ವರ್ಷದ ಲೆಕ್ಕ ಪರಿಶೋಧನಾ ವರದಿ ಸಲ್ಲಿಸಿದ ಮುಜರಾಯಿ ಇಲಾಖೆಯ ಎ ಹಾಗೂ ಬಿ ದರ್ಜೆಯ ದೇವಾಲಯಗಳ ಆಡಳಿತ ಮಂಡಳಿಗಳು ಇನ್ಮುಂದೆ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ.
ರಾಜ್ಯದಲ್ಲಿ ಹಲವು ದೇವಾಲಯಗಳಿವೆ. ಎ ದರ್ಜೆ ಹೊಂದಿರುವ 207 ದೇವಾಲಯಗಳು. 139 ಬಿ ದರ್ಜೆಯ ದೇವಾಲಯಗಳು. ಹಾಗೂ 34,217 ಆದಾಯ ಕಡಿಮೆ ಇರುವ ದೇವಾಲಯಗಳಿವೆ. ಪ್ರತಿವರ್ಷ ಎ ಮತ್ತು ದೇವಾಲಯಗಳು ಪ್ರತಿವರ್ಷ ಖರ್ಚುವೆಚ್ಚಗಳ ಪರಿಶೋಧನಾ ವರದಿ ಸಲ್ಲಿಸಲೇಬೇಕು ಎಂಬ ನಿಯಮವಿದೆ. ಆದರೆ ಕೇವಲ ನಾಲ್ಕು ದೇವಾಲಯಗಳು ಮಾತ್ರ ಲೆಕ್ಕಪರಿಶೋಧನಾ ವರದಿ ಸಲ್ಲಿಸುತ್ತಿವೆ. ಉಳಿದ ದೇವಾಲಯಗಳು ಒಂದು ದಶಕದಿಂದ ನೀಡುತ್ತಿಲ್ಲ. ಈ ನಡತೆ ಕಾನೂನು ಉಲ್ಲಂಘಿಸುವುದರ ಜೊತೆಗೆ ಸರ್ಕಾರ ಮತ್ತು ಮುಜರಾಯಿ ಇಲಾಖೆಗೆ ದೊಡ್ಡ ಪ್ರಮಾಣದ ವಂಚನೆಯಾಗಿದೆ.
ಈ ಬಗ್ಗೆ ಇಲ್ಲಿಯವರೆಗೆ ಬಂದ ಸಚಿವರು, ಅಧಿಕಾರಿಗಳು ಯಾರು ಕೂಡ ಪ್ರಶ್ನೆ ಮಾಡಿಲ್ಲ. ಕೆಲವು ದೇವಾಲಯಗಳು ಕೊಟ್ಟ ಲೆಕ್ಕವನ್ನೇ ಪಡೆದು ಸುಮ್ಮನಾಗುತ್ತಿದ್ದಾರೆ. ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ನಡೆಸಲಾಯಿತು. ಎಲ್ಲಾ ದೇವಾಲಯಗಳ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತು ಚರ್ಚೆ ನಡೆಸಲಾಯಿತು. ಭಕ್ತರ ಕಾಣಿಕೆ ಗೆ ಸರಿಯಾದ ಹೊಣೆಗಾರಿಕೆ ತೋರಿಸುವುದು ವ್ಯವಸ್ಥಾಪಕ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, 2020ರ ಜನವರಿ 30 ರೊಳಗೆ ಎಲ್ಲಾ ಎ ಹಾಗೂ ಬಿ ದರ್ಜೆಯ ದೇವಾಲಯಗಳು ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಪಾರದರ್ಶಕತೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಎ ಮತ್ತು ಡಿ ದರ್ಜೆಯ ದೇವಾಲಯಗಳು 2020 ಜನವರಿ 30ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ತಪ್ಪಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅಮಾನತು ಅಥವಾ ದೇವಾಲಯದ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಗಳು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಾಲಂ 39(2) ರ ಅನ್ವಯ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಆಡಿಟ್ ವರದಿಯನ್ನು ಕಡ್ಡಾಯಗೊಳಿಸುವುದರಿಂದ ದೇವಾಲಯದ ಹಣದ ಖರ್ಚು, ವೆಚ್ಚಗಳ ಕುರಿತು ನಿಖರ ಮಾಹಿತಿ ದೊರೆಯುತ್ತದೆ. ದೇವಸ್ಥಾನಕ್ಕೆ ಸೇರಿದ ಹಲವಾರು ಆಭರಣಗಳು ಮತ್ತು ಆಸ್ತಿಗಳ ಬಗ್ಗೆಯೂ ಸ್ಪಷ್ಟತೆ ದೊರೆಯುತ್ತದೆ. ವಿಜಯ್ ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ಇರುತ್ತದೆ. ಭಕ್ತರು ನೀಡಿದ ಕಾಣಿಕೆ ಗೆ ಪರ್ಯಾಯವಾಗಿ ಹೊಣೆಗಾರಿಕೆ ವರದಿ ನೀಡಲು ಕೂಡ ಇದು ನೆರವಾಗುತ್ತದೆ. ಇದು ಆಡಿಟ್ ವರದಿಯ ಪ್ರಮುಖ ಉದ್ದೇಶವಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.