ರಾಜ್ಯ ಸರ್ಕಾರಕ್ಕೆ ಅಧಿಕ ಆದಾಯವನ್ನು ತಂದುಕೊಡುವಲ್ಲಿ ಸಾರಿಗೆ ಇಲಾಖೆಯು ಒಂದು. ಆದರೆ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ವಿಪರ್ಯಾಸವಾಗಿದೆ.
ಸಾರಿಗೆ ಇಲಾಖೆಯಲ್ಲಿ ಕೆಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಏಜೆಂಟರಿಗೆ ಕೈಜೋಡಿಸಿ ನಕಲಿ ನೋಂದಣಿ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿರುವುದು ತಿಳಿದುಬಂದಿದೆ.
ತೆರಿಗೆ ಪಾವತಿಸಿ ಕೊಳ್ಳದೆಯೇ ಐಷಾರಾಮಿ ಕಾರುಗಳ ನಕಲಿ ನೋಂದಣಿ ಮಾಡಿ ಕಮಿಷನ್ ದೋಚುತ್ತಿದ್ದಾರೆ.
ಬೇರೊಂದು ಆರ್ ಟಿ ಓ ಕಚೇರಿಯಲ್ಲಿ ನೋಂದಣಿ ಆಗಿರುವ ವಾಹನದ ತೆರಿಗೆ ಪಾವತಿ ಚಲನ್ ಸಂಖ್ಯೆಯನ್ನು ವಾಹನ -1 ಅಂಶದ ಮೂಲಕ ಮತ್ತೊಂದು ವಾಹನಕ್ಕೂ ನಮೂದಿಸಿ ವಂಚಿತರಾಗಿದ್ದಾರೆ. ಅನ್ಯ ರಾಜ್ಯದ ವಾಹನಗಳಿಂದ ತೆರಿಗೆ ಕಾಣಿಸಿಕೊಳ್ಳದೆ ಕರ್ನಾಟಕದಲ್ಲಿ ನೋಂದಣಿ ಮಾಡಲಾಗುತ್ತಿದೆ. ಫ್ಯಾನ್ಸಿ ನಂಬರ್ ಪಡೆದ ಐಷಾರಾಮಿ ವಾಹನಗಳಿಂದ ತೆರಿಗೆ ಕಟ್ಟಿಕೊಳ್ಳದೆ ರಿಜಿಸ್ಟ್ರೇಷನ್ ಮಾಡಿಕೊಡಲಾಗುತ್ತದೆ. ವಾಹನ ಮಾಲೀಕರಿಗೆ ನೀಡಿರುವ ದಾಖಲೆಗಳು ಅಸಲಿ ಯಾಗಿದೆ, ತೆರಿಗೆ ರಸೀದಿಯಷ್ಟೇ ನಕಲಿಯಾಗಿದೆ.
ಈ ಹಗರಣದ ಕುರಿತು ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಆಂತರಿಕ ತನಿಖೆಯನ್ನು ಶುರು ಮಾಡಿದೆ. “ತೆರಿಗೆ ಕಟ್ಟಿಸಿಕೊಳ್ಳಲು ವಾಹನಗಳನ್ನು ನೊಂದಣಿ ಮಾಡಿಕೊಟ್ಟು ಅಕ್ರಮವೇ ಸಿಗುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲ ಆರ್ ಟಿ ಓ ಅಧಿಕಾರಿ, ಸಿಬ್ಬಂದಿ ಏಜೆಂಟರ ಜೊತೆ ಶಾಮೀಲಾಗಿ ಈ ಕೃತ್ಯ ಎಸಗಿರುವ ಅನುಮಾನವಿದೆ. ತೆರಿಗೆ ಪಾವತಿಸದೆಯೇ ಹೇಗೆ ವಾಹನಗಳನ್ನು ನೊಂದಣಿ ಮಾಡಿದರು ಎಂಬುದನ್ನು ಪತ್ತೆ ಮಾಡಲಾಗುವುದು. ಎಲ್ಲಾ ಆರ್ ಟಿ ಓ ಕಚೇರಿಗಳಲ್ಲೂ ವಾಹನಗಳ ನೋಂದಣಿ ಮಾಹಿತಿ ಪಡೆದು ಪರಿಶೀಲಿಸಲಾಗುವುದು” ಎಂದು ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.