ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವಾಗಲೇ ರಷ್ಯಾ ಮತ್ತು ಅಮೆರಿಕ ನಾಯಕರ ನಡುವಿನ ಶೃಂಗಸಭೆಗೆ ಯಾವುದೇ ಮಹತ್ವ ಇಲ್ಲ ಎಂದು ಹೇಳಿದೆ. ಇದರಿಂದಾಗಿ ಉಕ್ರೇನ್ ಬಿಕ್ಕಟ್ಟು ಶಮನಗೊಳಿಸುವ ಉದ್ದೇಶಕ್ಕೆ ತಣ್ಣೀರು ಎರಚಿದಂತಾಗಿದೆ.
ಉಕ್ರೇನ್ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ನಡುವೆ ಶೃಂಗಸಭೆ ನಡೆಸುವ ಸಾಧ್ಯತೆಯನ್ನು ಪ್ರಾನ್ಸ್ ಘೋಷಿಸಿದ ನಂತರ ಇದು ತುಂಬಾ ಮುಂಚಿತ ವಾಯಿತು ಎಂದು ರಷ್ಯಾ ಪ್ರತಿಕ್ರಿಯೆ ನೀಡಿದೆ.
ಇದರ ಜೊತೆಯಲ್ಲಿ ಉಕ್ರೇನ್ ನಿಂದ ಗಡಿ ದಾಟಿ ಬಂದ ಐದು ಬಂಡು ಕೋರರನ್ನು ರಷ್ಯಾ ಮಿಲಿಟರಿ ಹತ್ಯೆ ಮಾಡಿದೆ. ಇಷ್ಟಲ್ಲದೆ ಉಕ್ರೇನ್ ಕಡೆಯಿಂದ ಎಫ್ ಎಸ್ ಬಿ ಗಡಿ ಕಾವಲು ಠಾಣೆ ಮೇಲೆ ಶೆಲ್ ದಾಳಿ ನಡೆದಿದೆ ಎಂದು ರಷ್ಯಾ ಆರೋಪ ನೀಡಿದೆ.
ರಷ್ಯಾದ ಗಡಿಯನ್ನು ಉಲ್ಲಂಘಿಸಿ ಬಂದು ಘರ್ಷಣೆ ನಡೆಸಿದ 5 ವಿದ್ವಂಸಕ ರನ್ನು ರೋಸ್ಟೋವ್ ಪ್ರದೇಶದ ಮಿತ್ಯ ಕಿನ್ಸ್ಕಾಯಾ ಗ್ರಾಮದ ಬಳಿ ಕೊಲ್ಲಲಾಗಿದೆ ಎಂದು ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾ ಸೇನೆ ಅಥವಾ ಗಡಿ ಭದ್ರತಾ ಪಡೆ ಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ವಿದ್ವಂಸಕ ರನ್ನು ಒಳ ನುಗ್ಗಿಸಲು ಉಕ್ರೇನ್ ನ ಎರಡು ಮಿಲಿಟರಿ ವಾಹನಗಳು ರಷ್ಯಾ ಗಡಿ ದಾಟಿ ಬಂದಿವೆ. ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ರಶ್ಯಾದ ತನಿಖಾ ಸಮಿತಿಯ ಮುಖ್ಯಸ್ಥ ಅಲೆಕ್ಸಾಂಡರ್ ಬಾಸ್ಟ್ರಿ ಕಿನ್ ಅವರು ಹೇಳಿದ್ದಾರೆ.
ಸರ್ಕಾರಿ ಸಂಸ್ಥೆಗಳು, ಬ್ಯಾಂಕ್ ಗಳು ಮತ್ತು ರಕ್ಷಣಾ ವಲಯದ ಮೇಲೆ ರಷ್ಯಾ ಹ್ಯಾಕರ್ ಗಳು ದೊಡ್ಡ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಎಚ್ಚರಿಕೆ ಸಂದೇಶಗಳು ಆನ್ಲೈನ್ನಲ್ಲಿ ಗೋಚರಿಸುತ್ತಿವೆ ಎಂದು ಉಕ್ರೇನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ಇತ್ತೀಚಿನ ದಿನಗಳಲ್ಲಿ ಉಕ್ರೇನ್ ನ ಸುತ್ತಲೂ ಒಂದು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಜಮಾವಣೆ ಮಾಡಿದೆ. ಗಡಿಯಲ್ಲಿ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ರಷ್ಯಾ ಪರವಿರುವ ಪ್ರತ್ಯೇಕ ವಾದಿಗಳನ್ನು ಉಕ್ರೇನ್ ಮೇಲೆ ದಾಳಿನಡೆಸಲು ಹಂತಹಂತವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ನ್ಯಾಟೋ ಉಕ್ರೇನ್ ಗೆ ಎಚ್ಚರಿಕೆ ನೀಡಿದೆ.