Saturday, September 28, 2024
Saturday, September 28, 2024

ಮನಕ್ಕೊಪ್ಪುವ ಕಪ್ಪೆಗಳ ಹಬ್ಬ.

Date:

ಮಳೆಗಾಲದ ಸಮಯದಲ್ಲಿ ಮಲೆನಾಡಿನಲ್ಲಿ ಎಲ್ಲೆಲ್ಲೂ ಕಪ್ಪೆಗಳ ವಟಗುಟ್ಟುವಿಕೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಜನರು ಆಡುಮಾತಿನಲ್ಲಿ ಕಪ್ಪೆ ತರಹ ವಟಗುಟ್ಟಬೇಡ ಎನ್ನುವುದುಂಟು. ನಾವು ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಣ್ಣಬಣ್ಣದ ಕಪ್ಪೆಗಳು,ಅಲ್ಲಿನ ಪರಿಸರಕ್ಕೆ ಹೊಂದಾಣಿಕೆಯಾಗುವಂತಹ ಕಪ್ಪೆಗಳು, ಹೀಗೆ ನಾನಾಬಗೆಯ ಕಪ್ಪೆಗಳನ್ನು ನೋಡಿರುತ್ತೇವೆ. ಆದ್ರೆ ಪಶ್ಚಿಮ ಘಟ್ಟದಲ್ಲಿ ಕಪ್ಪೆಗಳ ಸಂತತಿ ಅಳಿವಿನಂಚಿಗೆ ಬಂದು ನಿಂತಿದೆ. ಇವುಗಳ ಬಗ್ಗೆ ಅಧ್ಯಯನ ನಡೆಸಲು ‘ಕಪ್ಪೆ ಹಬ್ಬ ವೇದಿಕೆ’ ನೆರವಾಗಲಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು, ಜೋಗ್ ಕಾರ್ಗಲ್ ಸಮೀಪದ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಡಿ. 18 ಹಾಗೂ 19 ರಂದು ಕಪ್ಪೆ ಹಬ್ಬ ನಡೆಯಲಿದೆ.

ರಾಜ್ಯದಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿಶ್ವ ಕಪ್ಪೆ ದಿನ ಎಂದು ಆಚರಿಸಲಾಗಿದೆ. ಆದರೆ ಇದುವರೆಗೂ ವಿಸ್ತೃತ ಚರ್ಚೆ, ದೃಶ್ಯ ಪ್ರಚಾರಕ್ಕೆ ಅವಕಾಶ ಒದಗಿಸುವ ಅಂತಹ ಕಪ್ಪೆ ಹಬ್ಬ ನಡೆದಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆಯ ಶಿವಮೊಗ್ಗದ ವನ್ಯಜೀವಿ ವಿಭಾಗ ಮತ್ತು ಕಾರ್ಗಲ್ ವನ್ಯಜೀವಿ ವಿಭಾಗಗಳು ಹಮ್ಮಿಕೊಂಡಿರುವ ಮೊದಲ ಕಾರ್ಯಕ್ರಮ ಇದಾಗಿದೆ.

ರಾಜ್ಯದಲ್ಲೇ, ಇದೇ ಮೊದಲು ‘ಕಪ್ಪೆ ಹಬ್ಬ’ ಆಚರಿಸಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿರುವ ಉಭಯವಾಸಿ ಜೀವಿಗಳ ಕುರಿತು ಅಧ್ಯಯನ ನಡೆಸುವುದಲ್ಲದೆ ಕಪ್ಪೆಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಅಳಿವಿನಂಚಿನಲ್ಲಿರುವ ಕಪ್ಪೆಗಳ ಕುರಿತು ತಿಳುವಳಿಕೆ ನೀಡುವುದು. ಪರಿಸರದಲ್ಲಿ ಕಪ್ಪೆಯ ಪಾತ್ರವನ್ನು ಮನದಟ್ಟು ಮಾಡಿಕೊಡಲಾಗುವುದು ಎಂದು ಶಿವಮೊಗ್ಗದ ಡಿಸಿಎಫ್, ವನ್ಯಜೀವಿ ವಿಭಾಗ ಅಧಿಕಾರಿ ಐ.ಎಂ. ನಾಗರಾಜ್ ಅವರು ತಿಳಿಸಿದ್ದಾರೆ.

ಪರಿಸರದಲ್ಲಿ ಆಹಾರ ಸರಪಳಿಯ ಕ್ರಿಯೆಯಲ್ಲಿ ಕಪ್ಪೆಗಳ ಪಾತ್ರ ಬಹುದೊಡ್ಡದಾಗಿದೆ. ಅವುಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳು. ಕೀಟ ಸಾಂದ್ರತೆ ನಿಯಂತ್ರಣದಲ್ಲಿಡುವ ಶಕ್ತಿ ಇವುಗಳಿಗಿದೆ. ಹಾಗೂ ಇವುಗಳನ್ನು ರೈತನ ಮಿತ್ರ ಎಂದು ಸಹ ಕರೆಯಬಹುದು.

ಕಪ್ಪೆ ಸಂತತಿ ಗಳು ಒಂದು ವೇಳೆ ಇಲ್ಲವಾದರೆ, ಕೀಟಗಳ ಸಂಖ್ಯೆ ಏರಿಕೆಯಾಗಿ ಬಹುದೊಡ್ಡ ಸಮಸ್ಯೆ ಎದುರಾಗಬಹುದು. ಇಂತಹ ಕಪ್ಪೆಗಳ ಕುರಿತು ನಿರೀಕ್ಷಿತ ಅಧ್ಯಯನ ನಡೆದಿಲ್ಲ.
ಆದ್ದರಿಂದ ಪರಿಸರ ಪ್ರೇಮಿ ಉಳ್ಳವರು ಇಂತಹ ಕಾರ್ಯಕ್ರಮದ ಮೂಲಕ ಪ್ರಭೇದಗಳ ಕುರಿತು ಜನರಿಗೆ ಮಾಹಿತಿ ನೀಡಬೇಕಾಗಿದೆ.

ಪಶ್ಚಿಮ ಘಟ್ಟದಲ್ಲಿ ಪ್ರಾಣಿ ಜಗತ್ತಿನ ಬಗ್ಗೆ ಬೆಳಕಿಗೆ ಬಾರದ ಅದೆಷ್ಟೋ ರಹಸ್ಯಗಳಿವೆ. ಅದರಲ್ಲೂ ಪ್ರಮುಖ ಪ್ರಭೇದದ ಕಪಿಗಳ ಮೇಲೆ ನಡೆಯಬೇಕಾದ ಸಂಶೋಧನೆ, ಹೊಸ ತಳಿಗಳು ಹುಡುಕಾಟ ಹೀಗೆ ಹಲವಾರು ವಿಚಾರಗಳಿಗೆ ಕಪ್ಪೆ ಹಬ್ಬ ಬುನಾದಿಯಾಗುವ ನಿರೀಕ್ಷೆಯಿದೆ.

ಎರಡು ದಿನದ ಕಾಲ ಕಪ್ಪೆ ಹಬ್ಬ ನಡೆಯಲಿದೆ. ಈ ಹಬ್ಬದಲ್ಲಿ ನುರಿತ ತಜ್ಞರು ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿದವರು ಭಾಗವಹಿಸಲಿದ್ದಾರೆ. ಕಪ್ಪೆಗಳ ಕುರಿತು ಚಿತ್ರೀಕರಣಗೊಂಡಿರುವ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ಕಪ್ಪೆ ಮತ್ತು ಪತಂಗಗಳ ವೀಕ್ಷಣೆ ಕೂಡ ಇರಲಿದೆ.

ಪಶ್ಚಿಮ ಘಟ್ಟದಲ್ಲಿ 104 ಕ್ಕೂ ಹೆಚ್ಚು ಮತ್ತು ಇಡೀ ಪಶ್ಚಿಮ ಘಟ್ಟದಲ್ಲಿ ನಾನೂರಕ್ಕೂ ಅಧಿಕ ಉಭಯವಾಸಿ ಜೀವಿಗಳಿವೆ ಎಂದು ಪತ್ತೆ ಹಚ್ಚಲಾಗಿದೆ. ಇಲ್ಲಿ ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಉಭಯವಾಸಿ ಗಳಿವೆ. ಇಲ್ಲಿ ನಿರೀಕ್ಷಿತ ಮಟ್ಟದ ಸಂಶೋಧನೆ ನಡೆಯಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

1 COMMENT

  1. ಒಳ್ಳೆಯ ಹಾಗೂ ಆಸಕ್ತಿಕರ ಮಾಹಿತಿ. ಧನ್ಯವಾದಗಳು K live ಟೀಮ್ ಗೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...