ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ “ಶಿಖರದಿಂದ ಸಾಗರ” ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಆಯ್ಕೆಯಾದ ಐವರು ಯುವತಿಯರ ತಂಡದಲ್ಲಿ ಶಿವಮೊಗ್ಗದ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ವಿ. ಐಶ್ವರ್ಯ ಭಾಗಿಯಾಗಿದ್ದರು.
ಸೊರಬ ತಾಲೂಕಿನ ಚಂದ್ರಗುತ್ತಿ ವೆಂಕಟೇಶ್, ಮಂಜುಳಾ ದಂಪತಿಯ ಹಿರಿಯ ಮಗಳಾದ ಐಶ್ವರ್ಯ, ಶಿವಮೊಗ್ಗದ ಬಿಬಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿದ್ದು ಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. 2017 ರಲ್ಲಿ ಇವರು ಪರ್ವತಾರೋಹಣ ಮತ್ತು ಸಮುದ್ರಯಾನ ಕಯಾಕಿಂಗ್ ನಲ್ಲಿ ವಿಶೇಷ ಪರಿಣತಿಯನ್ನು ಪಡೆದು ವಿವಿಧ ಕೋರ್ಸ್ ಗಳಲ್ಲಿ
ತೇರ್ಗಡೆಯಾಗಿದ್ದಾರೆ.
ಕಾಶ್ಮೀರದ ಕರದೂಂಗ್ಲದಿಂದ ಕರ್ನಾಟಕದ ಕಾರವಾರದ ತನಕ ಒಟ್ಟು 3,350 ಕಿ.ಮೀ. ಸೈಕ್ಲಿಂಗ್ ಪ್ರಯಾಣ ಮಾಡಿರುವ ಈ ತಂಡ 5,359 ಮೀ. ಎತ್ತರದ ಕರದೂಂಗ್ಲ ಪಾಸ್ ಅನ್ನು ಕೇವಲ 7 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಯಶಸ್ವಿಯಾಗಿ ಕ್ರಮಿಸಿದ್ದಾರೆ. ಕಾರವಾರದಿಂದ ಮಂಗಳೂರಿನ 300 ಕಿ.ಮೀ. ದೂರವನ್ನು ಸಮುದ್ರಯಾನ ಕಯಾಕಿಂಗ್ ಮೂಲಕ ಕ್ರಮಿಸಿ 72 ದಿನಗಳಲ್ಲಿ ತಮ್ಮ ಗುರಿಯನ್ನು ಮುಟ್ಟಿದ್ದಾರೆ.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಯಾಕಿಂಗ್ ತಂಡಗಳಲ್ಲಿ ಆಯ್ಕೆಯಾಗಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2020- 21 ರಲ್ಲಿ ಮದ್ಯ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ತಂಡದೊಂದಿಗೆ ಭಾಗವಹಿಸಿ ಕ್ರಮವಾಗಿ ಕಂಚು ಮತ್ತು ರಜತ ಪದಕಗಳನ್ನು ಪಡೆದಿದ್ದಾರೆ. ಇವರ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ. ನಾಗರಾಜ್, ಸಹಾಯಕ ನಿರ್ದೇಶಕ ಡಿ. ಮಲ್ಲೇಶಪ್ಪ, ನೀಲಯ ಮೇಲ್ವಿಚಾರಕಿ ಬಿ.ಎಸ್.ವಿನಯಾ ಅಭಿನಂದನೆ ಸಲ್ಲಿಸಿದ್ದಾರೆ
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.