Saturday, October 5, 2024
Saturday, October 5, 2024

ಗಗಯಾನಿ ಕಲ್ಪನಾ ಚಾವ್ಲಾ

Date:

ವಿಕ್ಷಕರೇ ಎಲ್ಲರಿಗೂ ನಮಸ್ಕಾರ
KliveNews You tube channel ಗೆ ಸ್ವಾಗತ. ನಾನು ಅಂಜುಮ್ ಬಿ.ಎಸ್‌.

ಇಂದಿನ ವಿಶೇಷ ಕಾರ್ಯಕ್ರಮ
ಗಗನ ಯಾನಿ ಕಲ್ಪನಾ ಚಾವ್ಲಾ

ವೀಕ್ಷಕರೇ ,ಕಲ್ಪನಾ ಚಾವ್ಲಾ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ಕಲ್ಪನಾ ಚಾವ್ಲಾ ಅವರ ಸವಿನೆನಪಿಗಾಗಿ ನಾವು ಅವರ ಜೀವನದ ಒಂದಿಷ್ಟು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಕಲ್ಪನಾ ಚಾವ್ಲಾ ಚಂಡಿಗಡ ಹಾಗೂ ದೆಹಲಿ ನಡುವೆ ಇರುವ ಕರ್ನಾಲ್ ಎಂಬ ಪುಟ್ಟ ನಗರದಲ್ಲಿ ಜನಿಸಿದ್ದರು. ( Kalpana photo)
ವಿಭಜನೆ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅವರ ತಂದೆ ಸಣ್ಣ ವ್ಯಾಪಾರ ಪ್ರಾರಂಭಿಸುತ್ತಾರೆ. (Image of India and Pakistan)
ಬಾಲ್ಯದಲ್ಲಿಯೇ ಕಲ್ಪನಾ ನಕ್ಷತ್ರಗಳನ್ನು ಮುಟ್ಟುವ ಕನಸನ್ನು ಕಾಣುತ್ತಿದ್ದಳು. ( Image of stars) ನಾಚಿಕೆ ಸ್ವಭಾವದವರಾದ ಕಲ್ಪನಾ ವಿಮಾನಗಳ ಚಿತ್ರ ಬಿಡಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು. (flight)
ಸಾಹಸ ಮಾಡುವ ಧೈರ್ಯ ಅವರಲ್ಲಿ ಎಷ್ಟಿತ್ತೆಂದರೆ ತಮ್ಮ 14ನೇ ವಯಸ್ಸಿನಲ್ಲಿಯೇ ಅವರು ವಾಹನ ಚಾಲನೆಯನ್ನೂ ಸಹ ಕಲಿತಿದ್ದರು. ( Driving)

ತಂದೆಯ ಸಹಾಯದಿಂದ ಕಲ್ಪನಾ ಮೊದಲ ಬಾರಿಗೆ ಚಿಕ್ಕ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ನಂತರದ ದಿನಗಳಲ್ಲಿ ಸಮಯದಲ್ಲಿ ಅವರು ಬಾಹ್ಯಾಕಾಶ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿದರು.( Image of erospace)
ಅವರ ನಿರ್ಧಾರಕ್ಕೆ ಸಂಪ್ರದಾಯಸ್ಥ ಕುಟುಂಬ ಒಪ್ಪಿಗೆ ನೀಡಲಿಲ್ಲ. ( Image of family) ಆದರೆ ತಾಯಿ ಸಂಜುಕ್ತಾ ಚಾವ್ಲಾ ಮಗಳ ಕನಸಿಗೆ ಅಡ್ಡಿಯಾದ ಸಮಸ್ಯೆಗಳನ್ನು ದೂರ ಮಾಡಿದರು.( Image of mother and daughter)

ನಂತರ ಕಲ್ಪನಾ ಡಯಾಲ್ ಸಿಂಗ್ ಕಾಲೇಜಿನಲ್ಲಿ ತಮ್ಮ ಕಾಲೇಜು ಜೀವನವನ್ನು ಮುಗಿಸ್ತಾರೆ.( Image of Dayal Singh college)
ನಂತರದಲ್ಲಿ ಕಲ್ಪನಾ ಚಾವ್ಲಾ ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಕುಟುಂಬದ ಸ್ನೇಹಿತನ ಪರಿಚಯದಿಂದ ಅಮೆರಿಕಕ್ಕೆ ತೆರಳಲು ಕುಟುಂಬದವರನ್ನು ಒಪ್ಪಿಸಿದ ಕಲ್ಪನಾ ಆತನ ಸಹಾಯದಿಂದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ಪಡೆಯುತ್ತಾರೆ. ( Image of techsos University)
ಅಮೆರಿಕಾಗೆ ಬರುತ್ತಿದ್ದಂತೆ ಅವರಿಗೆ ಫ್ರೆಂಚ್ ಮೂಲದ ಅಮೆರಿಕನ್ ವ್ಯಕ್ತಿಯ ಪರಿಚಯವಾಗತ್ತೆ.( Image meeting frds)ಪರಿಚಯ ಪ್ರೇಮಕ್ಕೆ ತಿರುಗಿ 1983 ರಲ್ಲಿ ಅವರು ಮದುವೆಯಾಗ್ತಾರೆ. (Marrige )
ಸಮರ್ಪಣಾ ಭಾವದಿಂದ ಕ್ಲಿಷ್ಟ ಪ್ರಯೋಗಗಳಲ್ಲಿ ತೊಡಗುತ್ತಿದ್ದ ಕಲ್ಪನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ.
ಅವರು 1988ರಲ್ಲಿ ಪಿ ಎಚ್ ಡಿ ಮುಗಿಸಿ, ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಏಮ್ಸ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಆರಂಭಿಸುತ್ತಾರೆ.( Image of NASA )

1995ರಲ್ಲಿ ಮೊದಲ ಬಾರಿ ಕಲ್ಪನಾ ಗಗನಯಾತ್ರಿ ಆಗಿ ಆಯ್ಕೆಯಾಗುತ್ತಾರೆ.( Image of kalpana chawla )

2003ರ ಜನವರಿ 16ರಂದು ಕೊಲಂಬಿಯಾ ನೌಕೆ ಅಂತರಿಕ್ಷ ಕ್ಕೆ ಉಡಾವಣೆಯಾಗತ್ತೆ.( Image of Columbia )
ಏಳು ಮಂದಿ ಸಾಹಸಿ ಗಗನಯಾತ್ರಿಗಳನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಸಂತೋಷದಿಂದ ಬೀಳ್ಕೋಡುತ್ತಾರೆ.

ದುರದೃಷ್ಟವಶಾತ್ ಅದು ಅವರ ಜೀವನದ ಕೊನೆಯ ಬೀಳ್ಕೊಡುಗೆ ಯಾಗಿತ್ತು. ಕೊಲಂಬಿಯ ಯಶಸ್ವಿಯಾಗಿ ಅಂತರಿಕ್ಷಕ್ಕೆ ತಲುಪಿತ್ತು.

ಕಲ್ಪನಾ ಸೇರಿದಂತೆ ಇತರ ಗಗನಯಾತ್ರಿಗಳು ಕಠಿಣ ಪರಿಶ್ರಮದಿಂದ ದಿನಕ್ಕೆ ಹದಿನಾರು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು. ( Image of kalpana with others)

ಶೂನ್ಯ ಗುರುತ್ವಾಕರ್ಷಣೆಯನ್ನು ಕಲ್ಪನಾ ಸಂಗೀತ ಕೇಳುತ್ತಾ ಸಸ್ಯಹಾರಿ ಆಹಾರವನ್ನು ಸೇವಿಸುತ್ತಾ ಆನಂದ ಪಡುತ್ತಿದ್ದರು.( Image of kalpana )

ಆದರೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿದಾಗ ಸಮಸ್ಯೆ ಪ್ರಾರಂಭವಾಯಿತು. (Vedio of flight landing ) ಭೂಮಿಗೆ ತಲುಪಲು 16 ನಿಮಿಷಗಳು ಇರುವಾಗ 2003ರ ಫೆಬ್ರವರಿ 1ರಂದು ಕೊಲಂಬಿಯಾ ದುರಂತ ಕಂಡಿತ್ತು.
ಅದರಲ್ಲಿರುವ ಸಾಹಸಿ ಹಾಗೂ ಉತ್ಸಾಹಿ ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ದರು. (Tragedy of kalpana’s death) ಭಾರತದ ನಕ್ಷತ್ರವೊಂದು ಕಾಂತಿ ಕಳೆದುಕೊಂಡಿತ್ತು.

ಮಧುರ ನಗು ಹಾಗೂ ಉತ್ಸಾಹಭರಿತ ಜೀವನದಿಂದ ಲಕ್ಷಾಂತರ ಜನರ ಮನಗೆದ್ದ ಕಲ್ಪನಾ ಚಾವ್ಲಾರ ಸಾವು ಇಡೀ ಜಗತ್ತಿಗೆ ತುಂಬಲಾಗದ ನಷ್ಟವಾಗಿತ್ತು. ಸಾವು ಅವರನ್ನು ಈ ಭೂಮಿಯಿಂದ ದೂರ ಮಾಡಿದ್ದರೂ ಅಭಿಮಾನಿಗಳ ಹೃದಯದಲ್ಲಿ ಕಲ್ಪನಾ ಈಗಲೂ ಜೀವಂತವಾಗಿದ್ದಾರೆ. (Image of kalpana )

ಫೆಬ್ರವರಿ 5, 2003ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ “ಮೆಟ್ ಸ್ಯಾಟ್” ಉಪಗ್ರಹ ಸರಣಿಯನ್ನು “ಕಲ್ಪನಾ” ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
ನಕ್ಷತ್ರ ಗ್ರಹ “51826 ಕಲ್ಪನಾಚಾವ್ಲಾ” ಎಂದು ನಾಮಕರಣ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.
ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಿದೆ.(ndtv)
ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.

ಆತ್ಮವಿಶ್ವಾಸವೊಂದಿದ್ದರೆ ಗಗನವನ್ನೇ ಏರಬಹುದು. ಇಳಿಯದಿದ್ದರೂ ಚಿಂತೆಯಿಲ್ಲ. ತಮ್ಮ ಗುರಿಯತ್ತ ಪ್ರಯತ್ನ ಮಾಡಿದ ಅನುಭವ ಆ ಆತ್ಮ ಪಡೆದುಕೊಂಡಿದೆ. ಸಾವಿಗೆ ಅಂಜುತ್ತಿದ್ದರೆ ಸಾಧನೆ ಮಾಡಲಾದೀತೇ?

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...