ಸದ್ದಿಲ್ಲದೆ ವಿಶ್ವದಾದ್ಯಂತ ಓಮಿಕ್ರಾನ್ ತನ್ನ ದುಷ್ಪರಿಣಾಮ ಬೀರುತ್ತಿದೆ. ಭಾರತದಲ್ಲೂ ಕೂಡ ರೂಪಾಂತರಿ ವೈರಸ್ ಓಮಿಕ್ರಾನ್ ಸಂಖ್ಯೆ ಏರಿಕೆಯಾಗಿದೆ.
ರಾಜಸ್ಥಾನದ ಜೈಪುರದಲ್ಲಿ 9, ಮಹಾರಾಷ್ಟ್ರದ ಪುಣೆಯಲ್ಲಿ 7 ಹಾಗೂ ದಿಲ್ಲಿಯಲ್ಲಿ ಒಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. ಮೊದಲು ಬೆಂಗಳೂರಿನಲ್ಲಿ ಒಬ್ಬರಿಗೊಬ್ಬರಿಗೆ, ಗುಜರಾತ್ ಮತ್ತು ಮುಂಬೈನಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು.
ಓಮಿಕ್ರಾನ್ ಸೋಂಕಿನ ಜೊತೆಯಲ್ಲೇ ಕೊರೋನಾ ಸೋಂಕು ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಸೀಗೋಡು ಜವಹಾರ್ ನವೋದಯ ವಿದ್ಯಾಲಯದಲ್ಲಿ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 68 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ರಾಜ್ಯದ ರಾಜಧಾನಿಯಲ್ಲು ಕೋವಿಡ್ ಪ್ರಕರಣ ಕಳೆದ 24 ಗಂಟೆಗಳಲ್ಲಿ 256 ಸೇರಿ 456 ಹೊಸ ಕೇಸ್ ಪತ್ತೆಯಾಗಿವೆ. ಆರು ಮಂದಿ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,132ಕ್ಕೆ ತಲುಪಿದೆ.
ಮಹಾಮಾರಿ ಕೋವಿಡ್ ತನ್ನ ಕರಾಳ ರೂಪವನ್ನು ತೋರುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದರು ಸಹ ಜನರು ಮಾತ್ರ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸದೆ ಮೈಮರೆತು ಓಡಾಡುತ್ತಿರುವುದು ಆಂತಕ ಮೂಡಿಸಿದೆ.