ರಾಗಿ ಖರೀದಿ ಪ್ರಮಾಣ ಮಿತಿ ಗೊಳಿಸಿದ ಸರ್ಕಾರ ವಿರುದ್ಧ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಗಿ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕ ಕೃಷ್ಣಬೈರೇಗೌಡ ಅವರು, ರಾಗಿ ಬೆಳೆಯುವ 30 ತಾಲೂಕಿನಲ್ಲಿ ಸಮಸ್ಯೆ ಸೃಷ್ಟಿ ಸೃಷ್ಟಿಯಾಗಿದೆ. 2.10 ಲಕ್ಷ ಮೆ. ಟನ್ ಖರೀದಿಸಿದ ನಂತರ ಖರೀದಿ ಕೇಂದ್ರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬೆಂಬಲ ಬೆಲೆ ಯಡಿ ಖರೀದಿಸಬೇಕೆಂದು ಕೇಂದ್ರದ ಮಾರ್ಗಸೂಚಿಯಲ್ಲೇ, ಇದ್ದರೂ ಖರೀದಿಗೆ ಮಿತಿ ಹಾಕಿದ್ದು ಸರಿಯಲ್ಲ ಎಂದರು.
ಸಚಿವ ಉಮೇಶ ಕತ್ತಿ, ” ಹೆಚ್ಚುವರಿ ಮೂರು ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮಾರ್ಚ್ 31ರೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.