Sunday, December 7, 2025
Sunday, December 7, 2025

ಅಮರ್ ಜವಾನ್ ಜ್ಯೋತಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನ

Date:

1971ರ ಇಂಡೋ-ಪಾಕ್ ಕದನದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ದಿಲ್ಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದ್ದ ಅಮರ ಜವಾನ್ ಜ್ಯೋತಿಯನ್ನು ರಾಜಧಾನಿಯ ರಾಷ್ಟ್ರೀಯ ಯುದ್ದ ಸ್ಮಾರಕದಲ್ಲಿ ವಿಲೀನಗೊಳಿಸಲಾಗಿದೆ.
1972ರ ಜ.26ರಂದು ಇಂದಿರಾಗಾಂಧಿಯವರು ಜ್ಯೋತಿಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆಗೊಂಡ 80 ವರ್ಷಗಳ ಬಳಿಕ ಅಮರ ಜವಾನ್ ಜ್ಯೋತಿ ಸ್ಥಳಾಂತರಗೊಂಡಿದ್ದು, ಜ್ಯೋತಿ ನಂದಿಸಿದ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.


ನವಭಾರತದ ಹೆಸರನ್ನು ಇನ್ನೆಷ್ಟು ಸ್ಮಾರಕಗಳು ಹೊಸ ಐಡಿಯಾಗೆ ಬಲಿಯಾಗಬೇಕೋ ಗೊತ್ತಿಲ್ಲ.ಎರಡೂ ಸ್ಮಾರಕಗಳಲ್ಲಿ ಜ್ಯೋತಿ ಉರಿಸುವುದು ಸರ್ಕಾರಕ್ಕೆ ಕಷ್ಟವೇನಿರಲಿಲ್ಲ ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೆದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜ್ಯೋತಿ ಅಥವಾ ಜ್ವಾಲೆಗಳ ವಿಲೀನವು ಒಂದು ನೈಸರ್ಗಿಕ ಕ್ರಿಯೆ. ಇದು ತಾರ್ಕಿಕವಾಗಿಯೂ ಸರಿ ಇದೆ. ಹುತಾತ್ಮ ಯೋಧರು, ಸಮರಗಳ ನೆನಪಿಗೆ ಒಂದೇ ಪ್ರಮುಖ ಸ್ಥಳವಿದ್ದರೆ ಉತ್ತಮವೇ. ಇಲ್ಲಿಯೇ ಎಲ್ಲ ಗೌರವಾರ್ಥ ಕಾರ್ಯಕ್ರಮಗಳನ್ನು ನಡೆಸಬಹುದು. ಸರ್ಕಾರದ ನಡೆ ಸೇರಿ ಇದೆ ಎಂದು ಭೂಸೇನೆ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಶಸ್ತ್ರ ಪಡೆಯ ಸಂಯೋಜಿತ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಬಿ.ಆರ್. ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ, ಅಮರಜ್ಯೋತಿ ಜ್ವಾಲೆಯನ್ನು ಭಾಗಶಃ ತೆಗೆದುಕೊಂಡು ಹೋಗಿ ಇಂಡಿಯಾ ಗೇಟ್ ನಿಂದ 400 ಮೀ. ದೂರದಲ್ಲಿರುವ ಎನ್ ಡಬ್ಲ್ಯೂ ಎಂ ನಲ್ಲಿ ವಿಲೀನಗೊಳಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಹಾಗೂ ಯೋಧರು ಮಿಲಿಟರಿ ಗೌರವ ಸಲ್ಲಿಸಿದರು.
ಮೊದಲ ವಿಶ್ವಯುದ್ಧ ಹಾಗೂ ಅಂಗ್ಲೋ -ಆಫ್ಘನ್ ತಮ್ಮ ಪರವಾಗಿ ಹೋರಾಡಿದ ಯೋಧರಿಗಾಗಿ ಬ್ರಿಟಿಷರು ಇಂಡಿಯಾ ಗೇಟ್ ನಿರ್ಮಿಸಿದ್ದರು.
1971ರ ಇಂಡೋ-ಪಾಕ್ ಕದನದಲ್ಲಿ ಹುತಾತ್ಮ ಯೋಧರ ಗೌರವಾರ್ಥವಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಇಂಡಿಯಾ ಗೇಟ್ ಬಳಿ ಅಮರ ಜವಾನ್ ಜ್ಯೋತಿ ನಿರ್ಮಿಸಲು ಆದೇಶಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...