ಕಾಂಗ್ರೆಸ್ ನ ಪಾದಯಾತ್ರೆ ತಡೆಯಲು ಯಾವುದೇ ಷಡ್ಯಂತ್ರ ನಡೆಸಲಿಲ್ಲ. ವೈಫಲ್ಯಕ್ಕೆ ಕಾಂಗ್ರೆಸ್ನವರು ಏನು ಬೇಕಾದರೂ ಮಾತನಾಡಬಹುದು. ಮೊದಲಿಗೆ ಕೊರೋನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು ಮಹಾತಪ್ಪು” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
“ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟ ಕಾಂಗ್ರೆಸ್ ನಾಯಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜನರಿಗೆ ನೆರವಾಗುವ ದಕ್ಕಿಂತ ಸ್ವಾರ್ಥ ಉದ್ದೇಶವೇ ಪ್ರಧಾನವಾಗಿತ್ತು. ನೀರಿನ ವಿಚಾರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ” ಎಂದು ಆರಗ ಜ್ಞಾನೇಂದ್ರ ಅವರು ಟೀಕಿಸಿದ್ದಾರೆ.
ಸರ್ಕಾರ ಮೇಕೆದಾಟು ಕೈ ಬಿಟ್ಟಿಲ್ಲ. ಎಲ್ಲರ ಉದ್ದೇಶ ಯೋಜನೆ ಆರಂಭವಾಗಬೇಕು ಎಂಬುದಾಗಿದೆ. ಆದರೂ ಆ ಪಕ್ಷವನ್ನು ಆಂತರಿಕ ರಾಜಕೀಯ ಮೇಲಾಟಕ್ಕೆ ಪಾದಯಾತ್ರೆ ನಡೆದಿದೆ ಆರೋಪಿಸಿದ್ದಾರೆ.
ಕೊರೋನಾ ನಿಯಮ ಉಲ್ಲಂಘಿಸಿದ ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ, ‘ಕಾಯ್ದೆ ಎಲ್ಲರಿಗೂ ಒಂದೇ. ಇಲ್ಲಿ ಯಾರೂ ದೊಡ್ಡವರಲ್ಲ ಎಂದಷ್ಟೇ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.