ರಾಜ್ಯದಲ್ಲಿ 15 ರಿಂದ 17 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣ ಮಂದಗತಿಯಲ್ಲಿ ಸಾಗುತ್ತಿದೆ. ಜನವರಿ 3ರಿಂದ ಆರಂಭವಾಗಿರುವ ಪ್ರಕ್ರಿಯೆಯಲ್ಲಿ 24 ದಿನದಲ್ಲಿ ಕೇವಲ ಶೇ. 68 ಮಾತ್ರ ಲಸಿಕಾಕರಣ ಸಾಧ್ಯವಾಗಿದೆ.
ಸರ್ಕಾರ ಪ್ರತಿದಿನ ಐದು ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿತ್ತು, ಸರ್ಕಾರ ಅಂದುಕೊಂಡ ರೀತಿಯಲ್ಲೇ ಲಸಿಕಾಕರಣ ಪ್ರಕ್ರಿಯೆ ಸಾಗಿದ್ದರೆ ಒಂದೇ ವಾರದಲ್ಲಿ ಮುಗಿಯುತ್ತಿತ್ತು. ಇದುವರೆಗೆ 31.75 ಲಕ್ಷ ಫಲಾನುಭವಿಗಳ ಪೈಕಿ ಇರುವವರಿಗೆ 21.82 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.
28 ದಿನಗಳ ಬಳಿಕ ಎರಡನೇ ಡೋಸ್ ನೀಡಬೇಕಾದ ಸಮಯ ಬಂದರೂ ಮೊದಲನೇ ಡೋಸ್ ನೀಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
15 ರಿಂದ 17 ವರ್ಷ ವಯೋಮಾನದವರು ಕೋವಿಡ್ ಲಸಿಕಾಕರಣ ಪ್ರಕ್ರಿಯೆಯಲ್ಲಿ ಗದಗ ಜಿಲ್ಲೆ ಶೇ.99 ರಷ್ಟು ಪೂರೈಸಿದೆ. ಕೊಡಗು ಶೇ.92 , ಉಡುಪಿ ಶೇ.87, ದಕ್ಷಿಣ ಕನ್ನಡ ಶೇ.81, ಕಲ್ಬುರ್ಗಿ ಶೇ.54, ಬಿಬಿಎಂಪಿ ಶೇ.57, ರಾಯಚೂರು ಶೇ.58, ಬೀದರ್ ಶೇ.60, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ.63 ರಷ್ಟು ಲಸಿಕಾಕರಣ ಪ್ರಕ್ರಿಯೆ ನಡೆದಿದೆ.