Friday, April 10, 2026
Friday, April 10, 2026

ಜನದಕಲೆಗಳಿಗೆ ಸಂವಹನ ಸಾಮರ್ಥ್ಯವಿದೆ

Date:

ಜನಪದ ಕಲೆ ಅನಾದಿಕಾಲದಿಂದಲೂ ಬೆಳೆದುಬಂದಿದೆ. ಅದು ಎಲ್ಲಾ ಕಲೆಗಳ ತಾಯಿಬೇರು. ಆ ಕಲೆಗಳನ್ನು ಉಳಿಸಿ ಬೆಳಸಲು ಸರ್ಕಾರ, ಮಠಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಬೇಕು. ಲೇಖಕರು, ಕಲಾವಿದರು, ಸಂಘಟಕರು ಬಹಳ ಮುಖ್ಯ ಪಾತ್ರವಹಿಸಬೇಕು. ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಮನಸ್ಥಿತಿ ಎಲ್ಲರಿಗೂ ಬರಬೇಕು.

ಜನಪದದ ಕಲೆಗಳಿಗೆ ಭಾಷೆಯ ಹಂಗಿಲ್ಲದೆ ಎಲ್ಲರ ಮನವನ್ನು ತಲುಪುವ ಶಕ್ತಿಯಿದೆ. ಅನೇಕ ಅಪರೂಪದ ಕಲೆಗಳು ನಶಿಸಿ ಹೋಗಿವೆ. ಉಳಿದಿರುವ ಕಲೆಗಳನ್ನಾದರೂ ಉಳಿಸುವಲ್ಲಿ ಇಂತಹ ಶಿಬಿರಗಳ ಅಗತ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ಅಂತರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಟಾಕಪ್ಪ ಕಣ್ಣೂರು ಹಿತನುಡಿದರು.

ಡಿಸೆಂಬರ್ 17 ರಂದು ಬೆಳಿಗ್ಗೆ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ದ ಸಹಯೋಗದಲ್ಲಿ ಎರಡು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಟಾಕಪ್ಪ ಕಣ್ಣೂರು ಮಾತನಾಡಿದರು.

ಡಾ. ಮೇಟಿ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತಾ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆಯಲು ಜನಪದ ಕಲೆಗಳ ಕಲಿಕೆಗೆ ಆಸಕ್ತಿ ಮೂಡಿಸಲು ನೆರವಾಗಿದೆ. ಈ ಕಲೆ ಹಳ್ಳಿಯದು, ಬುಡಕಟ್ಟು ಜನರದ್ದು, ಕೆಲವರಿಗೆ ಸೇರಿದ್ದು ಎನ್ನುವ ಕೀಳರಿಮೆ ಸರಿಯಲ್ಲ. ಅದು ಹಳೆಯದಲ್ಲ. ಅದು ಎಲ್ಲರಿಗೂ ಬೇಕು ಎನ್ನುವಂತಾಗಿದೆ. ಜನಪದರ ಸಾಮಾನ್ಯ ಜ್ಞಾನ, ಲೋಕದೃಷ್ಠಿ, ಕಥನಕ ಕಟ್ಟಿ ಬೆಳಸಿದ ರೀತಿಯಿಂದಲೇ ಅದು ಸಮುದಾಯದ ಬದುಕನ್ನು ಆವರಿಸಿದೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಜನಪದ ನಮ್ಮ ಬದುಕಿನಲ್ಲಿ ಆವರಿಸಿದೆ. ಜಾತಿ, ಧರ್ಮ, ಲಿಂಗ ಅಸಮಾನತೆಯಿಂದ ಹೊರಬರಲು ಅವುಗಳ ಮಹತ್ವ ಅರಿಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅವರು “ಜನಪದ ಕಲೆ ಕಲಿತವರಿಗೆ ಆ ಕಲೆಯನ್ನು ಅಭಿವ್ಯಕ್ತಪಡಿಸಲು ಪ್ರತಿವರ್ಷ ಅನೇಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಕಲೆಯನ್ನು ಕರಗತಮಾಡಿಕೊಂಡು ಸಾಧನೆಮಾಡಿದರೆ ಅನೇಕ ಅವಕಾಶಗಳು ದೊರೆಯುತ್ತವೆ” ಎಂದು ಹೇಳಿದರು. ನಾಡೋಜ ಡಾ. ಎಚ್. ಎಲ್. ನಾಗೇಗೌಡರ ದೂರದೃಷ್ಟಿಯಿಂದ ಆರಂಭವಾದ ಕರ್ನಾಟಕ ಜಾನಪದ ಪರಿಷತ್ತು ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜು ಪ್ರಿನ್ಸಿಪಾಲ್ ಡಾ. ಧನಂಜಯ ಕೆ. ಬಿ. ಅವರು ಮಾತನಾಡಿ “ನಾಗರಿಕ ಸಮಾಜ ಇರುವಲ್ಲಿ ಅನೇಕ ಸಾಂಸ್ಕೃತಿಕ ಕಲೆಗಳು ಉಳಿದಿವೆ ಎಂದರೆ ಅವೆಲ್ಲವೂ ಜನಪದದ ಹಿನ್ನೆಲೆಯಲ್ಲಿ ಬಂದಿರುವುದನ್ನ ನಾವು ಗಮನಿಸಬೇಕು. ಜನರಿಂದ, ಜನರಿಗಾಗಿ ಜನಪದ ಉತ್ತಮ ಮೌಲ್ಯ ತಂದುಕೊಟ್ಟಿದೆ” ಎಂದರು.

ಈ ಕಾರ್ಯಕ್ರಮ ಸಂಚಾಲಕರಾದ ಡಾ. ಮೋಹನ್ ಚಂದ್ರಗುತ್ತಿ, ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

2nd PUC Exam Result 2026 ಪಿಯು (ವಿಜ್ಞಾನ ) ಪರೀಕ್ಷೆ: ಶಿವಮೊಗ್ಗದ ಮಹೀನ್ ಖಾನುಂ ಗೆ600/596 ಸಾಧನೆಯ ಗರಿ.

2nd PUC Exam Result 2026 ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ...

Pace PU College Shivamogga ಶಿವಮೊಗ್ಗ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಸುಗ್ಗಿ.

Pace PU College Shivamogga 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ...

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...