ಏಳು ವರ್ಷದಿಂದ ಒಂದು ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ಕೇಂದ್ರ ಸರ್ಕಾರ ಎಲ್ಲ ಬೆಳೆಗಳಿಗೆ ನೀಡುವಂತೆ ಮೆಕ್ಕೆಜೋಳಕ್ಕೆ ಉತ್ತಮ ಬೆಂಬಲ ಬೆಲೆ ನೀಡಿದೆ. ಆದರೆ ಈ ಬೆಲೆ ಮಾತ್ರ ಕರ್ನಾಟಕ ರೈತರಿಗೆ ಸಿಕ್ಕಿಲ್ಲ.
ದೇಶದಲ್ಲಿ ಬೆಳೆಯುವ ಮೆಕ್ಕೆಜೋಳದಲ್ಲಿ ಶೇ.16.5 ರಷ್ಟು ರಾಜ್ಯದಾಗಿದೆ. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ವಿಜಯಪುರ, ಬಳ್ಳಾರಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಬಿತ್ತನೆ14.16 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಆಗಿದ್ದು ಸುಮಾರು 42.48 ಕೋಟಿ ಟನ್ ಉತ್ಪನ್ನ ನಿರೀಕ್ಷಿಸಲಾಗಿದೆ.
2014 ಕ್ಕೂ ಮೊದಲು ರಾಜ್ಯದ ಮೆಕ್ಕೆಜೋಳ ಬೆಳೆಗಾರರು ಕೂಡಾ ಬೆಂಬಲ ಬೆಲೆ ಪಡೆದುಕೊಳ್ಳುತ್ತಿದ್ದರು. 2013-14 ರಲ್ಲಿ ಮೆಕ್ಕೆಜೋಳವನ್ನು ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಬೆಳೆಯದಿದ್ದರೂ ಸಹ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ವನ್ನು ಖರೀದಿ ಮಾಡಲಾಗಿತ್ತು.
ಕೇಂದ್ರ ಸರ್ಕಾರವು ಈ ವರ್ಷ ಮೆಕ್ಕೆಜೋಳಕ್ಕೆ 1870 ರೂ. ಬೆಂಬಲ ಬೆಲೆ ನೀಡಿದ್ದು ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳ ರೈತರು ಲಾಭ ಪಡೆಯುತ್ತಿದ್ದಾರೆ. ರಾಜ್ಯದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ 1510 ರೂ ಕನಿಷ್ಠ 1630 ರೂ ಮಾದರಿಯ ಬೆಲೆ ಇದೆ. ರೈತರು ಬೆಂಬಲ ಬೆಲೆಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್ ಗೆ 366 ನಷ್ಟಕ್ಕೆ ಒಳಗಾಗುತ್ತಿದ್ದಾರೆ.
‘ಬೆಂಬಲ ಯೋಜನೆ ಎಂದ ಮೇಲೆ ಅಲ್ಲಿ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಎಂಬ ತಾಂತ್ರಿಕ ಕಾರಣವನ್ನು ಮುಂದಿಡಬಾರದು. ಗುಣಮಟ್ಟದ ಉತ್ಪನ್ನಕ್ಕೆ ರಾಜಿ ಆಗುವುದು ಬೇಡ, ಆದರೆ ಅಂತಹ ತಾಂತ್ರಿಕ ನೆಪವೊಡ್ಡಿ ಖರೀದಿ ಮಾಡದೆ ಇರುವುದು ತಪ್ಪು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಮನವೊಲಿಸುವ ಶಕ್ತಿಯೇ ಇಲ್ಲ’ ರೈತ ಮುಖಂಡ ತೇಜಸ್ವಿ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.