ನೈರುತ್ಯ ರೈಲ್ವೆ ವಲಯಕ್ಕೆ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ತಿಳಿಸಿದ್ದಾರೆ.
6.900 ಕೋಟಿ ಘೋಷಿಸಿ ಕರ್ನಾಟಕಕ್ಕೆ ಅನುದಾನ ನೀಡಿರುವುದು ಸ್ವಾಗತಾರ್ಹ. ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರಕಿರುವುದು ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲೇ ಮೊದಲು.
ಈ ಮೂಲಕ ಕಳೆದ ವರ್ಷಕ್ಕಿಂತ ಶೇ.43ರಷ್ಟು ಹೆಚ್ಚು ಮೊತ್ತ ಹಂಚಿಕೆಯಾದಂತಾಗಿದೆ.
ಹಾಗಾಗಿ ಪ್ರಧಾನಿ, ಕೇಂದ್ರ ರೈಲ್ವೆ ಸಚಿವರು ಹಾಗೂ ಇದಕ್ಕಾಗಿ ವಿಶೇಷ ಪರಿಶ್ರಮ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದರಿಂದ ರಾಜ್ಯದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಹೊಸರೂಪ ಸಿಗಲಿದೆ. ಈ ಬಾರಿ ಉತ್ತರ ಕರ್ನಾಟಕದ ರೈಲ್ವೆ ಸಂಪರ್ಕ ಜಾಲ ಬಲಪಡಿಸಲು ಒತ್ತು ಕೊಟ್ಟಿರುವುದು ವಿಶೇಷವಾಗಿದೆ.
ಇದರೊಂದಿಗೆ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಮಮತೆ ಇರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.