ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರ ಹಾವೇರಿಯ ಶಿಗ್ಗಾವಿನಲ್ಲಿ ಭಾವುಕರಾಗಿ ಆನಂದಬಾಷ್ಪ ಸುರಿಸಿದ ಪ್ರಸಂಗ ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿಮ್ಮೂರಿಗೆ ಬಂದಾಗ ನನಗೆ ಪ್ರೀತಿ ತೋರಿಸಿ, ರೊಟ್ಟಿ ತಿನಿಸಿ, ನವಣಕ್ಕಿ ಅನ್ನ ಹಾಕಿದ ಶಿಗ್ಗಾವಿ ಜನರನ್ನು ಮರೆಯಲ್ಲ. ನಾನು ಏನೇ ಕೆಲಸ ಮಾಡಿದರೂ ಈ ಕ್ಷೇತ್ರದ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಶಿಗ್ಗಾವಿಯ ಶರೀಫ ಭವನದ ಆವರಣದಲ್ಲಿ ಪಂಚಮಸಾಲಿ ಸಮಾಜದ ಕಲ್ಯಾಣ ಮಂಟಪದ ಶಂಕುಸ್ಥಾಪನೆ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಅನಾವರಣ ಸಮಾರಂಭವನ್ನು ಉದ್ಘಾಟಿಸಿದರು.
ಇತ್ತೀಚಿಗೆ ನಿಮ್ಮನ್ನು ನೋಡಲು ಆಗಿಲ್ಲ. ನೋಡಿದಾಗ ಭಾವನೆಗಳು ಉಕ್ಕಿ ಬರುತ್ತಿವೆ. ಬಹಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಚಿಂತನೆಗಳ ಜೊತೆಗೆ ಇಂದು ಎಲ್ಲ ಸಮುದಾಯದ ಜನರ ಆಶೋತ್ತರಗಳು ಹೆಚ್ಚಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ನಿಮ್ಮೆಲ್ಲರ ಆಶೀರ್ವಾದದಿಂದ ಗೃಹ, ಜಲಸಂಪನ್ಮೂಲ ಸಚಿವನಾದರೂ ಶಿಗ್ಗಾವಿ ಕ್ಷೇತ್ರದ ಒಳಗಡೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಆಗಿದ್ದೆ. ಈಗ ಮುಖ್ಯಮಂತ್ರಿಯಾಗಿದ್ದರೂ ನಾನು ನಿಮ್ಮ ಬಸವರಾಜ ಬೊಮ್ಮಾಯಿಯಷ್ಟೇ ಎಂದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.