ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಹತ್ಯೆಗಿಡದ ವ್ಯಕ್ತಿಯನ್ನು ಉದ್ಯಮಿ ಸತನ್ ಲಾಲ್ ಎಂದು ಗುರುತಿಸಲಾಗಿದೆ.
ಈ ಹತ್ಯೆಗೆ ಸಂಬಂಧಿಸಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಮಾಹಿತಿ ಇಲ್ಲ. ಅವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪಾಕಿಸ್ತಾನದ ಹಿಂದೂ ಸಮುದಾಯ ಆರೋಪಿಸಿದೆ.
ಅಲ್ಲಿನ ಪ್ರಭಾವಿ ದಾಹರ್ ಸಮುದಾಯದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಸತನ್ ಲಾಲ್ ತಮ್ಮದೇ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಮತ್ತು ಹಿಟ್ಟಿನ ಗಿರಣಿ ಆರಂಭಿಸಿದ್ದರು. ಉದ್ಘಾಟನೆ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಗೈದ್ದಿದ್ದಾರೆ ಎಂದು ತಿಳಿದುಬಂದಿದೆ.
ದಾಹರ್ ಸಮುದಾಯದ ಜೊತೆ ಸತನ್ ಲಾಲ್ ಅವರಿಗೆ ಭೂ ವ್ಯಾಜ್ಯ ಇದ್ದಿದ್ದರಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.