ದೇಶದಲ್ಲಿ ಸಂತಾನ ಉತ್ಪತ್ತಿ ಫಲವಂತಿಕೆ ಕುಸಿಯುತ್ತಿರುವುದಕ್ಕೆ ಗರ್ಭನಿರೋಧಕಗಳ ಬಳಕೆ ಯಲ್ಲಿ ಹೆಚ್ಚಳ ಕಾರಣ ಎಂದು ಕೇಂದ್ರ ಸರ್ಕಾರದ ಸಮೀಕ್ಷೆಯಿಂದ ತಿಳಿದುಬಂದಿದೆ.
ವಲಸೆ ಕಾರ್ಮಿಕರು ಹೆಚ್ಚಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಗಮನಹರಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಈ ನಿಟ್ಟಿನಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಜನಸಂಖ್ಯೆ ಸ್ಪೋಟ ತಡೆಯಲು ಇದು ಸಹಕಾರಿ ಎಂದು ಅಂತರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಕೇಂದ್ರದ ನಿರ್ದೇಶಕರಾದ ಪ್ರೊ.ಕೆ.ಜೇಮ್ಸ್ , ಅವರು ತಿಳಿಸಿದ್ದಾರೆ.
5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಫಲವಂತಿಕೆ ಕುಸಿಯುತ್ತಿರುವ ಸಂಗತಿಯನ್ನು ಬಯಲು ಮಾಡಿತ್ತು.ಅದೇ ಸಮೀಕ್ಷೆಯು, ಫಲವಂತಿಕೆ ಕ್ಷೀಣಿಸಲು ಗರ್ಭನಿರೋಧಕಗಳ ಬಳಕೆ ಹೆಚ್ಚಳವೇ ಕಾರಣ ಎಂಬುದನ್ನೂ ಪತ್ತೆ ಮಾಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಗರ್ಭನಿರೋಧಕ (ಮಾತ್ರೆ ಮತ್ತು ಸಾಧನ) ಬಳಕೆ ಶೇ.8.7ರಷ್ಟು ಜಾಸ್ತಿಯಾಗಿದೆ. ಐದು ವರ್ಷಗಳ ಮುನ್ನ ಶೇ.47.8ರಷ್ಟು ಜನರು ಗರ್ಭನಿರೋಧಕಗಳನ್ನು ಬಳಸುತ್ತಿದ್ದರೆ, ಈಗ ಪ್ರಮಾಣ ಶೇಕ.56.5ಕ್ಕೆ ಏರಿಕೆಯಾಗಿದೆ. ಅಂದರೆ ಚಿಕ್ಕ-ಚೊಕ್ಕ ಕುಟುಂಬದತ್ತ ಆಸಕ್ತಿ ತೋರಿಸುತ್ತಿರುವ ಭಾರತೀಯರು, ಹೆಚ್ಚೆಂದರೆ ಎರಡು ಮಕ್ಕಳನ್ನು ಮಾತ್ರ ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಸಮಾಜದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು ಕೂಡ ಇದಕ್ಕೆ ಕಾರಣ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಸಂತಾನೋತ್ಪತ್ತಿ ಕುಸಿತ
Date: