ಅರ್ಹ ವಯಸ್ಕರಿಗೆ ಕೊರೋನಾ ಎರಡು ಲಸಿಕೆ ನೀಡಿರುವುದರಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ.
ಕರ್ನಾಟಕದಲ್ಲಿ 4. 72 ಕೋಟಿ ವಯಸ್ಕರಲ್ಲಿ ಶೇ. 66ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಲಾಗಿದೆ.
ಕೇರಳದಲ್ಲಿ ಶೇ.63 ರಷ್ಟು ಮತ್ತು ತೆಲಂಗಾಣದಲ್ಲಿ ಶೇ. 60ರಷ್ಟು ವಯಸ್ಕರಿಗೆ ಲಸಿಕೆಯನ್ನು ನೀಡಲಾಗಿದೆ. ಆದರೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಶೇ. 50ಕ್ಕೂ ಕಡಿಮೆ ವಯಸ್ಕರಿಗೆ ಲಸಿಕೆ ನೀಡಲಾಗಿದೆ.
25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ಕ್ಕೂ ಹೆಚ್ಚು ವಯಸ್ಕರಿಗೆ ಇಲ್ಲ ಸಿಕ್ಕಿ ಏನು ನೀಡಲಾಗಿದೆ. ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ. 75ಕ್ಕೂ ಅಧಿಕ ವಯಸ್ಕರಿಗೆ ಎರಡೂ ಲಸಿಕೆ ನೀಡುವಲ್ಲಿ ತನ್ನ ಗುರಿಯನ್ನು ಸಾಧಿಸಿದೆ.
ದೇಶದಲ್ಲಿ ಕೋವಿಡ್ ರೂಪಾಂತರ ತಳಿ ಓಮಿಕ್ರಾನ್ ನ ಆತಂಕ ಹೆಚ್ಚುತ್ತಿರುವಂತೆ ಲಸಿಕೆ ಪ್ರಗತಿಯ ಅಂಕಿಅಂಶಗಳು ಪ್ರಕಟಗೊಂಡಿದೆ.
‘ಈಗ ಲಭ್ಯವಿರುವ ಲಸಿಕೆ ರೋಗ ತಡೆಯುತ್ತಿಲ್ಲ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಲಸಿಕೆ ಪಡೆದಿದ್ದರೂ ಮಾಸ್ಕ್ ಧರಿಸುವುದು. ಅಂತರ ಕಾಯ್ದುಕೊಳ್ಳುವುದು ಹೀಗೆ ಅನೇಕ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಗುಂಪು ಸೇರುವಿಕೆ ಯನ್ನು ಆದಷ್ಟು ತಪ್ಪಿಸಬೇಕು’ ಎಂದು ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ನ ಹಿರಿಯ ಸಂಶೋಧಕ ಒಮೆನ್ ಜಾನ್ ತಿಳಿಸಿದ್ದಾರೆ.