Wednesday, April 1, 2026
Wednesday, April 1, 2026

ಜನವರಿಯಲ್ಲಿ ಮೇಕೆದಾಟು ಪಾದಯಾತ್ರೆ. – ಡಿಕೆಶಿ.

Date:

ನಮ್ಮ ನೀರು ನಮ್ಮ ಹಕ್ಕು. ಮೇಕೆದಾಟು ಯೋಚನೆ ಆಗಲೇಬೇಕು. ಹಳೆ ಮೈಸೂರು ಭಾಗದ ರೈತರನ್ನು ರಕ್ಷಣೆ ಮಾಡಬೇಕು. ಆದ್ದರಿಂದ ಮೇಕೆದಾಟು ಯೋಜನೆ ಜಾರಿಗೆ ಜಾರಿಯಾಗಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಕುಮಾರ್ ಅವರು ತಿಳಿಸಿದ್ದಾರೆ.

‘ಯೋಜನೆ ಪ್ರಾರಂಭವಾಗಲು ಎಲ್ಲಾ ರೀತಿಯ ಅನುಮತಿ ಸಿಕ್ಕಿದೆ. ಯಾವುದೇ ನ್ಯಾಯಾಲಯದ ತಡೆಯಿಲ್ಲ. ಆದರೂ ಕೇಂದ್ರ ಸರ್ಕಾರ ಮಾತ್ರ ಕೆಲಸ ಮಾಡಲು ಅನುಮತಿ ನೀಡುತ್ತಿಲ್ಲ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಲಭಿಸುತ್ತದೆ. ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದರ ಜೊತೆಗೆ ರೈತರ ಕೃಷಿಗೆ ನೀರು ಮತ್ತು ತಮಿಳುನಾಡಿಗೆ ನೀರು ಹರಿಸಬಹುದು. ಇದರಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ’ ಎಂದು ಕೂಡ ತಿಳಿಸಿದರು.

ಈ ಯೋಜನೆಯ ಕೆಲಸ ಪ್ರಾರಂಭವಾಗಬೇಕು. ಈ ಬಗ್ಗೆ ನಮ್ಮ ಪಕ್ಷದಿಂದ ಹೋರಾಟ ಮಾಡುತ್ತೇವೆ. ಜನವರಿ ಮೊದಲ ವಾರದಿಂದ ಮೇಕೆದಾಟು ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತೇವೆ. ಹತ್ತರಿಂದ ಹದಿನೈದು ದಿನಗಳ ಕಾಲ ಪಾದಯಾತ್ರೆ ಮಾಡುತ್ತೇವೆ. ಇದು ನಮ್ಮ ನೀರಿನ ಹಕ್ಕಿನ ಪ್ರಶ್ನೆ. ಮೇಕೆದಾಟು ಯೋಜನೆಯ ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣಪತ್ರ ನೀಡುತ್ತೇವೆ. ಮಂಡ್ಯ ಭಾಗದ ಎಲ್ಲಾ ಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Keladi Shivappa Nayaka Agriculture University ಏಪ್ರಿಲ್ 8 ರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲಿ ವಿವಿಧ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ.

Keladi Shivappa Nayaka Agriculture University ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಏಪ್ರಿಲ್...

Shivamogga Police ಏಪ್ರಿಲ್ 6. ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನಗಳ ಬಹಿರಂಗ ಹರಾಜು.

Shivamogga Police ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 08...

Breaking News ಸಿಡಿಲು ಬಡಿದು ಶಿವಮೊಗ್ಗ ಸನಿಹದ ರಾಮನಗರದಲ್ಲಿ ಚಿಕನ್ ಅಂಗಡಿ ಮಾಲೀಕರ ಸಾವು.

Breaking News ಸಿಡಿಲು ಬಡಿದು ಚಿಕನ್ ಅಂಗಡಿಯ ಮಾಲೀಕ ಸಾವನಪ್ಪಿದ್ದಾನೆ. ಸೋಮವಾರ...

Madhu Bangarappa ಸೊರಬದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಗಳನ್ನವಿತರಿಸಿದ ಸಚಿವ ಮಧು ಬಂಗಾರಪ್ಪ.

Madhu Bangarappa  ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ಜನತೆಯ ಸುರಕ್ಷತೆ ಹಾಗೂ...