ಯುವಕ-ಯುವತಿಯರನ್ನು ಮೋಸಗೊಳಿಸಲು ಸಮಾಜದಲ್ಲಿ ಲೆಕ್ಕವಿಲ್ಲದಷ್ಟು ಮೋಸಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಯುವತಿಯರನ್ನು ಅವರ ಗಮನಕ್ಕೆ ಬರದೇ ಸಂಪರ್ಕಿಸುತ್ತಿದ್ದಾರೆ. ಮೋಸದ ಬಲೆಗೆ ಸೆಳೆಯುತ್ತಿದ್ದಾರೆ. ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕೋಟಿ ಪೊಲೀಸ್ ಠಾಣೆಯ ಡಿವೈಎಸ್ ಪಿ ಗಜಾನನ ಸುತಾರಾ ಸಲಹೆ ನೀಡಿದ್ದಾರೆ.
ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಯಂ ರಕ್ಷಣೆ ಕುರಿತು ಅರಿವು ಕಾರ್ಯಕ್ರಮವನ್ನು ಡಿವೈಎಸ್ಪಿ ಗಜಾನನ ಅವರು ಉದ್ಘಾಟಿಸಿದರು.
ಸೈಬರ್ ಅಪರಾಧದ ಕಡಿವಾಣಕ್ಕೆ ಸಂಬಂಧಿಸಿದ ಸರ್ಕಾರಗಳು ಹತ್ತು ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ಕಾನೂನುಗಳ ಕೆಳಗೆ ನುಸುಳಿ ಸೈಬರ್ ಕ
ಖದೀಮರು ಜನರನ್ನು ಯಾಮಾರಿಸುತ್ತಿದ್ದಾರೆ. ಅಪರಿಚಿತರಿಗೆ ಯಾವುದೇ ಓಟಿಪಿ, ಆಧಾರ್ ಕಾರ್ಡ್ ಸಂಖ್ಯೆ, ಈ ತಿಂಗಳ ಮಾಹಿತಿ ನೀಡದಂತೆ ಮಾಹಿತಿ ನೀಡಿದರು.
ಅಭಿವೃದ್ಧಿ ಹೊಂದುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸಮಾಜದಲ್ಲಿ ಕಾಲೇಜು ಯುವತಿಯರು ಅತ್ಯಂತ ಜಾಗೃತರಾಗಿ ಸ್ಪಂದಿಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಚ್.ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಡಾ. ಬಾಲಕೃಷ್ಣ ಹೆಗಡೆ, ವಿ. ದೀಪಿಕಾ, ಐಕ್ಯೂಎಸಿ ಸಂಯೋಜಕ ಡಾ.ಓಂಕಾರಪ್ಪ, ಎನ್.ನಾಗವೇಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣ: ಯುವಜನರೇ ಜಾಗೃತೆ ವಹಿಸಿ
Date: