Thursday, March 13, 2025
Thursday, March 13, 2025

ಬಾನೆತ್ತರಕ್ಕೆ ಹಾರಿ ಲೀನವಾದರೂ ಜೀವಂತ

Date:

ಕಲ್ಪನಾ ಚಾವ್ಲಾ ಚಂಡಿಗಡ ಹಾಗೂ ದೆಹಲಿ ನಡುವೆ ಇರುವ ಕರ್ನಾಲ್ ಎಂಬ ಪುಟ್ಟ ನಗರದಲ್ಲಿ ಜನಿಸಿದ್ದರು.
ವಿಭಜನೆ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅವರ ತಂದೆ ಸಣ್ಣ ವ್ಯಾಪಾರ ಪ್ರಾರಂಭಿಸಿದರು.
ಬಾಲ್ಯದಲ್ಲಿಯೇ ಕಲ್ಪನಾ ನಕ್ಷತ್ರಗಳನ್ನು ಮುಟ್ಟುವ ಕನಸನ್ನು ಕಾಣುತ್ತಿದ್ದಳು. ನಾಚಿಕೆ ಸ್ವಭಾವದವರಾದ ಕಲ್ಪನಾ ವಿಮಾನಗಳ ಚಿತ್ರ ಬಿಡಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು.
ಸಾಹಸ ಮಾಡುವ ಧೈರ್ಯ ಅವರಲ್ಲಿ ಎಷ್ಟಿತ್ತೆಂದರೆ ತಮ್ಮ 14ನೇ ವಯಸ್ಸಿನಲ್ಲಿಯೇ ಅವರು ವಾಹನ ಚಾಲನೆಯನ್ನೂ ಸಹ ಕಲಿತಿದ್ದರು.

ತಂದೆಯ ಸಹಾಯದಿಂದ ಕಲ್ಪನಾ ಮೊದಲ ಬಾರಿಗೆ ಚಿಕ್ಕ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ನಂತರದ ದಿನಗಳಲ್ಲಿ ಸಮಯದಲ್ಲಿ ಅವರು ಬಾಹ್ಯಾಕಾಶ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಸಂಪ್ರದಾಯಸ್ಥ ಕುಟುಂಬ ಒಪ್ಪಿಗೆ ನೀಡಲಿಲ್ಲ. ಆದರೆ ತಾಯಿ ಸಂಜುಕ್ತಾ ಚಾವ್ಲಾ ಮಗಳ ಕನಸಿಗೆ ಅಡ್ಡಿಯಾದ ಸಮಸ್ಯೆಗಳನ್ನು ದೂರ ಮಾಡಿದರು.

ನಂತರ ಕಲ್ಪನಾ ಡಯಾಲ್ ಸಿಂಗ್ ಕಾಲೇಜಿನಲ್ಲಿ ತಮ್ಮ ಕಾಲೇಜು ಜೀವನವನ್ನು ಮುಗಿಸುತ್ತಾರೆ.
ನಂತರದಲ್ಲಿ ಕಲ್ಪನಾ ಚಾವ್ಲಾ ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.
ಕುಟುಂಬದ ಸ್ನೇಹಿತನ ಪರಿಚಯದಿಂದ ಅಮೆರಿಕಕ್ಕೆ ತೆರಳಲು ಕುಟುಂಬದವರನ್ನು ಒಪ್ಪಿಸಿದ ಕಲ್ಪನಾ ಆತನ ಸಹಾಯದಿಂದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ಪಡೆಯುತ್ತಾರೆ.
ಅಮೆರಿಕಾಗೆ ಬರುತ್ತಿದ್ದಂತೆ ಅವರಿಗೆ ಫ್ರೆಂಚ್ ಮೂಲದ ಅಮೆರಿಕನ್ ವ್ಯಕ್ತಿಯ ಪರಿಚಯವಾಯಿತು.
ಪರಿಚಯ ಪ್ರೇಮಕ್ಕೆ ತಿರುಗಿ 1983 ರಲ್ಲಿ ಅವರು ಮದುವೆಯಾಗುತ್ತಾರೆ.
ಸಮರ್ಪಣಾ ಭಾವದಿಂದ ಕ್ಲಿಷ್ಟ ಪ್ರಯೋಗಗಳಲ್ಲಿ ತೊಡಗುತ್ತಿದ್ದ ಕಲ್ಪನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ.
ಅವರು 1988ರಲ್ಲಿ ಪಿ ಎಚ್ ಡಿ ಮುಗಿಸಿ, ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಏಮ್ಸ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಆರಂಭಿಸಿದರು.

1995ರಲ್ಲಿ ಮೊದಲ ಬಾರಿ ಕಲ್ಪನಾ ಗಗನಯಾತ್ರಿ ಆಗಿ ಆಯ್ಕೆಯಾಗುತ್ತಾರೆ.

2003ರ ಜನವರಿ 16ರಂದು ಕೊಲಂಬಿಯಾ ನೌಕೆ ಅಂತರಿಕ್ಷ ಕ್ಕೆ ಉಡಾವಣೆಯಾಯಿತು.
ಏಳು ಮಂದಿ ಸಾಹಸಿ ಗಗನಯಾತ್ರಿಗಳನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಸಂತೋಷದಿಂದ ಬೀಳ್ಕೋಡುತ್ತಾರೆ.

ದುರದೃಷ್ಟವಶಾತ್ ಅದು ಅವರ ಜೀವನದ ಕೊನೆಯ ಬೀಳ್ಕೊಡುಗೆಯಾಗಿತ್ತು. ಕೊಲಂಬಿಯ ಯಶಸ್ವಿಯಾಗಿ ಅಂತರಿಕ್ಷಕ್ಕೆ ತಲುಪಿತ್ತು.

ಕಲ್ಪನಾ ಸೇರಿದಂತೆ ಇತರ ಗಗನಯಾತ್ರಿಗಳು ಕಠಿಣ ಪರಿಶ್ರಮದಿಂದ ದಿನಕ್ಕೆ ಹದಿನಾರು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು.

ಶೂನ್ಯ ಗುರುತ್ವಾಕರ್ಷಣೆಯನ್ನು ಕಲ್ಪನಾ ಸಂಗೀತ ಕೇಳುತ್ತಾ ಸಸ್ಯಹಾರಿ ಆಹಾರವನ್ನು ಸೇವಿಸುತ್ತಾ ಆನಂದ ಪಡುತ್ತಿದ್ದರು.

ಆದರೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿದಾಗ ಸಮಸ್ಯೆ ಪ್ರಾರಂಭವಾಯಿತು.
ಭೂಮಿಗೆ ತಲುಪಲು 16 ನಿಮಿಷಗಳು ಇರುವಾಗ 2003ರ ಫೆಬ್ರವರಿ 1ರಂದು ಕೊಲಂಬಿಯಾ ದುರಂತ ಕಂಡಿತ್ತು.
ಅದರಲ್ಲಿರುವ ಸಾಹಸಿ ಹಾಗೂ ಉತ್ಸಾಹಿ ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ದರು. ಭಾರತದ ನಕ್ಷತ್ರವೊಂದು ಕಾಂತಿ ಕಳೆದುಕೊಂಡಿತ್ತು.

ಮಧುರ ನಗು ಹಾಗೂ ಉತ್ಸಾಹಭರಿತ ಜೀವನದಿಂದ ಲಕ್ಷಾಂತರ ಜನರ ಮನಗೆದ್ದ ಕಲ್ಪನಾ ಚಾವ್ಲಾರ ಸಾವು ಇಡೀ ಜಗತ್ತಿಗೆ ತುಂಬಲಾಗದ ನಷ್ಟವಾಗಿತ್ತು. ಸಾವು ಅವರನ್ನು ಈ ಭೂಮಿಯಿಂದ ದೂರ ಮಾಡಿದ್ದರೂ ಅಭಿಮಾನಿಗಳ ಹೃದಯದಲ್ಲಿ ಕಲ್ಪನಾ ಈಗಲೂ ಜೀವಂತವಾಗಿದ್ದಾರೆ.

ಫೆಬ್ರವರಿ 5, 2003ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ “ಮೆಟ್ ಸ್ಯಾಟ್” ಉಪಗ್ರಹ ಸರಣಿಯನ್ನು “ಕಲ್ಪನಾ” ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
ನಕ್ಷತ್ರ ಗ್ರಹ “51826 ಕಲ್ಪನಾಚಾವ್ಲಾ” ಎಂದು ನಾಮಕರಣ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.
ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಿದೆ.
ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...