ನೋಟರಿ ಗಳಾಗಿ ಕಾರ್ಯನಿರ್ವಹಿಸಲು ಇನ್ನಷ್ಟು ಯುವಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನೋಟರಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಈ ಸಂಬಂಧ ಕರಡು ವಿಧೇಯಕವೂ ಸಿದ್ಧವಾಗಿದೆ. ಇದು ಕಾನೂನಾಗಿ ಜಾರಿಗೆ ಬಂದರೆ ,ನೋಟರಿ ಗಳು ತಮ್ಮ ವೃತ್ತಿಯಲ್ಲಿ ಮುಂದುವರಿಸಲು ನವೀಕರಣಗಳ ಸಂಖ್ಯೆಗೆ ಮಿತಿ ಬೀಳಲಿದೆ.
ಪ್ರಸ್ತುತ ನೋಟರಿ ಗಳು ಯಾವುದೇ ಮಿತಿಯಿಲ್ಲದೆ ಎಷ್ಟು ಬಾರಿ ಬೇಕಾದರೂ ತಮ್ಮ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಲು ಅವಕಾಶವಿದೆ. ಇದರಿಂದ ಹೊಸಬರಿಗೆ ಅದರಲ್ಲೂ ಯುವಕರಿಗೆ ಅವಕಾಶ ಕೈತಪ್ಪುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ನವೀಕರಣಗಳ ಸಂಖ್ಯೆಯನ್ನು ಗರಿಷ್ಠ 15 ಕ್ಕೆ ಮಿತಿಗೊಳಿಸಲು ಕೇಂದ್ರ ಕಾನೂನು ಸಚಿವಾಲಯ ಮುಂದಾಗಿದೆ.
ಪರಿಷ್ಕೃತ ಕಾಯ್ದೆ ಪ್ರಕಾರ ಪ್ರಥಮ ಬಾರಿಗೆ ಐದು ವರ್ಷ, ಮತ್ತೆರಡು ಬಾರಿ ಐದು ವರ್ಷ ಸೇರಿದಂತೆ ಒಟ್ಟು ಹದಿನೈದು ವರ್ಷ ಮಾತ್ರ ಒಬ್ಬ ವ್ಯಕ್ತಿ ನೋಟರಿಯಾಗಿ ಕೆಲಸ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ. ಕಾನೂನು ಇಲಾಖೆಯ ವೆಬ್ ಸೈಟ್ ನಲ್ಲಿ ಕರಡು ವಿಧೇಯಕ ದ ಪ್ರತಿಯನ್ನು ಅಪ್ಲೋಡ್ ಮಾಡಲಾಗಿದೆ. ಜನರು ಡಿಸೆಂಬರ್ 15ರೊಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು.