮೂಡುತ್ತದೆ- ಎಸ್.ಆರ್.ಮಂಜುನಾಥ್

Chamber of Commerce Shivamogga ತಂತ್ರಜ್ಞಾನ ಯುಗದಲ್ಲಿ ನಮ್ಮ ವೃತ್ತಿಯ ಜೊತೆಗೆ...