Monday, February 9, 2026
Monday, February 9, 2026

ಜಯಲಲಿತಾ ಅಧಿಕೃತ ನಿವಾಸ: ಸಹೋದರನ ಮಕ್ಕಳಿಗೆ

Date:

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ನಿವಾಸವನ್ನು ಸ್ವಾಧೀನಕ್ಕೆ ಜಯ ಅವರ ಸಹೋದರನ ಮಕ್ಕಳು ತೆಗೆದುಕೊಂಡಿದ್ದಾರೆ.

ಸುದೀರ್ಘವಾಗಿ ಜಯಾ ಅವರ ಆಸ್ತಿ ವಿವಾದ ನಡೆಯುತ್ತಿತ್ತು. ಪ್ರಸ್ತುತ ಈ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ. ಪೊಯೆಸ್ ಗಾರ್ಡನ್ ನಲ್ಲಿರುವ ನಿವಾಸ ‘ವೇದ ನಿಲಯಂ’ ಅನ್ನು ಜಯಾ ಅವರ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪ ಹಾಗೂ ದೀಪಕ್ ಅವರು ತಮ್ಮ ಸ್ವಾಧೀನಕ್ಕೆ ಪಡೆದು ಕೊಂಡಿದ್ದಾರೆ.

ಚೆನ್ನೈನ ಜಿಲ್ಲಾಧಿಕಾರಿ ಜೆ. ವಿಜಯ್ ರಾಣಿ ಅವರು
ಅಧಿಕೃತವಾಗಿ ಬಂಗಲೆಯ ಕೀಲಿಕೈ ಅನ್ನು ದೀಪಾ ಮತ್ತು ದೀಪಕ್ ಅವರಿಗೆ ಒಪ್ಪಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ನ ಏಕಸದಸ್ಯ ಪೀಠವು ನ.24ರಂದು ನೀಡಿದ ಆದೇಶ ಅನ್ವಯ ಕಾನೂನುಬದ್ಧ ವಾರಸುದಾರರಿಗೆ ಜಯಲಲಿತಾ ಅವರ ಆಸ್ತಿಯ ಒಡೆತನ ನೀಡಲಾಗಿದೆ. ಈ ನಿವಾಸ ಜಯಕುಮಾರ್ ಅವರ ಮಕ್ಕಳಿಗೆ ಸೇರಬೇಕೆಂದು ಕೋರ್ಟ್ ಹೇಳಿತ್ತು. ಆ ಮೂಲಕ ಈ ಮನೆಯನ್ನು ವಶಕ್ಕೆ ಪಡೆಯುವ ಎಐಎಡಿಎಂಕೆ ಪ್ರಯತ್ನಕ್ಕೆ ನ್ಯಾಯಾಲಯ ತಡೆ ನೀಡಿತ್ತು.

ಇದು ಸಾಧಾರಣ ಗೆಲುವಲ್ಲ, ಅಸಾಧಾರಣ ಗೆಲುವು. ನಮ್ಮ ಬಾಲ್ಯದ ನೆನಪುಗಳು ಮತ್ತು ಜಯಲಲಿತಾ ಅವರೊಂದಿಗೆ ಕಳೆದ ಕ್ಷಣಗಳ ನೆನಪುಗಳನ್ನು ಹೊಂದಿರುವ ಮನೆ ಕೊನೆಗೂ ನಮಗೆ ಸೇರಿದೆ ಎಂದು ದೀಪಾ ಹಾಗೂ ದೀಪಕ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ...

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್...

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್...

Shimoga Bharat Scouts and Guides ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯ ರೂಪಿಸುತ್ತವೆ- ಶಕುಂತಲಾ ಚಂದ್ರಶೇಖರ್

Shimoga Bharat Scouts and Guides ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ...