ದೇಶದ ಮಧ್ಯಮ ವರ್ಗ ಈ ಸಲ ಕೇಂದ್ರ ಬಜೆಟ್ ನಿಂದ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಮತ್ತೊಂದು ಕಡೆ, ಆರ್ಥಿಕ ಸವಾಲಿದುರು ತಮ್ಮ ಬೇಡಿಕೆಗಳು ಈಡೇರಬಹುದೇ ಎಂಬ ಪ್ರಶ್ನೆಯೂ ಅವರಲ್ಲಿದೆ.
ಹೀಗಿದ್ದರೂ, ಕೆಲವೊಂದು ಬೇಡಿಕೆಗಳನ್ನು ಸರಕಾರ ಪರಿಗಣಿಸಬೇಕಾಗಿದೆ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.
ಈ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಮಧ್ಯಮವರ್ಗದ ಸುಮಾರು ಎರಡು ಸಾವಿರ ಜನರನ್ನು ಬಜೆಟ್ ನಿರೀಕ್ಷೆಗಳ ಬಗ್ಗೆ ಸಂದರ್ಶಿಸಲಾಯಿತು. ಮಧ್ಯಮ ವರ್ಗದ ಜನತೆ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಬೇಡಿಕೆಯ ಬೆನ್ನೆಲುಬು. ಭಾರತದ ಜಿಡಿಪಿಯಲ್ಲಿ ವೆಚ್ಚದ ಪಾಲು ಐದರಲ್ಲಿ ಮೂರು ಭಾಗ. ಇದರಲ್ಲಿ ಬಹುಪಾಲು ಮಧ್ಯ ವರ್ಗದ ಜನತೆಯ ವೆಚ್ಚಗಳಿಂದಲೇ ಬರುತ್ತದೆ.
ಕೋವಿಡ್ ನ ಎರಡು ಅಲೆಗಳ ಹೊಡಿ ತದನಂತರ ಭಾರತದ ಮಧ್ಯಮ ವರ್ಗದ ಜನಸಂಖ್ಯೆ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅವರನ್ನು ಅನೇಕ ಮಂದಿ ತಮ್ಮ ಉಳಿತಾಯದ ಚೂರುಪಾರು ಹಣವನ್ನೂ ಖರ್ಚು ಮಾಡಬೇಕಾದ ಸನ್ನಿವೇಶ ಬಂದಿದೆ. ಲಕ್ಷಾಂತರ ಮಂದಿ ಮತ್ತೆ ಕಡುಬಡವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸರಕಾರದ ಪ್ರಕಾರ ಸುಮಾರು 30 ಕೋಟಿ ಮಂದಿ ಮಧ್ಯಮ ವರ್ಗದ ಜನತೆಯಾಗಿದ್ದಾರೆ. ಆದರೆ, ಕೋವಿಡ್ ನ ಎರಡು ಅಲೆಗಳ ಹೊಡೆತದ ಪರಿಣಾಮ ಮಧ್ಯಮವರ್ಗದ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಜನರು ಕಡಿಮೆಯಾಗಿದ್ದಾರೆ. ಸ್ವಂತ ಕಾರು ಹೊಂದಿರುವವರು, ಆದಾಯ ತೆರಿಗೆ ಕಟ್ಟುವವರು, ಉದ್ಯೋಗ ಭದ್ರತೆ ಇರುವವರು, ಪಿಂಚಣಿ ಪಡೆಯುವವರು, ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಹೂಡಿಕೆ ಮಾಡುವವರು, ಮಧ್ಯಮ ವರ್ಗದ ಜನರಾಗಿದ್ದಾರೆ. ಅವರ ಕೈಯಲ್ಲಿ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯ.