ಸಹಾಯಕ ತೋಟಗಾರಿಕಾ ಅಧಿಕಾರಿಗಳು ನೇರನೇಮಕಾತಿ ಸಂಬಂಧಿಸಿದಂತೆ ಯಾರಾದರೂ ಕಾನೂನುಬಾಹಿರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರು ತಿಳಿಸಿದ್ದಾರೆ.
ಆಯ್ಕೆಯಾಗಿರುವ 306 ಅಭ್ಯರ್ಥಿಗಳ ಪೈಕಿ 293 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವರದಿ ಪರಿಶೀಲನೆ ಆಗಿದ್ದು, ವೈದ್ಯಕೀಯ ತಪಾಸಣೆಯೂ ಪೂರ್ಣಗೊಂಡಿದೆ. ಇನ್ನು 14 ಅಭ್ಯರ್ಥಿಗಳ ದಾಖಲೆಗಳು ಪರಿಶೀಲನಾ ಹಂತದಲ್ಲಿವೆ. ಆದರೂ ಸಹ ಇನ್ನುಳಿದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಿ,6 ತಿಂಗಳು ತರಬೇತಿ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಯವರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಆಯ್ಕೆಯಾದ ಯಾರೊಬ್ಬರೂ ಅಂಕಪಟ್ಟಿ ಕೋರಿಕೆ ಸಲ್ಲಿಸಿಲ್ಲ. ಹಾಗೊಂದು ವೇಳೆ ಸಲ್ಲಿಸಿದ್ದರೆ ಅಂಕಪಟ್ಟಿ ನೀಡಲಾಗುವುದು. ಸಿಂಧುತ್ವ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ದೃಢೀಕರಣ ಪತ್ರ, ಮತ್ತು ಗ್ರಾಮೀಣ ಅಭ್ಯರ್ಥಿಯ ದೃಢೀಕರಣ ಪತ್ರಗಳನ್ನು ಹಾಜರುಪಡಿಸಿದೇ ಇರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೇಮಕಾತಿ ಆದೇಶ ನೀಡಲು ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಅಂಶ ಸತ್ಯಕ್ಕೆ ದೂರ ಎಂದು ತಿಳಿಸಿದೆ.
ತೋಟಗಾರಿಕೆ ಇಲಾಖೆ ನೇಮಕಾತಿ, ಆದೇಶ ಶೀಘ್ರ
Date: