ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ನಿಧನ. ಕೆಲದಿನಗಳ ಹಿಂದೆ ಅಪಘಾತದಲ್ಲಿ ಶಿವರಾಂ ಅವರು ಗಾಯಗೊಂಡಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಮನೆಯಲ್ಲಿ ಯಾರು ಇಲ್ಲದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೊಸಕೆರೆಹಳ್ಳಿ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವರಾಂ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಶಿವರಾಂ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
1938 ರಲ್ಲಿ ಮದ್ರಾಸ್ ಪ್ರಾಂತ್ಯದ ಚೂಡಸಂದ್ರ ಹಳ್ಳಿಯಲ್ಲಿ ಶಿವರಾಂ ಜನಿಸಿದರು. ಗುಬ್ಬಿ ನಾಟಕ ಕಂಪನಿಗೆ ಸೇರಿ ತಮ್ಮ ಬಣ್ಣದ ಬದುಕನ್ನ ಪ್ರಾರಂಭಿಸಿದರು.
ಕನ್ನಡದ ಮೇರು ನಟರಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್, ಅಂಬರೀಶ್ ಅವರೊಂದಿಗೆ ನಟಿಸಿದ್ದರು.
ಅವರು ನಟಿಸಿದ ಶರಪಂಜರ ಚಿತ್ರದ ಅಡಿಗೆಭಟ್ಟನ ಪಾತ್ರ
ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.
ಅಂದಿನಿಂದ ಶರಪಂಜರ ಶಿವರಾಂ ಎಂದೇ ಖ್ಯಾತರಾಗಿದ್ದರು
ಡಾ.ರಾಜಕುಮಾರ್, ಆರತಿ ನಟಿಸಿದ್ದ ‘ಹೃದಯ ಸಂಗಮ’ ಸಿನಿಮಾವನ್ನು ಶಿವರಾಂ ನಿರ್ದೇಶನ ಮಾಡಿದ್ದರು.
ಶಿವರಾಜ ಅವರು ಕನ್ನಡದಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ.
ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.