Saturday, November 23, 2024
Saturday, November 23, 2024

ಕಣ್ಮನ ಸೆಳೆದ ಕೆರೆ ಹಬ್ಬ

Date:

ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡವು ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆ ಕಟ್ಟೆ ಕೆರೆಯಾ ಜೀರ್ಣೋದ್ಧಾರವನ್ನು ಕೈಗೊಂಡು, ಕೆರೆಯ ಆವರಣದಲ್ಲಿ ವೃಕ್ಷಮಾತೆ ಶ್ರೀಮತಿ ತುಳಸಿ ಗೌಡ ಹೆಸರಿನ ಉದ್ಯಾನವನದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ಕೆರೆಗೆ ಮೀನುಗಳನ್ನು ಬಿಡುವ ಮೂಲಕ ಹಾಗೂ ಕೆರೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಲೋಕಾರ್ಪಣೆ ಮಾಡಿದರು.

ಬೆಳಿಗ್ಗೆಯ ಅರುಣರಾಗ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿದ್ದರು. ಜಿಲ್ಲಾ ಪ್ರವಾಸೋದ್ಯಮ ವೇದಿಕೆಯ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರು ಸಂಸದ ಬಿ.ವೈ.ರಾಘವೇಂದ್ರ ಅವರು ಕೊಡಮಾಡಿದ್ದ 2 ಲಕ್ಷ ರೂಪಾಯಿ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ದೇಣಿಗೆಯನ್ನು ಘೋಷಿಸಿದರು.

ಸುಮಾರು ಐದೂವರೆ ಎಕರೆ ವಿಸ್ತೀರ್ಣವಿರುವ ಜಾಗದಲ್ಲಿ ಮೂರುವರೆ ಎಕರೆಯಲ್ಲಿ ಪುನರುಜ್ಜೀವನ ಕೈಗೊಂಡ ಪರಿಸರಾಸಕ್ತ ತಂಡವು ಸ್ಥಳೀಯರು ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಅನೇಕ ದಾನಿಗಳ ಸಹಾಯ ಹಸ್ತದಿಂದ ಕೆರೆಯನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಹಬ್ಬ ಹಾಗೂ ಉದ್ಯಾನವನವನ್ನು ವೃಕ್ಷಮಾತೆ ತುಳಸಿ ಗೌಡ ಅವರು ಉದ್ಘಾಟಿಸುವ ಮೂಲಕ ಲೋಕಾರ್ಪಣೆ ಮಾಡಿದರು. ವೃಕ್ಷಮಾತೆ ಅವರದೇ ಶೈಲಿಯಲ್ಲಿ ಕೆರೆ ಪುನರುಜ್ಜೀವನ ಕಾರ್ಯದ ಬಗ್ಗೆ ಕೆ-ಲೈವ್ ಮೀಡಿಯಾ ದೊಂದಿಗೆ ಹಂಚಿಕೊಂಡರು.

ಪರಿಸರ ಚಿಂತಕರೂ ಆದ ಪ್ರೊ.ಎ.ಎಸ್. ಚಂದ್ರಶೇಖರ್ ಅವರು 2021 ರಿಂದ 2030 ರವರೆಗಿನ ಈ ಹತ್ತು ವರ್ಷಗಳ ಕಾಲ ವಿಶ್ವಸಂಸ್ಥೆ ಏಕೋ ಸಿಸ್ಟಮ್ ರೆಸ್ಟೋರೇಷನ್ ಬಗ್ಗೆ ಮಾತನಾಡಿದರು.

eco-system ಹೇಗೆ ಆಗಿದೆ. ಪರಿಸರದಲ್ಲಿರುವ ನೆಲ, ಜಲ, ಕಾಡು, ಪ್ರಾಣಿ, ಸಸ್ಯಗಳು ನಗರೀಕರಣದಿಂದ ಹಾಳಾಗಿದೆ. ಪರಿಸರವನ್ನು ಸರಿಪಡಿಸಲು ಈ ಹತ್ತು ವರ್ಷಗಳ ಕಾಲ ವಿಶ್ವಸಂಸ್ಥೆ ಪಣತೊಟ್ಟಿದೆ. ವಿಶ್ವಸಂಸ್ಥೆಯ ಜೊತೆ ಪರಿಸರವನ್ನು ರಕ್ಷಿಸುವ ಹೊಣೆ ಎಲ್ಲರದ್ದು ಎಂದು ಪ್ರೊ.ಎ.ಎಸ್. ಚಂದ್ರಶೇಖರ್ ಹೇಳಿದರು.

ಅರ್ಥಶಾಸ್ತ್ರಜ್ಞರು,ಪರಿಸರ ಚಿಂತಕರು ಹಾಗೂ ಹೋರಾಟಗಾರರಾದ ಪ್ರೊ.ಬಿ.ಎಂ. ಕುಮಾರಸ್ವಾಮಿ ಅವರು ಮಾತನಾಡಿ 1984 ರಲ್ಲಿ ಪಶ್ಚಿಮಘಟ್ಟದ ಉಳಿವಿಗಾಗಿ ಪಶ್ಚಿಮ ಘಟ್ಟಗಳ ರಾಜ್ಯಗಳು ಕನ್ಯಾಕುಮಾರಿಯಿಂದ ಗೋವಾದ ವರೆಗೆ ಹಾಗೂ ಗುಜರಾತ್ ನಿಂದ ಗೋವಾದವರಿಗೆ ಆಯೋಜಿಸಿದ್ದ ನೂರು ದಿನಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರ ಬಗ್ಗೆ ಮೆಲುಕು ಹಾಕುವುದರ ಜೊತೆಗೆ ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರು ತಿಳಿಸಿದರು.

ಕೆರೆ ಹಬ್ಬದ ಎರಡನೇ ಭಾಗ ಸಂಧ್ಯಾರಾಗ ಸಂಜೆಯ ಗೋಧೂಳಿ ಸಮಯಕ್ಕೆ ಸರಿಯಾಗಿ ಕೆರೆಯ ಸುತ್ತಲೂ ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ಹಾಗೂ ಆರತಿ ಕಾರ್ಯಕ್ರಮ ನೆರವೇರಿತು.

ಕೆರೆಯ ಸುತ್ತಲೂ ಹಚ್ಚಿದ ಸಾಲು ಹಣತೆಯ ಬೆಳಕು ನೋಡುತ್ತಿದ್ದಂತೆ ನೆರೆದವರು ಮಂತ್ರಮುಗ್ಧರಾದರು. ಜೊತೆಗೆ ಕೆರೆಯ ನೀರಿನಲ್ಲಿ ದೀಪಗಳ ಪ್ರತಿಬಿಂಬ ನೆರೆದವರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯಿತು.

ಸಂಜೆಯ ಇನ್ನೊಂದು ಆಕರ್ಷಣೆ ಕೆರೆಯ ಆರತಿ. ಕೆರೆ ಆರತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ವೃಕ್ಷಮಾತೆ ಶ್ರೀಮತಿ ತುಳಸಿ ಗೌಡ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ ಅವರು ಕಿರಿಕೆ ಆರತಿ ಮಾಡಿ ಕೆರೆಯಲ್ಲಿ ದೀಪಗಳನ್ನು ತೇಲಿ ಬಿಟ್ಟರು. ದೀಪೋತ್ಸವದಲ್ಲಿ ಪರಿಸರಸ್ನೇಹಿ ಗೋಮಯ ದೀಪಗಳನ್ನ ಬಳಸಿದ್ದು ವಿಶೇಷವಾಗಿತ್ತು.

ಸಂಜೆಯ ಸಂಧ್ಯಾವಂದನೆ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಅವರಿಗೆ ಸನ್ಮಾನವನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಬಸವಕೇಂದ್ರದ ಡಾ. ಶ್ರೀ ಬಸವಮರುಳ ಸಿದ್ಧ ಸ್ವಾಮೀಜಿ, ಹೊಸನಗರ ತಾಲೂಕಿನ ಮೂಲೆಗದ್ದೆಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ಅವರು, ವಾಜಪೇಯಿ ಬಡಾವಣೆಯ ಸಾರ್ವಜನಿಕರು ಮತ್ತು ಪುನರುಜ್ಜೀವನ ಕಾರ್ಯದಲ್ಲಿ ಭಾಗಿಯಾಗಿದ್ದವರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...