ಗುಬ್ಬಿಗಳನ್ನ ನೋಡದವರಾರು? ಪುಟ್ಟಪುಟ್ಟದಾಗಿ ಕುಪ್ಪಳಿಸುತ್ತದೆ. ಕಾಳುಗಳನ್ನ ಪಟಕ್ಕನೆ ತನ್ನ ಚಂಚುವಿನಿಂದ ಹೆಕ್ಕಿ ತಿನ್ನುತ್ತದೆ. ಯಾರಾದರೂ ಮನುಷ್ಯರೋ..ಪ್ರಾಣಿಯೋ ಬಂದದ್ದು ಗೊತ್ತಾದಾಕ್ಷಣ ಪುರ್ರನೆ ಹಾರಿ ಮಾಯವಾಗುತ್ತದೆ. ಪರಿಸರದಲ್ಲಿ ಅತ್ಯಂತ ನಿರುಪದ್ರವಿ,ಅಷ್ಟಿಟ್ಟು ಮನುಷ್ಯಸ್ನೇಹಿ ಪಕ್ಷಿ ಗುಬ್ಬಿ. ಬಹಳಷ್ಟು ಪಕ್ಷಿಪ್ರಿಯರು ಈ ಪುಟಾಣಿ ಹಕ್ಕಿಗೆ ತಮ್ಮ ಮನೆಯ ಸೂರುಗಳಲ್ಲಿ, ಕೈದೋಟದ ಮರಗಳಲ್ಲಿ ಗೂಡು ಕಟ್ಟಿಕೊಳ್ಳಲು ಬಿಟ್ಟಿರುವುದನ್ನ ನೋಡಿದ್ದೇವೆ.
ಇತ್ತೀಚೆಗೆ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಿರುವುದರ ಬಗ್ಗೆ ಪಕ್ಷಿಪ್ರಿಯರಿಂದ ಕಾಳಜಿ ವ್ಯಕ್ತವಾಗಿದೆ. ಈ ಪುಟ್ಟ ಹಕ್ಕಿಯಿಂದ ನಮಗೇನು ಲಾಭ? ಎಂದು ಕೇಳಬಹುದು. ಈ ಜೀವಜಗತ್ತಿನಲ್ಲಿ ಪ್ರತಿಯೊಂದಕ್ಕೂ ಬದುಕುವ ಹಕ್ಕಿದೆ.
ಜೊತೆಗೆ ಅವುಗಳ ಪರಿಸರ ಸಮತೋಲನಕ್ಕೂ ತಮ್ಮದೇ ಕೊಡುಗೆ ನೀಡುತ್ತಿವೆ.
ಹಕ್ಕಿಗಳು ಹುಳುಹುಪ್ಪಟೆ ತಿಂದು ಧಾನ್ಯದ ಬೆಳೆಗಳನ್ನ ಸಂರಕ್ಷಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಈ ಸದ್ದಿಲ್ಲದ ಸೇವೆ ನಮ್ಮರಿವಿಗೆ ಬರುವುದೇ ಇಲ್ಲ. ಗುಬ್ಬಚ್ಚಿಗಳ ಸೇವೆಯೂ ಹಾಗೆ.
ನಿಮಗೆ ಚೀನಾದ ಹುಚ್ಚುದೊರೆಯ ಕತೆ ನೆನಪಿಸಿದರೆ ಗುಬ್ಬಚ್ಚಿಗಳ ಮಹತ್ವ ತಿಳಿದು ಮೆಚ್ಚುಗೆ ಮೂಡುತ್ತದೆ.
ಝೆಡಾಂಗ್ ಎಂಬ ಚೀನೀ ಅಧ್ಯಕ್ಷ (1949-1976) ಜನಸಂಖ್ಯೆಯ ಬಹುಪಾಲು ಧಾನ್ಯವನ್ನ ಗುಬ್ಬಚ್ಚಿಗಳು ತಿನ್ನುತ್ತವೆ ಎಂದು ಇಡೀ ಗುಬ್ಬಿಸಂಕುಲವನ್ನೇ ಸುಟ್ಟುಹಾಕಿದ. ಗುಬ್ಬಚ್ಚಿಗೂಡುಗಳನ್ನ, ಅವುಗಳು ಕುಳಿತ ಗಿಡ ಮರ ಪೊದೆಗಳನ್ನ ಒಮ್ಮೆಲೇ ಬೆಂಕಿ ತಾಗಿಸಿ ಸುಟ್ಟುಹಾಕಲು ಆಜ್ಞೆ ಮಾಡಿದ. ಚೀನಾ ಇಟ್ಟ ಹೆಜ್ಜೆಯನ್ನು ನಿಸರ್ಗವೂ ತಡೆಯಲಾರದು. ನಾನು ಬೆಟ್ಟಗಳನ್ನು ಬಗ್ಗಿಸುವೆ. ನದಿಗಳು ನನಗಾಗಿ ದಾರಿ ಬಿಡಬೇಕು ಹಾಗೆ ಮಾಡುವೆ” ಎಂಬುದು ಆತನ ಧ್ಯೇಯವಾಕ್ಯ.
ಅಕ್ಷರಶಃ ಹಾಗೇ ಮಾಡಿದ. ಗುಬ್ಬಿಗಳೇ ಅಲ್ಲದೆ ಧಾನ್ಯವನ್ನು ತಿನ್ನುವ ಕೀಟಸಂಕುಲ, ಇಲಿ ಹೆಗ್ಗಣ,ಎಲ್ಲವನ್ನೂ ನಾಶಮಾಡುವ ಅಭಿಯಾನ ಕೈಗೊಂಡ. ಸತ್ತ ಗುಬ್ಬಚ್ಚಿಗಳಿಗಂತೂ ಲೆಕ್ಕವಿಲ್ಲ. ಇಂತ ನಿರ್ಧಾರ ಅವನ ಪಾಲಿಗೇ ಎರವಾಯಿತು. ಹೊಲಗದ್ದೆಗಳಲ್ಲಿ ಫಸಲು ನಿಂತಾಗ ಕ್ರಿಮಿ ಕೀಟಗಳ
ಕಾಟದಿಂದ ಬೆಳೆನಷ್ಟವಾಯಿತು. ಪರಿಸರ ವಿರೋಧಿ ಕ್ರಮಗಳಿಂದ
ಕೃತಕ ಕ್ಷಾಮ ಆವರಿಸಿತು. ಆಗ ಹಸಿವಿನಿಂದ ಸತ್ತ ಚೀನಿಯರ ಸಂಖ್ಯೆ ಒಂದೂವರೆ ಕೋಟಿಯಂತೆ!. ಇನ್ನೂ ಹೆಚ್ಚೇ ಇರಬಹುದು. ಏಕೆಂದರೆ ಚೀನಾಕ್ಕೆ ಹುಸಿನುಡಿಯುವುದೆಂದರೆ ಎಲ್ಲಿಲ್ಲದ ಪ್ರೀತಿ.! ಚೀನಾ ಪರಿಸರವನ್ನ ಎದುರು ಹಾಕಿಕೊಂಡಿತು. ಇದು ಗುಬ್ಬಿಗಳ ಮಾರಣ ಹೋಮದ ಪರಿಣಾಮ.

ಈ ಗುಬ್ಬಚ್ಚಿಗಳ ಬಗ್ಗೆ ನಮ್ಮ ರಾಜ್ಯದಲ್ಲೇ ಬಹಳ ಪ್ರೀತಿ ಮಮತೆ ತೋರಿದ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪರದ ಶಿಡ್ಲಘಟ್ಟ ಬಸವಾಪಟ್ಟಣದಲ್ಲಿ ನಡೆದ ಪ್ರಸಂಗ ಪಕ್ಷಿಪ್ರಿಯರ ಮೆಚ್ಚುಗೆ ಪಡೆದಿದೆ. ಆ ಹಳಿಯಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮನೆಗಳಿಗೆ ದಿನವೂ ಪುರ್ರನೆ ಹಾರಿ ಬಂದು ಕಾಳು ಮೆದ್ದು ಹೋಗುತ್ತಿದ್ದ ಪುಟ್ಟ ಗುಬ್ಬಚ್ಚಿಯ ಚೀಂವ್..ಚೀಂವ್ ಗ್ರಾಮಸ್ಥರ ಕಿವಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ಒಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಗುಬ್ಬಿ ಬಂದೇ ಇಲ್ಲ. ನೋಡಿದರು ಕಾದರು. ಕೊನೆಗೆ ಹತ್ತಿರದ ಮರಗಳನ್ನ ಹುಡುಕಿದರು. ಮರವೊಂದರಲ್ಲಿ ಗುಬ್ಬಚ್ಚಿಯ ಸತ್ತದೇಹ ಪತ್ತೆಯಾಯಿತು.
ಏನೋ ತಮ್ಮ ಅತ್ಯಂತ ಆತ್ಮೀಯರನ್ನ ಕಳೆದುಕೊಂಡ ವಿಹ್ವಲತೆ ಅವರನ್ನ ಕಾಡಿತು. ಕಣ್ಣೀರ್ಗರೆದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅದಕ್ಕೊಂದು ಸಂಸ್ಕಾರ ಮಾಡಬೇಕೆಂದು ನಿಶ್ವಯಿಸಿದರು. ಸಮಾಧಿಯ ನಿರ್ಮಾಣವಾಯಿತು. ಪ್ರೀತಿಯ ಹಕ್ಕಿಯ ದೇಹವನ್ನ ಮಣ್ಣಿನಲ್ಲಿ ಹೂಳಿದರು. ಹೂಗಳನ್ನಿಟ್ಟರು.
ತೃಪ್ತಿಯಾಗಲಿಲ್ಲ. ಮನುಷ್ಯರಿಗೆ ಸತ್ತಾಗ ತಿಥಿ ಮಾಡುವ ಆಚರಣೆಯನ್ನೂ ಮಾಡಿದರು. ಎಲ್ಲರಿಗೂ ಅಂದು ತರಕಾರಿ ಭೋಜನ. ಏಕೆಂದರೆ ಗುಬ್ಬಚ್ಚಿ
ಸಸ್ಯಾಹಾರಿಯಲ್ಲವೆ?.
ಬೆಂಗಳೂರಿನಲ್ಲಿ ಗುಬ್ಬಿಮನುಷ್ಯ ಅಂತ ಜನರಿಂದ ಕರೆಸಿಕೊಳ್ಳುವ ಓರ್ವರಿದ್ದಾರೆ. ಅವರ ಹೆಸರು ಎಡ್ವಿನ್ ಜೋಸೆಫ್. ಅವರ ಬಳಿ ಇನ್ನೂರಕ್ಕೂ ಮಿಕ್ಕಿ ಗುಬ್ಬಚ್ಚಿಗಳಿವೆ. ಈ ಗುಬ್ಬಿ ಪ್ರೀತಿಯ ಪ್ರಸಂಗ ಕೇಳಿ ಹಳ್ಳಿಗರ ಹೃದಯ ವೈಶಾಲ್ಯಕ್ಕೆ ಒಂದು ಸಲಾಮ್ ಎಂದರು. ಅವರು ಗುಬ್ಬಿ ಸತ್ತಾಗ ಮಣ್ಣಿನಲ್ಲಿ ಮುಚ್ಚುತ್ತಾರೆ. ಎದೆಭಾರ ,ಕಣ್ಣಾಲಿಗಳಲ್ಲಿ ನೀರು ಇಷ್ಟೇ ಅವರು ನೀಡುವ ಅಂತಿಮ ಪ್ರಾರ್ಥನೆ. ಅತ್ಯಂತ ಹೃದಯ ಕಲಕುವ ರೀತಿ ಬಸವಾಪಟ್ಟಣ ಗ್ರಾಮದ ಜನ ಗುಬ್ಬಿಗೆ ತೋರಿದ ಮಾನವೀಯತೆ ಎಲ್ಲರಿಗೂ ಮಾದರಿಯೆನಿಸಿದೆ.
ನಮ್ಮ ಜನರಲ್ಲಿ ಪ್ರಾಣಿ -ಪಕ್ಷಿ ಪ್ರೀತಿಯ ಸೆಲೆಯೇ ಇದೆ. ನಾಯಿ,ಬೆಕ್ಕು, ಗಿಣಿ,ಎತ್ತು,ಆಕಳು ಎಮ್ಮೆ ಹೀಗೆ ಅದಕ್ಕೆ ಎಲ್ಲೆಯೇ ಇಲ್ಲ. ಗುಬ್ಬಚ್ಚಿಯದು ಮಾತ್ರ ಅಪರೂಪದಲ್ಲೊಂದು ಅತೀ ಅಪರೂಪದ ಪ್ರಸಂಗ. ಇದನ್ನ ಓದಿದಾಗ
ಅಷ್ಟೇಕೆ ಬರೆಯುತ್ತಿದ್ದಂತೇ ನನಗೂ ಕಣ್ಣುಗಳು ತೇವಗೊಂಡವು. ನಿಮಗೆ ಹೇಗೋ ನನಗೆ ಗೊತ್ತಿಲ್ಲ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App

KLIVE Android App on Google Play Store

Download the most loved Klive App for your Android phone or tablet.