ಎಲ್ಲಾ ಅಭ್ಯರ್ಥಿಗಳ ಕೈಯಿಂದ ಹಣ ಪಡೆದುಕೊಂಡಿದ್ದೇವೆ. ಉಡುಗೊರೆ ಬೇರೆ ಕೊಟ್ಟಿದ್ದಾರೆ. ಸಾಲದಕ್ಕೆ ತಮಗೇ ಮತ ಹಾಕುವುದಾಗಿ ಆಣೆ-ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ ಮತ ಹಾಕದೆ ಇದ್ದರೆ ಅಥವಾ ನೀಡಿದರೆ ದೇವರು ಶಾಪಕ್ಕೆ ಒಳಗಾಗಬೇಕಾದಿತು ಎಂದು ಕೆಲವು ಮತದಾರರು ಎಲ್ಲರಿಗೂ ಮತವನ್ನು ಹಾಕಿದ್ದಾರೆ.
ಹಣ, ಆಣೆ ಪ್ರಮಾಣಗಳಿಗೆ ಕಟ್ಟುಬಿದ್ದ ಮತದಾರು ಎಲ್ಲರಿಗೂ ಓಟು ಹಾಕಿ ಬರೋಬ್ಬರಿ 3000 ಓಟುಗಳು ತಿರಸ್ಕೃತವಾಗಿವೆ.
ಮೇಲ್ಮನೆ ಚುನಾವಣೆ ಮತದಾನ ಸ್ವಲ್ಪಮಟ್ಟಿಗೆ ಸಂಕೀರ್ಣವೇ. ಹಾಗಾಗಿ ಇದರ ಬಗ್ಗೆ ಸಾಕಷ್ಟು ತರಬೇತಿಯನ್ನೂ ನೀಡಲಾಗಿತ್ತು. ಅಷ್ಟಾಗಿಯೂ ತಿಳಿಯದವರಿಗೆ ಸಹಾಯಕರನ್ನು ನೇಮಿಸಿಕೊಳ್ಳುವ ಅವಕಾಶವಿತ್ತು. ಅಷ್ಟಾದರೂ ಸಾಕಷ್ಟು ಮತಗಳು ಅಸಿಂಧುವಾಗಿರುವುದರ ಹಿಂದೆ ಈ ಅಂಶಗಳ ಪ್ರಭಾವೇ ದಟ್ಟವಾಗಿದೆ ಎನ್ನಲಾಗುತ್ತಿದೆ.
ಚುನಾವಣೆಯನ್ನು ಪ್ರತಿಷ್ಠೆಗಾಗಿ ತೆಗೆದುಕೊಂಡಿದ್ದ ರಾಜಕೀಯ ಪಕ್ಷಗಳ ಮುಖಂಡರು, ಮತದಾರರಿಗೆ ಹಣ ಕೊಟ್ಟು ತಮಗೆ ಮತ ನೀಡುವಂತೆ ಕೋರಿಕೊಂಡಿದ್ದರು.
ವಿಧಾನಪರಿಷತ್ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತಗಳು ಅಸಿಂಧುವಾಗಲು ಇದು ಪ್ರಧಾನ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಚುನಾವಣೆಯಾದ 98,648 ಮತಗಳ ಪೈಕಿ 3024 ಮತಗಳು ತಿರಸೃತಗೊಂಡಿವೆ.
ಹಲವು ಸದಸ್ಯರು ಹಣ ಕಳೆದುಕೊಳ್ಳಲು ಇಷ್ಟಪಡದೆ ಹಾಗೂ ಪಕ್ಷದ ನಾಯಕರ ಒತ್ತಡಕ್ಕೆ ಕಟ್ಟುಬಿದ್ದು ಒಂದಕ್ಕಿಂತ ಹೆಚ್ಚು ಪಕ್ಷದ ಮುಖಂಡರಿಗೆ ತಮ್ಮ ಪಕ್ಷಕ್ಕೆ ಮತ ನೀಡುವುದಾಗಿ ಪ್ರಮಾಣ ಮಾಡಿದ್ದರು. ಮತದಾನ ಮಾಡುವ ವೇಳೆ ಉಭಯ ಸಂಕಟಕ್ಕೆ ಸಿಲುಕಿದ ಈ ಮತದಾರರು ಆಣೆ- ಪ್ರಮಾಣಕ್ಕೆ ಹೆದರಿ ತಾವು ಹಣ ಪಡೆದ ಎಲ್ಲ ಅಭ್ಯರ್ಥಿಗಳಿಗೂ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ನ್ಯಾಯ ಒದಗಿಸಬಹುದು ಎಂದು ಯೋಚಿಸಿ ಅದರಂತೆ ಮತಚಲಾಯಿಸಿದ್ದಾರೆ.
ಒಬ್ಬರಿಗಿಂತಲೂ ಹೆಚ್ಚು ಜನರಿಗೆ ಒಂದೇ ಪ್ರಾಶಸ್ತ್ಯದ ಮತ ನೀಡಿದರೆ ಮತ ಆಗುತ್ತದೆ ಎಂಬುದಕ್ಕಿಂತ ಆಣೆ ಪ್ರಮಾಣದ ಬಲವೇ ಮೇಲಾಗಿರುವುದು ಖಚಿತಪಟ್ಟಿದೆ.
ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದು ತಿರುಪತಿ ತಿಮ್ಮಪ್ಪ, ಶನೇಶ್ವರ ಸ್ವಾಮಿ ಮೇಲೆ ಆಣೆ ಮಾಡಿಸಿಕೊಂಡ ವಿಡಿಯೋಗಳು ಸಹ ವೈರಲ್ ಆಗಿದ್ದವು ಎನ್ನಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.