ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಓಮಿಕ್ರಾನ್ ತಳಿಯ ವೈರಸ್ ಪತ್ತೆಯಾದ ದಕ್ಷಿಣ ಆಫ್ರಿಕಾ ಮೂಲದ ವೃದ್ಧರಿಗೆ ನೆಗೆಟಿವ್ ವರದಿ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪ್ರಯೋಗಾಲಯದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಿದೆ.
ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವೃದ್ದರು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ನವೆಂಬರ್ 20ರಂದು ಅವರಿಗೆ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಡಪಟ್ಟಿದ್ದರಿಂದ ಆರೋಗ್ಯ ಸಿಬ್ಬಂದಿ ಅವರನ್ನು ಕ್ವಾರಂಟೈನ್ ಮಾಡಿದ್ದರು. ಆದರೆ ನವೆಂಬರ್ 24ರಂದು ಅವರು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು,
ನೆಗೆಟಿವ್ ವರದಿ ನೀಡಿತ್ತು. ಹಾಗಾಗಿ ಅವರು ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿ ನವೆಂಬರ್ 27ರಂದು ದುಬೈಗೆ ತೆರಳಿದ್ದರು. ಇದೀಗ ವ್ಯಕ್ತಿಯ ಜಿನೋಮ್ ಸಿಕ್ವೆನ್ಸಿಂಗ್ ನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಹಾಗಾಗಿ ವರದಿ ಬಗ್ಗೆ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಪರೀಕ್ಷೆ ಪಲಿತಾಂಶದಲ್ಲಿ ವೈರುಧ್ಯವಿರುವುದರಿಂದ ಹೈ ಗ್ರೌಂಡ್ ಪೋಲಿಸರಿಂದ ತನಿಖೆ ನಡೆಸುವಂತೆ ಸರ್ಕಾರ ಪೊಲೀಸರಿಗೆ ಸೂಚಿಸಿದೆ.
ಆಫ್ರಿಕಾ ಮೂಲದ ಸೋಂಕಿತರು; ತನಿಖೆ.
Date: