Monday, December 15, 2025
Monday, December 15, 2025

ಕರುನಾಡ ವಿವಿಧ ಪರಿಣಿತರಿಗೆ ಪದ್ಮಶ್ರೀ ಪುರಸ್ಕಾರ

Date:

ರಾಜ್ಯದ ಐವರು ಸಾಧಕರಿಗೆ ಪದ್ಮ ಶ್ರೀ ಮುಕುಟವನ್ನು ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಂಡಾಯ ಸಾಹಿತಿ ದಿವಂಗತ ಡಾ.ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಲಭಿಸಿದೆ.

ಬಂಟ್ವಾಳ ತಾಲೂಕಿನ ಆಧುನಿಕ ಭಗೀರಥ ಎಂದೇ ಹೆಸರುವಾಸಿಯಾದ ಅಮೈ ಮಹಾಲಿಂಗ್ ನಾಯ್ಕ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಲಭಿಸಿದೆ.

“ನಾನೇನೋ ಸಣ್ಣ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಗುರುತಿಸುವುದು ಖುಷಿ ತಂದಿದೆ. ಇಡೀ ದೇಶ ನನ್ನ ಆಶೀರ್ವಾದ ಮಾಡಿದಂತಾಗಿದೆ. 2004ರಲ್ಲಿ ನನಗೆ ಮೊದಲ ಸನ್ಮಾನ ಸಿಕ್ಕಿತ್ತು. ನಂತರ ಹಲವು ಸನ್ಮಾನ ಪ್ರಶಸ್ತಿಗಳು ಸಿಕ್ಕಿವೆ” ಎಂದು ಅಮೈ ಮಹಾಲಿಂಗ ನಾಯ್ಕ ಅವರು ತಿಳಿಸಿದ್ದಾರೆ.

ಹೊಸಹಳ್ಳಿ ಕೇಶವಮೂರ್ತಿಗಳು ಅಂದರೆ ಗಮಕ ಪ್ರಿಯರ ಕಿವಿಯಲ್ಲಿ
ಇನಿದಾದ ಸ್ವರ ಮೊರೆಯುತ್ತದೆ. ಆ ಸ್ವರ ಬೇರೆಯಲ್ಲ‌ ಗಮಕ ವಿದ್ವಾನ್ ಎಚ್ ಆರ್ ಕೇಶವಮೂರ್ತಿಅವರದ್ದು.
ನಾಡಿನೆಲ್ಲೆಡೆ ಅವರ ಗಮಕ ಸಂಗೀತ ಗಂಧದಂತೆ ಹರಡಿದೆ.
ಜೊತೆಗೆ ಅವರೊಟ್ಟಿಗೆ
ಕಾವ್ಯ ವ್ಯಾಖ್ಯಾನ ನೀಡುತ್ತಿದ್ದ ಹಿರಿಯ ಮಾರ್ಕಾಂಡೇಯ ಅವಧಾನಿಗಳನ್ನೂ ಗಮಕ ಪ್ರಿಯರು ಎಂದಿಗೂ ಮರೆಯಲಾರರು.

ಶಿವಮೊಗ್ಗ ಸನಿಹದ ಹೊಸಹಳ್ಳಿ ಕೇಶವಮೂರ್ತಿಯವರ ಹುಟ್ಟೂರು. ಗಮಕ ಎಂದರೇನು ಗೊತ್ತಿರದ ಶ್ರೋತೃಗೆ ತಮ್ಮ ಕಾವ್ಯಗಾಯನ ಧಾಟಿಯಲ್ಲೇ ಆನಂದ ಹೊಂದುವಂತೆ ಮಾಡಿಬಿಡುವ ಮಾಂತ್ರಿಕ ಹಿರಿಯ ಕೇಶವ ಮೂರ್ತಿ.
ಕುಮಾರವ್ಯಾಸ ಪ್ರಶಸ್ತಿ ಅವರ ಮಡಿಲಿಗೆ ಆಗಲೇ ಬಿದ್ದಿದೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಅವರನ್ನ ಹುಡುಕಿ ಕೊಂಡು ಬಂದಿವೆ. ಈಗ ಪದ್ಮಶ್ರೀ ಅರಸಿ ಬಂದಿರುವುದು ಇಡೀ ಗಮಕ ಕಲಾವಿದ ಬಳಗಕ್ಕೇ ಸಂಭ್ರಮದ ಸಂಗತಿ.

ಹೆಚ್.ಆರ್. ಕೇಶವಮೂರ್ತಿ ಅವರು “ಎಲ್ಲಾ ಹಿರಿಯರ ಆಶೀರ್ವಾದ, ಪೂರ್ವಿಕರ ಪುಣ್ಯದ ಫಲ ಪ್ರಶಸ್ತಿ ಬರುವುದು ಮುಖ್ಯವಲ್ಲ, ಕಲೆಯನ್ನು ಉಳಿಸಿ, ಬೆಳೆಸಬೇಕು ಎಂಬುದು ಮುಖ್ಯ ಉದ್ದೇಶ. ಸಾಧಕರು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕೇಂದ್ರಸರ್ಕಾರಕ್ಕೆ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ರೈತರಿಗೆ ಪೂರಕವಾಗುವ ಕೃಷಿ ಪರಿಕರ ಆವಿಷ್ಕರಿಸಿದ ಗ್ರಾಮೀಣ ಪ್ರತಿಭೆ ಹಾಗೂ ರೈತ ವಿಜ್ಞಾನಿ ಅಬ್ದುಲ್ ಖಾದರ್ ಅವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಗರಿಯನ್ನು ನೀಡಿದೆ.

“ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷವಾಗಿದೆ. ಇದು ನನಗೆ ಸಿಕ್ಕ ಪ್ರಶಸ್ತಿ ಎಲ್ಲಾ ದೇಶದ ಕೃಷಿ ಸಂಕುಲಕ್ಕೆ ದೊರೆತ ಪ್ರಶಸ್ತಿಯಾಗಿದೆ. ಅಣ್ಣಿಗೇರಿಯ ಹೆಸರನ್ನು ಕೊಂಡೊಯ್ದ ರೈತ ಬಾಂಧವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ” ಎಂದು ಅಬ್ದುಲ್ ಖಾದರ್ ನಡಕಟ್ಟಿನ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ನ್ಯಾಷನಲ್ ಅಗ್ರಿಕಲ್ಚರ್ ರಿಸರ್ಚ್ ಅಂಡ್ ಎಜುಕೇಶನ್ ಡಿಪಾರ್ಟ್ಮೆಂಟ್ ನ ಕಾರ್ಯದರ್ಶಿ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿವಿಯ ಚಾನ್ಸಲರ್ ಆಗಿರುವ ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಕರ್ನಾಟಕದ ಐವರು ಗಣ್ಯರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಪ್ರತಿಯೊಬ್ಬ ಕನ್ನಡಿಗರಿಗೂ ಸಂತಸ ತಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...