‘ಏಷ್ಯಾನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯ’ ಪಂದ್ಯ ಇಂದಿನಿಂದ ಆರಂಭವಾಗಲಿದ್ದು ಭಾರತ ತಂಡವು ಸತತ ಹ್ಯಾಟ್ರಿಕ್ ಜಯದ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಭಾರತ 2011 ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದೆ. ಹಿಂದಿನ 2 ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿರುವ ತಂಡ ಈಗ ಹ್ಯಾಟ್ರಿಕ್ ಸಾಧನೆಯ ಕನಸಿನ್ನಲಿದೆ.
ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಇದೇ ಮೊದಲ ಬಾರಿಗೆ ಭಾರತ ತಂಡ ಕಣಕ್ಕೆ ಇಳಿಯುತ್ತಿದ್ದು ನಾಯಕ ಮನಪ್ರೀತ್ ಸಿಂಗ್ ಮತ್ತು ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ತಂಡದ ಶಕ್ತಿ ಯಾಗಿದ್ದಾರೆ.
ಕೆಲವು ಆಟಗಾರರು ಹಿಂದಿನ 2 ವರ್ಷಗಳಿಂದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಕಾರಣ ಕೆಲವರನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿರಲಿಲ್ಲ. ಅವರಿಗೆಲ್ಲ ಈಗ ಅವಕಾಶದ ಬಾಗಿಲು ತೆರೆದಿದೆ. ಎಂದು ಮನ್ ಪ್ರೀತ್ ಸಿಂಗ್ ತಿಳಿಸಿದರು.
ಮಸ್ಕತ್ ನಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ ಪ್ರಶಸ್ತಿ ಹಂಚಿಕೊಂಡಿತ್ತು.ಮಳೆಯಿಂದಾಗಿ ಫೈನಲ್ ಪಂದ್ಯವನ್ನು ರದ್ದು ಮಾಡಿದ್ದರಿಂದ 2 ತಂಡಗಳನ್ನು ವಿಜಯ ತಂಡಗಳು ಎಂದೂ ಘೋಷಿಸಲಾಗಿತ್ತು.ಆದ್ದರಿಂದ ಭಾರತದ ಭರವಸೆ ಹೆಚ್ಚಿದೆ.
ತಂಡ ಈಗಲೂ ಬಲಿಷ್ಟವಾಗಿದೆ,ಭುವನೇಶ್ವರದಲ್ಲಿ ನಡೆದ ಶಿಬಿರದಲ್ಲಿ ಫಿಟ್- ನೆಸ್ ಹೆಚ್ಚು ಆದ್ಯತೆ ನೀಡಲಾಗಿದೆ, ಏಷ್ಯಾದ ಇತರ ತಂಡಗಳು ಯಾವ ರೀತಿ ಸಜ್ಜಾಗಿವೆ ಎಂಬುವುದನ್ನು ಈ ಟೂರ್ನಿಯಲ್ಲಿ ನೋಡಬೇಕಷ್ಟೇ,ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಟೂರ್ನಿ ನಮ್ಮ ತಂಡಕ್ಕೆ ಉತ್ತಮ ಅವಕಾಶ ಒದಗಿಸಲಿದೆ ಎಂದು ಅವರು ಹೇಳಿದರು.
ಯುವ ಆಟಗಾರರನ್ನು ಒಳಗೊಂಡ ಭಾರತ ಹಾಕಿ ತಂಡ ಹೊಸ ಸವಾಲಿಗೆ ಸಜ್ಜಾಗಿದೆ. ಆರಂಭವಾಗಲಿರುವ ಏಷ್ಯಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಯ ಕನಸುಹೊತ್ತು ತಂಡ ಕಣಕ್ಕೆ ಇಳಿಯಲಿದೆ. ಭಾರತ ತಂಡ ಮೊದಲ ದಿನ ಮತ್ತು ಮೊದಲ ಪಂದ್ಯ “ಕೊರಿಯಾ” ತಂಡದ ವಿರುದ್ಧ ಮುಖಾಮುಖಿಯಾಗಿ ಆಡುತ್ತಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.