ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಸೆಣೆಸಲು ಭಾರತವು ಹೆಚ್ಚು ಸನ್ನದ್ಧವಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ನಿಂದಾಗಿ ಆರ್ಥಿಕ ಚೇತರಿಕೆಗೆ ಅಪಾಯ ಇದೆ ಎಂಬ ಕಾರಣಕ್ಕೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ತೀರ್ಮಾನಕ್ಕೆ ಬಂದಿದೆ.
ಈ ತೀರ್ಮಾನದಿಂದಾಗಿ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರಗಳು ಇನ್ನೂ ಕೆಲವು ಸಮಯದವರೆಗೆ ಈಗಿರುವ ಮಟ್ಟದಲ್ಲಿಯೇ ಮುಂದುವರಿಯಲಿವೆ. ಅಲ್ಲದೇ ಇದು ಮಾರುಕಟ್ಟೆಯಲ್ಲಿ ಸಾರ್ವಜನಿಕರ ಕಡೆಯಿಂದ ಆಗುವ ಖರೀದಿ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.
ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಯು ಶೇ.8.4ರಷ್ಟು ಬೆಳವಣಿಗೆ ಸಾಧಿಸಿದೆ. ಇದು ವಿಶ್ವದ ಪ್ರಮುಖ ವ್ಯವಸ್ಥೆಗಳ ಪೈಕಿ ಅತಿ ವೇಗದ ಬೆಳವಣಿಗೆ. ಆದರೆ, ಕೊರೊನಾದ ಒಮಿಕ್ರಾನ್ ತಳಿಯು ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿ ಉಂಟುಮಾಡಬಲ್ಲದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಒಮಿಕ್ರಾನ್ ತಳಿಯು ಹರಡುತ್ತಿರುವುದು ಮತ್ತು 5 ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆರ್ಥಿಕ ಬೆಳವಣಿಗೆ ದರವನ್ನು ತಗ್ಗಿಸಬಲ್ಲ ಅಪಾಯಗಳಾಗಿ ಕಾಣುತ್ತಿವೆ ಎಂದು ದಾಸ್ ಅವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.