Sunday, December 14, 2025
Sunday, December 14, 2025

ಮತ್ತಷ್ಟು ಚಳಿಗಾಲ ಮುಂದೆ ಕಾದಿದೆ

Date:

ಕಳೆದ ಮೂರು ದಿನದಿಂದ ಸಂಜೆಯಾದರೆ ತಣ್ಣನೆ ಚಳಿ ಶುರುವಾಗುತ್ತಿದೆ. ರಾತ್ರಿ ವೇಳೆಗೆ ಕನಿಷ್ಠ ತಾಪಮಾನ 15 ಡಿಗ್ರಿ ಸೆಂಟಿಗ್ರೇಡ್ ಗೆ ಇಳಿದಿದೆ. ಮುಂಜಾನೆ ಹೊತ್ತಿಗೆ ಮೈ ಕೊರೆಯುವ ಚಳಿ ಆವರಿಸುತ್ತಿದೆ. ಮುಂದಿನ ಎರಡು ಮೂರು ದಿನ ತಾಪಮಾನದಲ್ಲಿ ಇನ್ನಷ್ಟು ಕುಸಿತ ಆಗಲಿದ್ದು ಚಳಿಯು ಏರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿಯನ್ನು ಧ್ಯಾನಿಸುವ ಜೀವಸಂಕುಲದ ಪ್ರಭೇದಗಳಲ್ಲಿ ಚಳಿಯ ಉತ್ಸಾಹ ಕಂಡುಬರುತ್ತಿದೆ. ಚಳಿ ತಿಂಗಳ ಅಭಿಮಾನಿ ಕಲ್ಲಂಗಡಿ, ಇಬ್ಬನಿ ಹೀರಿ ಬೆಳೆವ ಹುರುಳಿ ಮತ್ತು ಕಡಲೆ ಗಿಡಗಳು ಚಳಿಯ ಮೋಹಕ್ಕೆ ಬಿದ್ದಿರುವುದು ರೈತರಲ್ಲಿ ಹರ್ಷದ ಹೊನಲು ಹರಿಸಿದೆ.
ಈ ವರ್ಷ ನವೆಂಬರ್ ಕೊನೆಯವರೆಗೂ ಮಳೆ ಸುರಿಯಿತು. ಡಿಸೆಂಬರ್ ತಿಂಗಳು ಆರಂಭವಾದರೂ ಮೊದಲೆರಡು ವಾರ ಮೋಡ ಮುಸುಕಿದ ವಾತಾವರಣದಿಂದ ಚಳಿ ಅನುಭವಕ್ಕೆ ಬರಲಿಲ್ಲ. ಹಾಗಾಗಿ ಒಂದುವರೆ ತಿಂಗಳು ತಡವಾಗಿ ಚಳಿ ಕಾಲೂರುತ್ತಿದ್ದು, ಮೂರು ನಾಲ್ಕು ದಿನಗಳಿಂದ ಚಳಿ ಅನುಭವಕ್ಕೆ ಬರುತ್ತಿದೆ. ಎರಡು ದಿನ ಕನಿಷ್ಠ ತಾಪಮಾನ 14ಡಿಗ್ರಿ ಗೆ ಇಳಿಯಲಿದೆ. ಇನ್ನೊಂದೆರಡು ಡಿಗ್ರಿ ತಾಪಮಾನ ಇಳಿದರೆ ದಾಖಲೆ ಚಳಿಯೂ ಕಾಣಿಸಿಕೊಳ್ಳಬಹುದು ಎಂಬಂತ ವಾತಾವರಣ ಕಂಡುಬರುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...