News Week
Magazine PRO

Company

Thursday, May 1, 2025

ಭದ್ರಾವತಿ ರೇಡಿಯೋ ಆತ್ಮಕಥೆಯ ಒಂದು ಪುಟ

Date:

ನನ್ನ ಜೀವನ್ಮಿತ್ರ ನನಗೆ ಹೇಳಿದ ಕಥೆ..
ಹೀಗಿದೆ…..ಓದಿ..

ನಮಸ್ಕಾರ..ಬಂಧುಗಳೇ…ಅರ್ಥಾತ್ ಕೇಳುಗ ದೇವರುಗಳೆ!
ವಿಶ್ವ ರೇಡಿಯೊ ದಿನದ ಶುಭಾಶಯಗಳು!.

ನಾನು..ಆಕಾಶವಾಣಿ ಭದ್ರಾವತಿ…ನಿಮ್ಮ ಕಿವಿಗೆ ನನ್ನ ವಾಣಿ ತಲುಪಿದ ಮೊದಲ ದಿನಾಂಕ 7-2-1965.

ಬೆಂಗಳೂರು ಬಾನುಲಿ ನನ್ನ ದೊಡ್ಡಣ್ಣ. ಅವನ ನುಡಿತರಂಗಗಳು ಭದ್ರಾವತಿ ಸುತ್ತಲ ನಿಮಗೆಲ್ಲ ಆಗ ಕೇಳಲು ಕ್ಷೀಣವಾಗಿತ್ತು. ಆದ್ದರಿಂದ ದೊಡ್ಡಣ್ಣನ ನುಡಿಗಳನ್ನ ನಾನು ನನ್ನೊಳಗೆ ಸ್ವೀಕರಿಸಿ ನಿಮಗೆ ಮತ್ತೆ ಜೋರಾಗಿ ಕೇಳುವಂತೆ ಮಾಡುವುದು ನನ್ನ ಮೊದಲ ಕಾಯಕವಾಗಿತ್ತು. ಆಗಂತೂ ಮನರಂಜನೆ,ಮಾಹಿತಿಗಳಿಗೆ ನಮ್ಮ ಸಮುದಾಯ ಬಾಂಧವರು ಹಾತೊರೆಯುವ ಸನ್ನಿವೇಶವಿತ್ತು.

ಏಕೆಂದರೆ ದೇಶೀಯ ಆಗುಹೋಗುಗಳು, ವರ್ತಮಾನದ ವಿಶೇಷ ಬೆಳವಣಿಗೆಗಳನ್ನ ಕುರಿತ ಸಮಾಚಾರಗಳು ಸಮಾಜದ ಪ್ರತಿಯೊಬ್ಬರನ್ನೂ ಅವಶ್ಯ ತಲುಪಬೇಕಿತ್ತು. ಆ ಮೂಲಕ ಹೊರಪ್ರಪಂಚಕ್ಕೆ ಪ್ರತಿಯೊಬ್ಬ ಸಮಾಜಜೀವಿಯು ನೋಡಲು,ಕೇಳಲು ಕಾತುರನಾಗಿದ್ದ. ಅಂತಹ ಸಂಕ್ರಮಣ ಸ್ಥಿತಿಯಲ್ಲಿ ನಾನೂ ದೊಡ್ಡಣ್ಣನ ತಮ್ಮನಾಗಿ ಜನ್ಮತಳೆದೆ.

ಜಗತ್ತು ಬದಲಾವಣೆ ಬಯಸುತ್ತಿತ್ತು. ಆ ವರ್ತಮಾನದ ವಿದ್ಯಮಾನಗಳನ್ನ ನಮ್ಮ ಬೆನ್ನಲ್ಲಿ ಹೊತ್ತು ನಿಮ್ಮ ಕಿವಿಗೆ ಮುಟ್ಟಿಸುವ ಕೆಲಸ ನಮ್ಮದಾಗಿತ್ತು. ನಾನು ಜನ್ಮತಳೆಯುವ ಮುನ್ನ ಅಂದರೆ ಮೈಸೂರು ಕೇಂದ್ರ 1944 ರಲ್ಲಿ ಜನಿಸಿದರೂ ತೊಟ್ಟಿಲು ಶಾಸ್ತ್ರ ಆಗಿರಲಿಲ್ಲ. ( ಮತ್ತೆ ಪುನರಾರಂಭಕ್ಕೆ ಕಾಯುತ್ತಿತ್ತು) ನಾಮಕರಣ ಆಗಿದ್ದುದು 14-11-1974ರಲ್ಲಿ. ತಾ.8-1-1950ರಲ್ಲಿ ಧಾರವಾಡ28-8-1992 ಕೇಂದ್ರ, 2-11-1955 ರಲ್ಲಿ ಬೆಂಗಳೂರು ಕೇಂದ್ರಗಳು ಜನ್ಮತಳೆದು ನಮಗೆ ಮೇಲ್ಪಂಕ್ತಿಯಾಗಿದ್ದವು. ಹೀಗಾಗಿ ಈ ಮೂವರು ನನಗೆ ಹಿರಿಯಣ್ಣಂದಿರು‌.
ನಂತರ ಕಲಬುರಗಿ ಕೇಂದ್ರ ತಾ 1-11-1966, ಮಂಗಳೂರು ಕೇಂದ್ರ ತಾ 11-12-1976, ನಮ್ಮ ವಂಶದ ಅನುಜರ ಜನ್ಮ ದಿನಾಂಕದ ಪಟ್ಟಿ ನೀಡುವೆ.
ಚಿತ್ರದುರ್ಗ ..3-5-1991, ಹಾಸನ …4-5-1991, ಹೊಸಪೇಟೆ..1-5-1992, ಮಡಿಕೇರಿ….28-8-1992, ರಾಯಚೂರು..28-8-1992, ಕಾರವಾರ..13-2-1994.
ಸಾಮಾಜಿಕ ಪ್ರಗತಿಯೊಟ್ಟಿಗೆ ಸಮುದಾಯದ ಮನೋಸ್ಥಿತಿಯ ಔನತ್ಯಸಾಧಿಸುವುದು , ಮಾಹಿತಿ,ಮನರಂಜನೆಗಳ ಮೂಲಕ ವರ್ತಮಾನದ ಬದುಕನ್ನ ಹಸನುಗೊಳಿಸುವಲ್ಲಿ ಕಿಂಚಿತ್ ಪ್ರಯತ್ನ ನಮ್ಮದು. “ಬಹುಜನ ಹಿತಾಯ..ಬಹು ಜನ ಸುಖಾಯ…” ಇದು ನಮ್ಮ ಜೀವಿತಧ್ಯೇಯ.
ದೇಶಪ್ರೇಮ, ಸಾಮಾಜಿಕ ಪ್ರೀತಿ, ಸೌಹಾರ್ದಗಳನ್ನ ಬೆಸೆಯುವಲ್ಲಿ ಪ್ರತಿಭೆಗಳ ಅನ್ವೇಷಣೆ. , ಪರಸ್ಪರ ಕ್ಷೇಮಸಂಗತಿಗಳನ್ನ, ನಿಯಮಿತ ಕಟ್ಟುಪಾಡುಗಳಿಂದ ಬಂಧಿತರಾಗಿದ್ದರೂ ಆ ಮಿತಿಯಲ್ಲೇ ನಾವೆಲ್ಲ ಹೇಗೆ ಶಾಂತಿಯುತ ಬಾಳುವೆ ನಡೆಸಬಹುದು? ದೇಶಾಭಿವೃದ್ಧಿಗೆ ಯಾವರೀತಿ ತುಂಬು ಮನಸ್ಸಿನಿಂದ ಕೊಡುಗೆ ನೀಡಿ ಸಹಕರಿಸಬಹುದು ಎಂಬ ತಳಹದಿಯನ್ನ ಹಿರಿಯರು ಹಾಕಿಕೊಟ್ಟರು.
ಈಗ ಅದೆ ಹಾದಿ..ಅದೇ ಗುರಿ..!

ಬಾನುಲಿಪಯಣ… ಆರಂಭ ಅಷ್ಟಿಷ್ಟು ಅಸ್ಪಷ್ಟವಾದರೂ ಗುರುತಿಸುವ ಪ್ರಯತ್ನ ಆಗಿದೆ. ..ಅಂತ್ಯವಂತೂ ಇಲ್ಲ!.ಏಕೆಂದರೆ ಆಯಾಕಾಲಕ್ಕನುಗುಣವಾಗಿ ಈ ಮಾಧ್ಯಮ ರೂಪುಗೊಳ್ಳುತ್ತಾ ಸಾಗುವುದು .ಇದೊಂದು ಸಾಮಾಜಿಕ ಪ್ರಕ್ರಿಯೆ. ಮಾಧ್ಯಮ ಧರ್ಮ!.
ನನ್ನ ಸ್ಥಳೀಯ ಪ್ರಸಾರ ವ್ಯಾಪ್ತಿ ಮೊದಲಿಗೆ ಇದ್ದದ್ದು,ಶಿವಮೊಗ್ಗ, ಚಿಕ್ಕಮಗಳೂರು , ಚಿತ್ರದುರ್ಗ ಜಿಲ್ಲೆಗಳು.ಹಾಸನ ಜಿಲ್ಲೆಯ ಅರಸೀಕೆರೆ ತನಕ. ನಂತರ ಎಫ್ ಎಂ ಕೇಂದ್ರಗಳ ಸ್ಥಾಪನೆಯಾದಂತೆ ಪ್ರಸಾರ ವ್ಯಾಪ್ತಿ ಕಿರಿದಾಯಿತು.
ದೂರದರ್ಶನ ಜಾಲ ವಿಸ್ತಾರವಾಗುವವರೆಗೆ ಈ ಪ್ರದೇಶಗಳಲ್ಲಿ ನಾನು (ಅಂದರೆ ಭದ್ರಾವತಿ ಬಾನುಲಿ),ಏಕಮೇವಾದ್ವಿತೀಯವೆನಿಸಿದ್ದೆ. ಭದ್ರಾವತಿ ಉದ್ಘೋಷಕರು, ಕಾರ್ಯಕ್ರಮ ಪ್ರಸ್ತುತಿಕಾರರು, ನಿರ್ವಾಹಕರು, ನಿರ್ದೇಶಕರು ಅಷ್ಟೇಕೆ ನಿಲಯದ ಇಡೀ ಸಿಬ್ಬಂದಿ ಕೇಳುಗರ ಮನದಲ್ಲಿ ಮಾಧ್ಯಮ ತಾರೆಗಳಂತೆ ಹೊಳೆಯುತ್ತಿದ್ದರು. ಅಷ್ಟು ಕೇಳುಗರ ಅಭಿಮಾನ ತುಂಬಿತುಳುಕುತ್ತಿತ್ತು.
ಕಾರ್ಯಕ್ರಮಗಳಂತೂ ಮೊದಲಿಗೆ ಸ್ವಂತವಾಗಿ ಆರಂಭಗೊಂಡಿದ್ದು ಇಲ್ಲಿಗೆ ಸಾಹಿತ್ಯಪ್ರೀತಿಯ ಬರಹಗಾರರಾದ ಶ್ರೀನಾಗಭೂಷಣ , ಶ್ರೀ ಎಮ್ ಎಸ್. ಕೆ ಪ್ರಭು ಅವರುಗಳು ಸೇವೆಗೆ ಬಂದ ನಂತರವೆ. ಆಮೇಲೆ ಪರಿಣಿತ ಹಾಗೂ ಸಾಂಸ್ಕೃತಿಕ ಮನಸ್ಸುಗಳು ಸೇವೆಗೆ ಬಂದವು. ಅವರೆಲ್ಲರ ಸೃಜನಶೀಲತೆಯಿಂದ ಕೇಳುಗರೆದೆಯಲ್ಲಿ ನಾನು ಆರಾಧ್ಯಸ್ಥಾನ ಪಡೆದೆ. ಡಾ ವಸಂತಕವಲಿ ಅವರು ನಿರ್ದೇಶಕರಾಗಿ ಬಂದರು. ಸಂಗೀತ ಸಾಹಿತ್ಯ ಕಾರ್ಯಕ್ರಮಗಳು ಮತ್ತಷ್ಟು ಮೆರುಗು ಪಡೆದವು. ಅವರ ಹನ್ನೊಂದು ತಿಂಗಳ ಅವಧಿಯಲ್ಲಿ ಒಂಭತ್ತು ಆಮಂತ್ರಿತ ಶ್ರೋತೃಗಳ ಸಮ್ಮುಖ ವಿವಿಧ ಕಾರ್ಯಕ್ರಮಗಳ ಸುಗ್ಗಿಯೇ ಆಯಿತು.ನಾನೊಂದು ಮಲೆನಾಡಿನ ಸಂಸ್ಕೃತಿಯ ಸಂಪತ್ತಾದೆ. ನಂತರ ಶ್ರೀ ಆಲದಕಟ್ಟಿಯವರು ನಿರ್ದೇಶಕರಾಗಿ ಬಂದಮೇಲೆ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಅರಸಿ ಬಂದವು.

ಮೊದಲಿಗೆ ಡಾ .ಎನ್ ಸುಧೀಂದ್ರ ಅವರ ನಿರ್ವಾಹಕತ್ವದಲ್ಲಿ ಯುವವಾಣಿ ವಿಭಾಗದಲ್ಲಿ ” ಮಾನಸ ಲೋಕ ” ತೀರ್ಪಗಾರರ ಮೆಚ್ಚುಗೆ ಪಡೆಯಿತು. ಮರುವರ್ಷವೇ ಪ್ರೀತಿಗೆಷ್ಟು ಮುಖಗಳು ರೂಪಕ ರಾಷ್ಟ್ರೀ ಯ ಯುವವಾಣಿ ವಿಭಾಗದ ಪುರಸ್ಕಾರ ಗಿಟ್ಟಿಸಿತು. ಅಷ್ಟೇ ಅಲ್ಲ ಮುಂದೆ ಪ್ರತೀವರ್ಷ ವಿಶೇಷವಾಗಿ ನೀಡುವ ಪ್ರತಿಷ್ಠಿತ ” ಲಾಸಾ ಕೌಲ್ ಅವಾರ್ಡ್” ದೊರೆಯಿತು. ಡಾ‌.ಎನ್ .ಸುಧೀಂದ್ರ ಅವರು ನಿರ್ಮಿಸಿದ
ಕೋಮುಸೌಹಾರ್ದ ಕುರಿತ ರೂಪಕ ಸ್ನೇಹ ಸೌಹಾರ್ದ ಕಂಪನಿ Unlimited* ರೂಪಕ ಈ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಯಿತು.
ರಾಜ್ಯಮಟ್ಟದ ಆಕಾಶವಾಣಿ ಪುರಸ್ಕಾರಗಳಿಗೇನೂ ಕಡಿಮೆಯಿಲ್ಲ.
ಶ್ರೀಮತಿ ಉಷಾಲತಾ ಅವರು ನಿರ್ಮಿಸಿದ ಹಕ್ಕಿಹಾಡು(ವೈದೇಹಿ ಅವರ ಕಥೆ ಆಧರಿತ )ನಾಟಕವು ಪ್ರಥಮ ಸ್ಥಾನಪಡೆಯಿತು. ಅದರೊಟ್ಟಿಗೇ ಡಾ.ಎನ್ ಸುಧೀಂದ್ರ ಅವರು ನಿರ್ಮಿಸಿದ ಫೋನ್ ಇನ್ ನಾಟಕ ತೀರ್ಪುಗಾರರ ಮೆಚ್ಚುಗೆ ಪಡೆಯಿತು. ಮತ್ತೆ ಇತ್ತೀಚೆಗೆ
ಎಚ್ ಎನ್ ಸುಬ್ರಹ್ಮಣ್ಯ ಅವರು ನಿರ್ಮಿಸಿದ ಸಾವಿತ್ರಮ್ಮನ ಶಾವಿಗೆ ಪಯಣ* ದ್ಬಿತೀಯ ಸ್ಥಾನ ಗಿಟ್ಟಿಸಿದೆ. …ಹೀಗೇ ಸಾಗಿದೆ.

ಮತ್ತೊಂದು ಮೈಲುಗಲ್ಲೆಂದರೆ ನನ್ನಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಮೂವರು ಸಂಶೋಧನಾ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರೆ.
೧.ಡಾ.ಮಹಾಬಲೇಶ್ವರ ರಾವ್…ಶಾಲಾ ಶೈಕ್ಷಣಿಕ ಪ್ರಸಾರ
೨.ಡಾ.ಎನ್.ಸುಧೀಂದ್ರ..ಕನ್ನಡ ರೇಡಿಯೊ ನಾಟಕಗಳು..
ಮಾರ್ಗದರ್ಶಕರು : ಪ್ರೊ.ಕೆ.ಶ್ರೀಕಂಠ ಕೂಡಿಗೆ.
೩.ಡಾ‌ಎ.ಎಸ್.ಶಂಕರನಾರಾಯಣ…ಕನ್ನಡ ಬಾನುಲಿ ಭಾಷಣಗಳು.
ಮಾರ್ಗದರ್ಶಕರು : ಪ್ರೊ ಕೆ .ಕೇಶವ ಶರ್ಮ.
ನನ್ನಲ್ಲಿ ಅನೇಕ ಪ್ರತಿಭಾವಂತರು ತಮ್ಮ ಸಂಗೀತ ,ಸಾಹಿತ್ಯ ಸುಧೆಯನ್ನ ಕೇಳುಗ ದೇವರುಗಳಿಗೆ ಉಣಬಡಿಸಿದ್ದಾರೆ.ಇವತ್ತು ಅನೇಕರು ಗಾಯನ ಪ್ರಪಂಚದಲ್ಲಿ ತಾರೆಗಳಾಗಿದ್ದಾರೆ.ಕವಿ,ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯ ಸಂಕೇತಗಳಾಗಿದ್ದಾರೆ.ಅಷ್ಟೇಕೆ ಜನಪದ ಸಿರಿವಂತಿಕೆಯುಳ್ಳ ಮಲೆನಾಡಿನ ಪ್ರದೇಶದಲ್ಲಿ ಅಸಂಖ್ಯ ಕಲಾವಿದರೂ ಭದ್ರಾವತಿ ಬಾನುಲಿಯಲ್ಲಿ ತಮ್ಮ ಪ್ರತಿಭಾಲಾಸ್ಯಗೈದಿದ್ದಾರೆ.

ಹಲವಾರು ಸಂಸ್ಕೃತಿವಂತರು,ಸಾಹಿತ್ಯಾಸಕ್ತರು ನನ್ನಲ್ಲಿ ನಿರ್ದೇಶಕರಾಗಿ , ಕಾರ್ಯಕ್ರಮ/ಪ್ರಸಾರ ನಿರ್ವಾಹಕರಾಗಿ, ಉದ್ಘೋಷಕರಾಗಿ , ತಮ್ಮ ಸೃಜನಶೀಲತೆಯಿಂದ ಇಲ್ಲಿ ಸೇವೆಗೈದಿದ್ದಾರೆ. ಸರ್ವಶ್ರೀ ಎಸ್ ಎಸ್ ಹಿರೇಮಠ್,ಎಂ ಎಸ್ ಶ್ರೀಹರಿ,ಎಂ ಎ ಸುಬ್ಬುರತ್ನ,ಜಯರಾಮನ್, ಚೇತನ್ ನಾಯಕ್,ಸಿ ಎನ್ ರಾಮಚಂದ್ರ, ಹೂಗೊಪ್ಪಲು ಕೃಷ್ಣಮೂರ್ತಿ,ಕೆ.ಗುಣಶೇಖರ್,ಪ್ರಸಾದ್,ಎನ್ ವಿ ರಮೇಶ್, ಬಳ್ಳಾರಿ ಎಂ.ರಾಘವೇಂದ್ರ, ಅಶ್ವಿನ್ ಕುಮಾರ್, ಡಾ.ಆನಂದ ಪಾಟೀಲ,,ಎಂ.ಎ ಸುದರ್ಶನ, ಎಮ್.ಎಸ್ ನಾಗೇಂದ್ರ , ಬನಜ್ಜ, ಮುಳ್ಳೂರ್, ಡಾ‌.ಸದಾನಂದ ಹೊಳ್ಳ, ಡಾ.ಎಂ.ಜಿ.ವೇದಮೂರ್ತಿ ಶ್ರೀಮತಿಯರಾದ ವಿಜಯಾಹರನ್, ರಾಜಲಕ್ಷ್ಮೀ ಶ್ರೀಧರ್. ಗೀತಾ ರಮಾನಂದ್ ಮುಂತಾದವರು ಇಲ್ಲಿ ಸೇವೆಗೈದಿದ್ದಾರೆ.ಇನ್ನೂ ಹಲವಾರು ಮಂದಿ ಇದ್ದಾರೆ ನೆನಪಿನ ಭರದಲ್ಲಿ ಮರೆಯುವುದು ಸಹಜ.

ಹ್ಞಾಂ..!..ಬಂಧುಗಳೆ..ನೆನಪು ಓಡುತ್ತದೆ… ಹೇಳಲು ಬಹಳಷ್ಟಿದೆ..ನೋಡೋಣ…ಪ್ರಯತ್ನಮಾಡ್ತೀನಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News
  • United States+1
  • United Kingdom+44
  • Afghanistan+93
  • Albania+355
  • Algeria+213
  • American Samoa+1
  • Andorra+376
  • Angola+244
  • Anguilla+1
  • Antigua & Barbuda+1
  • Argentina+54
  • Armenia+374
  • Aruba+297
  • Ascension Island+247
  • Australia+61
  • Austria+43
  • Azerbaijan+994
  • Bahamas+1
  • Bahrain+973
  • Bangladesh+880
  • Barbados+1
  • Belarus+375
  • Belgium+32
  • Belize+501
  • Benin+229
  • Bermuda+1
  • Bhutan+975
  • Bolivia+591
  • Bosnia & Herzegovina+387
  • Botswana+267
  • Brazil+55
  • British Indian Ocean Territory+246
  • British Virgin Islands+1
  • Brunei+673
  • Bulgaria+359
  • Burkina Faso+226
  • Burundi+257
  • Cambodia+855
  • Cameroon+237
  • Canada+1
  • Cape Verde+238
  • Caribbean Netherlands+599
  • Cayman Islands+1
  • Central African Republic+236
  • Chad+235
  • Chile+56
  • China+86
  • Christmas Island+61
  • Cocos (Keeling) Islands+61
  • Colombia+57
  • Comoros+269
  • Congo - Brazzaville+242
  • Congo - Kinshasa+243
  • Cook Islands+682
  • Costa Rica+506
  • Croatia+385
  • Cuba+53
  • Curaçao+599
  • Cyprus+357
  • Czech Republic+420
  • Côte d’Ivoire+225
  • Denmark+45
  • Djibouti+253
  • Dominica+1
  • Dominican Republic+1
  • Ecuador+593
  • Egypt+20
  • El Salvador+503
  • Equatorial Guinea+240
  • Eritrea+291
  • Estonia+372
  • Eswatini+268
  • Ethiopia+251
  • Falkland Islands+500
  • Faroe Islands+298
  • Fiji+679
  • Finland+358
  • France+33
  • French Guiana+594
  • French Polynesia+689
  • Gabon+241
  • Gambia+220
  • Georgia+995
  • Germany+49
  • Ghana+233
  • Gibraltar+350
  • Greece+30
  • Greenland+299
  • Grenada+1
  • Guadeloupe+590
  • Guam+1
  • Guatemala+502
  • Guernsey+44
  • Guinea+224
  • Guinea-Bissau+245
  • Guyana+592
  • Haiti+509
  • Honduras+504
  • Hong Kong+852
  • Hungary+36
  • Iceland+354
  • India+91
  • Indonesia+62
  • Iran+98
  • Iraq+964
  • Ireland+353
  • Isle of Man+44
  • Israel+972
  • Italy+39
  • Jamaica+1
  • Japan+81
  • Jersey+44
  • Jordan+962
  • Kazakhstan+7
  • Kenya+254
  • Kiribati+686
  • Kosovo+383
  • Kuwait+965
  • Kyrgyzstan+996
  • Laos+856
  • Latvia+371
  • Lebanon+961
  • Lesotho+266
  • Liberia+231
  • Libya+218
  • Liechtenstein+423
  • Lithuania+370
  • Luxembourg+352
  • Macau+853
  • Madagascar+261
  • Malawi+265
  • Malaysia+60
  • Maldives+960
  • Mali+223
  • Malta+356
  • Marshall Islands+692
  • Martinique+596
  • Mauritania+222
  • Mauritius+230
  • Mayotte+262
  • Mexico+52
  • Micronesia+691
  • Moldova+373
  • Monaco+377
  • Mongolia+976
  • Montenegro+382
  • Montserrat+1
  • Morocco+212
  • Mozambique+258
  • Myanmar (Burma)+95
  • Namibia+264
  • Nauru+674
  • Nepal+977
  • Netherlands+31
  • New Caledonia+687
  • New Zealand+64
  • Nicaragua+505
  • Niger+227
  • Nigeria+234
  • Niue+683
  • Norfolk Island+672
  • North Korea+850
  • North Macedonia+389
  • Northern Mariana Islands+1
  • Norway+47
  • Oman+968
  • Pakistan+92
  • Palau+680
  • Palestine+970
  • Panama+507
  • Papua New Guinea+675
  • Paraguay+595
  • Peru+51
  • Philippines+63
  • Poland+48
  • Portugal+351
  • Puerto Rico+1
  • Qatar+974
  • Romania+40
  • Russia+7
  • Rwanda+250
  • Réunion+262
  • Samoa+685
  • San Marino+378
  • Saudi Arabia+966
  • Senegal+221
  • Serbia+381
  • Seychelles+248
  • Sierra Leone+232
  • Singapore+65
  • Sint Maarten+1
  • Slovakia+421
  • Slovenia+386
  • Solomon Islands+677
  • Somalia+252
  • South Africa+27
  • South Korea+82
  • South Sudan+211
  • Spain+34
  • Sri Lanka+94
  • St Barthélemy+590
  • St Helena+290
  • St Kitts & Nevis+1
  • St Lucia+1
  • St Martin+590
  • St Pierre & Miquelon+508
  • St Vincent & Grenadines+1
  • Sudan+249
  • Suriname+597
  • Svalbard & Jan Mayen+47
  • Sweden+46
  • Switzerland+41
  • Syria+963
  • São Tomé & Príncipe+239
  • Taiwan+886
  • Tajikistan+992
  • Tanzania+255
  • Thailand+66
  • Timor-Leste+670
  • Togo+228
  • Tokelau+690
  • Tonga+676
  • Trinidad & Tobago+1
  • Tunisia+216
  • Turkey+90
  • Turkmenistan+993
  • Turks & Caicos Islands+1
  • Tuvalu+688
  • US Virgin Islands+1
  • Uganda+256
  • Ukraine+380
  • United Arab Emirates+971
  • United Kingdom+44
  • United States+1
  • Uruguay+598
  • Uzbekistan+998
  • Vanuatu+678
  • Vatican City+39
  • Venezuela+58
  • Vietnam+84
  • Wallis & Futuna+681
  • Western Sahara+212
  • Yemen+967
  • Zambia+260
  • Zimbabwe+263
  • Åland Islands+358

Popular

More like this
Related

Sri Adichunchanagiri Education Trust ಬಿಜಿಎಸ್ ಪಿಯು ವಾಣಿಜ್ಯ ಕಾಲೇಜಿಗೆ ಶೇ 100 ಫಲಿತಾಂಶ

Sri Adichunchanagiri Education Trust ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್...

Department of Science and Technology ಹೊಳಲೂರು ಏತ ನೀರಾವರಿಗೆ ₹ 4.8 ಕೋಟಿ ಬಜೆಟ್ ನಿಗದಿಮಾಡಿದ ಸಚಿವರ ಕ್ರಮಕ್ಕೆ ರೈತರ ಕೃತಜ್ಞತೆ

Department of Science and Technology ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಶಿವಮೊಗ್ಗ...

Sri Shankaracharya Jayanti ಮೇ 2. ಭಕ್ತಿಪೂರ್ವಕ ಶಂಕರ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸರ್ವ ಸಿದ್ಧತೆ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...

Akshaya Tritiya ಅಕ್ಷಯ ತೃತೀಯ, ಕೆಲವು ಸಾಮಾಜಿಕ ಆತಂಕಗಳು

Akshaya Tritiya ಅಕ್ಷಯ ತೃತೀಯ ಎಂದರೆ ಬಂಗಾರ ಖರೀದಿಗೆ, ಗೃಹ ಪ್ರವೇಶ,...