ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಅಲ್ಲಲ್ಲಿ ವಿರೋದವಿದ್ದರೂ ಸಹ ಸರ್ಕಾರ ಅದನ್ನ ಜಾರಿಗೊಳಿಸಿದೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಎನ್ಇಪಿ ಅನ್ವಯ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಕಲ್ಪಿಸಿದೆ, ನಿರ್ದಿಷ್ಟ ವಿಷಯಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವುದು ಕೇಳಿಬರುತ್ತಿದೆ.
ಕೋರ್ಸ್ ಗೆ ಸಂಬಂಧಿಸಿದ ಪೂರಕವಾದ ಓಪನ್ ಎಲೆಕ್ಟಿವ್ ಗಳ ಆಯ್ಕೆಗೂ ಶಿಕ್ಷಣ ಸಂಸ್ಥೆಗಳು ತಕರಾರು ಮಾಡುತ್ತಿವೆ ಎಂಬ ಆರೋಪ ವಿದ್ಯಾರ್ಥಿಗಳು ಮತ್ತು ಪೋಷಕರ ಕಡೆಯಿಂದ ಕೇಳಿಬರುತ್ತಿದೆ.
ಎನ್ ಇ ಪಿಗೆ ವಿರುದ್ಧವಾಗಿ ನಿರ್ದಿಷ್ಟ ವಿಷಯಗಳನ್ನು ತೆಗೆದುಕೊಳ್ಳುವಂತೆ ಕಾಲೇಜುಗಳು ಒತ್ತಡ ಹಾಕುತ್ತಿವೆ. ಲಭ್ಯವಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ವಿಷಯಗಳ ಆಯ್ಕೆ ಪ್ರಕ್ರಿಯೆಯು ಸಮಸ್ಯೆ ಕಾರಣ ಕಾಲೇಜುಗಳಲ್ಲಿ ಪಾಠಗಳು ಆರಂಭ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.