Friday, October 4, 2024
Friday, October 4, 2024

ಶಿವಮೊಗ್ಗದಲ್ಲಿ ಖಾದ್ಯಮೇಳ

Date:

ಶಿವಮೊಗ್ಗ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ, ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಖಾದ್ಯ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮೇಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಅವರು ಭಾಗಿಯಾಗಿದ್ದರು.

ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕನಸು ಇಂತಹ ಕಾರ್ಯಕ್ರಮಗಳ ಮೂಲಕ ಸಾಕಾರಗೊಳಿಸುತ್ತಿದೆ. ಗೃಹ ಬಳಕೆ ವಸ್ತು, ಕರಕುಶಲ ವಸ್ತು, ಇತರೆ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರ ಮೂಲಕ ಜೀವನ ಸ್ವಾವಲಂಬಿಯಾಗಿದೆ ಎಂದು ಮಂಜುನಾಥ್ ಅವರು
ತಿಳಿಸಿದರು.

ಕೊರೋನಾದಂತಹ ಅನೇಕ ಸವಾಲುಗಳ ನಡುವೆ ಇಂತಹ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು ಒಳ್ಳೆಯ ಕೆಲಸ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಜೊತೆಗೆ ತರಹೇವಾರಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸಮಾಜದಲ್ಲಿ ಲವಲವಿಕೆ ತರಲು ಸಹಾಯವಾಗುತ್ತದೆ ಎಂದು ಕೂಡ ತಿಳಿಸಿದರು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಾದರೆ ಸಾಲದು. ಇದರ ಜೊತೆಗೆ ಭಾಷೆ, ಸಂಸ್ಕೃತಿ ಕೂಡ ಬೆಳೆಯಬೇಕು. ಆಗ ಮಾತ್ರ ಅದು ಸರ್ವತೋಮುಖ ಅಭಿವೃದ್ಧಿ ಅನಿಸಿಕೊಳ್ಳುತ್ತದೆ. ಕನ್ನಡ ಸಾರಸ್ವತ ಲೋಕ ಕ್ಕಾಗಿ ಶ್ರಮಿಸಲು ನೀಡಿರುವ ಅವಕಾಶವನ್ನು ಬಳಸಿಕೊಂಡು ರಾಜ್ಯಕ್ಕೆ ಮಾದರಿಯಾಗಬಲ್ಲ ಪರಿಷತ್ತನ್ನು ಕಟ್ಟಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಅವರು ಭರವಸೆ ನೀಡಿದರು.

ಖಾದ್ಯ ಮೇಳದಲ್ಲಿ ಭಾರತಿ ರಾಮಕೃಷ್ಣ, ಶ್ರೀಕಾಂತ್, ಡಾ. ಮೋಹನ್ ಚಂದ್ರಗುತ್ತಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...