ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಣಕ್ಕೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ತಿಳಿಸಿದ್ದಾರೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಪಾಲಿಗೆ ಕ್ರಿಪ್ಟೋಕರೆನ್ಸಿ ಗಳು ಒಂದು ಸವಾಲು. ಅಲ್ಲಿ ಕ್ರಿಪ್ಟೋಕರೆನ್ಸಿ ಗಳ ಬಳಕೆಯು ಹೆಚ್ಚು ಆಕರ್ಷಕವಾಗಿರುತ್ತದೆ ಎಂದು ಗೀತಾ ಅವರು ರಾಷ್ಟ್ರೀಯ ಅರ್ಥಶಾಸ್ತ್ರ ಸಂಶೋಧನಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಕ್ರಿಪ್ಟೋಕರೆನ್ಸಿ ಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಈಗ ಕ್ರಿಪ್ಟೋಕರೆನ್ಸಿ ಗಳಿಗೆ ನಿಷೇಧವೂ ಇಲ್ಲ. ಅವುಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಕಾನೂನು ಸಹ ಒಳಗೊಂಡಿಲ್ಲ.
ಈ ಕರೆನ್ಸಿಗಳನ್ನು ನಿಯಂತ್ರಿಸಬೇಕಾದ ಅಗತ್ಯ ಇದೆ. ವಿಶ್ವದಾದ್ಯಂತ ಅನೇಕ ದೇಶಗಳು ವಿಧವಿಧವಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿವೆ. ಇವುಗಳನ್ನು ನಿಷೇಧಿಸುವುದರ ಲ್ಲಿಯೂ ಸವಾಲುಗಳಿವೆ ಎಂದು ಅವರು ತಿಳಿಸಿದ್ದಾರೆ.
ಕ್ರಿಪ್ಟೋಕರೆನ್ಸಿ ವೈವಾಟು ಗಳು ದೇಶಗಳ ಗಡಿಗಳನ್ನು ಮೀರಿ ನಡೆಯುವ ಕಾರಣ, ಕ್ರಿಪ್ಟೋಕರೆನ್ಸಿ ಗಳಿಂದ ಸೃಷ್ಟಿಯಾಗುವ ಸಮಸ್ಯೆಗಳನ್ನು ಬಗೆಹರಿಸುವುದು ಯಾವುದೇ ದೇಶದಿಂದ ಸಾಧ್ಯವಿಲ್ಲ. ಆದ್ದರಿಂದ ಈ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ನೀತಿಯನ್ನು ರೂಪಿಸಬೇಕು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಭಾರತದಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿದೆ. ಈ ಸಂದರ್ಭದಲ್ಲಿ ಹೊಂದಾಣಿಕೆಯ ಹಣಕಾಸು ನೀತಿಯನ್ನು ಇನ್ನು ಕೆಲವು ತಿಂಗಳವರೆಗೂ ಮುಂದುವರಿಸಬೇಕು.
ಅನಂತರದಲ್ಲಿ ಹಂತಹಂತವಾಗಿ ಈ ನೀತಿಯಿಂದ ಹಿಂದಕ್ಕೆ ಸರಿಯಬಹುದು ಎಂದು ಗೀತಾ ಅವರು ತಿಳಿಸಿದರು. ದೇಶದ ಸಗಟು ಹಣದುಬ್ಬರ ದರವು ನವೆಂಬರ್ ತಿಂಗಳಿನಲ್ಲಿ ಶೇ.14.23 ಕ್ಕೆ ತಲುಪಿದೆ. ಇದು ಹನ್ನೆರಡು ವರ್ಷಗಳ ಗರಿಷ್ಠ ಮಟ್ಟ. ಹೊಂದಾಣಿಕೆಯ ಹಣಕಾಸು ನೀತಿಯನ್ನು ಮುಂದುವರಿಸಿ ಕೊಳ್ಳುವುದರ ಜೊತೆಯಲ್ಲಿ ಹಣದುಬ್ಬರ ಪ್ರಮಾಣದ ಮೇಲೆ ಗಮನ ನೀಡಬೇಕು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.