ಪಾದರಕ್ಷೆ, ಎಕ್ಕಡ, ಜೋಡು , ಕೆರ, ಮೆಟ್ಟು ಇತ್ಯಾದಿಗಳು ಚಪ್ಪಲಿಗಳಿಗೆ ಅನ್ಯ ಪದಗಳು. ಸುಮ್ಮನೆ ಚಪ್ಪಲಿ ಎಂದರೆ ಅರ್ಥವಾಗುತ್ತಲ್ಲಾ? ಚಪ್ಪಲಿಗಳು ಅಂತ ಯಾಕೆ ಬಹುವಚನವನ್ನೇಕೆ ಉಪಯೋಗಿಸಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ.
ಈಗಿನ ಸಂದರ್ಭದಲ್ಲಿ ಮನುಷ್ಯನಿಗೆ ಬಟ್ಟೆ, ಆಭರಣಗಳ ಜೊತೆಗೆ ಚಪ್ಪಲಿಗಳು ಸಹ ಅತ್ಯಂತ ಅವಶ್ಯಕವಾಗಿವೆ. ಒಂಟಿಕಾಲಿಗರೂ ಸಹ ಒಂದು ಚಪ್ಪಲಿಯನ್ನು ಕೊಳ್ಳಲಾರ. ಹಾಕಿಕೊಳ್ಳುವುದು ಒಂದೇ ಕಾಲಿಗೆ ಆಗಿದ್ದರೂ, ಹಣವನಂತೂ ಜೋಡಿ ಚಪ್ಪಲಿಗಳಿಗೆ ನೀಡಬೇಕು. ಇವುಗಳು ಜೋಡಿ ಆಗಿರುವುದರಿಂದಲೇ ಜೋಡುಗಳು ಎಂದು ಕರೆದಿರಬೇಕು. ಇವುಗಳ ಕೆಲಸ ಮಾನುಷ್ಯರ ಪಾದಸೇವೆ ಆದ್ದರಿಂದ ಬಹುಶಃ ಪಾದರಕ್ಷೆ ಪಾದುಕೆ ಅಂತ ಜನ ಕರೀತಾರೆ ಅಂತ ಅನಿಸುತ್ತದೆ.
ಸಾಮಾನ್ಯವಾಗಿ ಪೀಠಾಧಿಪತಿಗಳು, ಧಾರ್ಮಿಕ ಮಹಾತ್ಮರು, ಕಾವಿಧಾರಿಗಳು ಧರಿಸುವ ಪಾದರಕ್ಷೆಗಳಿಗೆ ಪಾದುಕೆ ಅಂತ ಕರೆಯುವುದು ವಾಡಿಕೆ . ಪಾದುಕೆ ಎಂಬುದು ಪಾದಕ್ಕೆ ಹಾಕಿಕೊಳ್ಳುವ ಮರದ ಚಪ್ಪಲಿ. ಇವಕ್ಕೆ ಹೆಚ್ಚಿನ ಗೌರವ ಬಂದಿರುವುದ್ದಕ್ಕೆ ಕಾರಣ ಅವು ಮರದಿಂದ ಮಾಡಲ್ಪಟ್ಟವು ಎಂಬ ಕಾರಣಕ್ಕೆ ಇರಬಹುದು.
ಚರ್ಮದಿಂದ ಮಾಡಿದ ಚಪ್ಪಲಿಗಳನ್ನು ಚಮ್ಮಾವುಗೆ ಎನ್ನುತ್ತಾರೆ. ಸನ್ಯಾಸಿಗಳು, ಮಠಾಧೀಶರು ಪಾದುಕೆಗಳನ್ನು ಪಾದಗಳಿಗೆ ಧರಿಸಿಯೇ ಓಡಾಡುತ್ತಾರೆ. ಚರ್ಮದಿಂದ ಮಾಡಿದವನ್ನು ಹಾಕಿ ನಡೆದಾಡಿದರೆ ಅದು ಭೂತಾಯಿಗೆ ಮಾಡುವ ಅಪಚಾರವೆಂಬ ಕಾರಣವಷ್ಟೇ ಅಲ್ಲದೆ, ಚಪ್ಪಲಿ ತಯಾರಿಕೆಯ ಹಿಂದಿರುವ ಪ್ರಾಣಿ ಹತ್ಯೆಯ ಪಾಪಪ್ರಜ್ಞೆಯೂ ಇರಬಹುದೇನೋ…
ಈಗಂತೂ ನಡೆದಾಡುವ ವಯಸ್ಸಿಗೇ ಪಾದರಕ್ಷೆಗಳು ಬಂದುಬಿಟ್ಟಿವೆ. ಆಗಿನ ಕಾಲದಲ್ಲಿ ಎಲ್ಲರೂ ಬರಿಗಾಲಲ್ಲೇ ಓಡಾಡುತ್ತಿದ್ದರು. ಜಗತ್ತು ಬದಲಾಗುತ್ತಿದ್ದಂತೆ ಜನರ ಅವಶ್ಯಕತೆಗಳು ಹೆಚ್ಚಾಗಿವೆ. ಈಗಿನ ಜನರು ಮನೆಯಲ್ಲೊಂದು ಜೋಡು, ಹೊರಗಡೆ ಓಡಾಡಲೊಂದು ಚಪ್ಪಲಿ, ಬೆಳಿಗ್ಗೆ ಜಾಗಿಂಗ್ ಗೆ ಹೋಗುವಾಗ ಒಂದು ಜೊತೆ ಬೂಟು, ಮದುವೆಗೆ ಒಂದು ಜೊತೆ, ಪಾರ್ಟಿಗಳಿಗೆ ಒಂದು ಜೊತೆ ಅಂತಲ್ಲ ಮನೆತುಂಬಾ ಚಪ್ಪಲಿಗಳ ರಾಶಿಯನ್ನೇ ಇಟ್ಟುಕೊಂಡಿರುತ್ತಾರೆ.
ಈಗ ಡ್ರೆಸ್ ಕೋಡ್ ಜೊತೆ ಮ್ಯಾಚಿಂಗ್ ಚಪ್ಪಲಿ ಫ್ಯಾಶನ್ ಬಂದಿದೆ. ಚಪ್ಪಲಿ ಕಾಯುವ ಜನರ ಬಗ್ಗೆ ನಾವು ಯೋಚಿಸುವುದೇ ಇಲ್ಲ. ದೊಡ್ಡ ದೊಡ್ಡ ದೇವಾಲಯಗಳ ಸಮೀಪ ಹಲವರಿಗೆ ಅದೇ ಹೊಟ್ಟೆಪಾಡು. ನಾವು ದೇವರಿಗೆ ಧಾರಾಳವಾಗಿ ಕಾಣಿಕೆ ನೀಡುತ್ತೇವೆ. ಆದರೆ ಪಾದರಕ್ಷೆಗಳನ್ನು ಜೋಪಾನದಿಂದ ಕಾಯುವವರೆದುರು ಚೌಕಾಶಿ ಮಾಡುತ್ತೇವೆ.
ಹಿಂದಿನ ಕಾಲದಲ್ಲಿ ಚಪ್ಪಲಿಗಳನ್ನ ಮನೆಯ ಹಿಂದುಗಡೆ ಬಿಡುವ ರೂಢಿಯಿತ್ತು. ಆದರೆ, ಈಗ ನಾವು ಯಾರಾದರೂ ಒಬ್ಬರ ಮನೆಗೆ ಹೋದರೆ ಮೊದಲಿಗೆ ದರ್ಶನವಾಗುವುದೇ ಚಪ್ಪಲಿಗಳ ರಾಶಿಗಳು….
ವಿವಿಧ ರೀತಿಯ, ವಿವಿಧ ಬಣ್ಣದ ಚಪ್ಪಲಿಗಳನ್ನು ನಾವು ಎಲ್ಲೆಂದರಲ್ಲಿ ಕಾಣಬಹುದು. ಚಪ್ಪಲಿ ಸಾವಿರ ರೂಪಾಯದ್ದೇ ಆದರೂ, ತೊಡುವುದು ಮಾತ್ರ ಕಾಲಿಗೆ ತಾನೇ ಅಂತ ಒಬ್ಬರು ಯೋಚಿಸಿದರೆ, ಮತ್ತೊಬ್ಬರು ಇನ್ನೊಬ್ಬರು ತನ್ನನ್ನು ನೋಡುತ್ತಾರೆ ಎನ್ನುವ ಕಾರಣಕ್ಕೆ ದುಬಾರಿಯ ಚಪ್ಪಲಿಗಳನ್ನು ಧರಿಸುತ್ತಾರೆ.
ಅದೇನೇ ಇರಲಿ, ಮಾರುಕಟ್ಟೆಯಲ್ಲಿ ಸ್ಯಾಂಡಲ್ಸ್ ಎಂದೇ ಗುರುತಿಸಲ್ಪಡುವ ಇವುಗಳ ಬೇಡಿಕೆಗೆ ಮುಖ್ಯ ಕಾರಣ ಚರ್ಮದ ಚಪ್ಪಲಿ ಗಿಂತ ಅಗ್ಗದ ಬೆಲೆಯುಳ್ಳದ್ದು ಎಂಬುದಷ್ಟೇ.
ಚಪ್ಪಲಿಗಳಿಗೂ ಲಿಂಗಭೇದವುಂಟು. ಪುರುಷ ಚಪ್ಪಲಿಗಳಿಗೆ ಬಿರುಸು, ಸಪ್ಪಳ ಎರಡೂ ಹೆಚ್ಚು. ಕಿಮ್ಮತ್ತು ಸ್ವಲ್ಪ ಕಮ್ಮಿ. ಮಹಿಳಾ ಚಪ್ಪಲಿಗಳನ್ನು ಲೇಡೀಸ್ ಚಪ್ಪಲ್ಸ್ ಎಂದರೇನೇ ಅಂಗಡಿಯವರಿಗೆ ಅರ್ಥವಾಗುವುದು. ಅವುಗಳಿಗೆ ಚಮ್ಮಕ್ಕು, ಕಿಮ್ಮತ್ತು ಎರಡು ಜಾಸ್ತಿನೇ..
ಇಂತಹ ಚಪ್ಪಲಿಗಳನ್ನು ಹಾಕಿಕೊಂಡು ನಡೆದಾಡುವಾಗ ನಾಲ್ಕು ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ತಿಳಿದ ರಂತೂ ಅವರು ನಡಿಗೆ ಪರದೇಶಿಯೇ ಆಗಿ ಬಿಡುತ್ತದೆ.
ಅಭ್ಯಾಸವಿಲ್ಲದೆ ಇಂಥ ಏರು ಹಿಮ್ಮಡಿಯ ಚಪ್ಪಲಿ ಹಾಕಿದವರು ನಯವಾದ ಗ್ರಾನೈಟು ನೆಲದ ಮೇಲೆ ಜಾರಿ ಬಿದ್ದು ಕಾಲು ಮುರಿದುಕೊಂಡರು ಉದಾಹರಣೆಗಳೇನು ಕಡಿಮೆ ಇಲ್ಲ.
ಗ್ರಾಮೀಣ ಬದುಕಿನಲ್ಲಿ ಬೈಗುಳಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಅನಕ್ಷರಸ್ಥ ಒರಟರ ಒಂದು ಆಯುಧ ಎಂದರೂ ತಪ್ಪಾಗುವುದಿಲ್ಲ. ಸುಳ್ಳು- ಮೋಸ- ಕಳ್ಳತನ ಮಾಡಿದವರ ಮರ್ಯಾದೆಯನ್ನು ಬೀದಿಯಲ್ಲಿ ತೆಗೆಯಲು ಚಪ್ಪಲಿ, ಮೆಟ್ಟು, ಕೆರ ಅಂತೆಲ್ಲ ಮುಂತಾದುವುಗಳ ವಾಕ್ ಪ್ರಯೋಗ ಆಗುತ್ತಿರುತ್ತದೆ.
ಮೆಟ್ನಾಗೆ ಹೊಡಿತೀನಿ, ಕೆರಾ ತಗೊಂಡು ಹೊಡಿತೀನಿ, ನಿನ್ನದೇನು ನಾಲಿಗೆನಾ ಇಲ್ಲಾ ಕೆರಾನಾ? ಮೊದಲಾದ ಬೈಗುಳಗಳು ಬರಿಗಾಲಿನವರ ಬಾಯಿಂದಲೂ ಆಕಸ್ಮಿಕವಾಗಿ ಬಂದುಬಿಡುತ್ತವೆ.
ಪದ ಬಳಕೆಯಲ್ಲಿ ಮಡಿವಂತಿಕೆ ಇರಿಸಿಕೊಂಡವರ ಬೈಗುಳ ಆಗಬೇಕಾ ಚಪ್ಪಲಿ ಪೂಜೆ ? ಎಂಬುದಕ್ಕಷ್ಟೇ ಸೀಮಿತವಾಗಿದೆ.
ದೆವ್ವಗಳಿಗೆ ಚಪ್ಪಲಿಯ ಭಯ ಇದೆಯಂತೆ. ಅದರಿಂದಾಗಿಯೇ ರಾತ್ರಿ ಕೆಟ್ಟ ಕನಸು ಕಾಣುವ ಹೆದರುಪುಕ್ಕರು ಹಾಸಿಗೆ ಬದಿಯಲ್ಲಿ ಚಪ್ಪಲಿ ಇಟ್ಟು ಮಲಗುತ್ತಾರಂತೆ. ನೋಡಿ ಚಪ್ಪಲಿಗಳಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅಂತ?.
ಸಾಮಾನ್ಯವಾಗಿ ಚಪ್ಪಲಿ ಕಳುವಾಗುವ ಸ್ಥಳಗಳು ಎಂದರೆ ದೇವಸ್ಥಾನ, ಕಲ್ಯಾಣ ಮಂದಿರ, ಪೂಜಾ ಸಮಾರಂಭಗಳು ಅಥವಾ ಮದುವೆ ಮನೆಗಳು. ದೇವಸ್ಥಾನದ ಒಳಹೊಕ್ಕು ಪ್ರಾರ್ಥಿಸುವಾಗ, ನಮ್ಮ ಮನಸ್ಸಿನಲ್ಲಿ ಹೊರಗೆ ಬಿಟ್ಟಿರುವ ಚಪ್ಪಲಿಗಳ ಮೇಲೆಯೇ ಗಮನ ಜಾಸ್ತಿ.
ಹೀಗೆ ಚಪ್ಪಲಿಗಳ ಬಗ್ಗೆ ಮಾತನಾಡುತ್ತಾ ಹೋದರೆ ದಿನವೇ ಸಾಲುವುದಿಲ್ಲವೇನೊ..
ಏನಾದರೂ ಇರಲಿ, ಇಂದಿನ ಜೀವನಶೈಲಿಗೆ ನಿತ್ಯ ಬದುಕಿಗೆ ಚಪ್ಪಲಿಗಳು ಅಗತ್ಯವಷ್ಟೇ ಅಲ್ಲ, ಅತ್ಯವಶ್ಯಕ ವಸ್ತು. ಮಾಂಸಾಹಾರಿಗಳ ಸಂಖ್ಯೆ ಹೆಚ್ಚುವಂತೆ ಚಪ್ಪಲಿ ತಯಾರಿಕೆ ಮತ್ತು ಮಾರಾಟವೂ ಹೆಚ್ಚುತ್ತಿರುವುದು ಸಹಜ ಕ್ರಿಯೆ.
ಚಪ್ಪಲಿ ಕಾಲಾತೀತ, ದೇಶಾತೀತ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.