ಕನ್ನಡ ಮಾಧ್ಯಮದಲ್ಲಿ ಓದಿದವರಿಂದ ಒಂದಿಷ್ಟು ಸಂಸ್ಕೃತಿ ಉಳಿಯುವ ಸಾಧ್ಯತೆಯಿದೆ. ಇದನ್ನು ಕಾನ್ವೆಂಟ್ ಮಕ್ಕಳಿಂದ ನಿರೀಕ್ಷಿಸಲಾಗದು ಎಂದು ಹಿರಿಯ ಚಿತ್ರನಟ ದೊಡ್ಡಣ್ಣನವರು ಹೇಳಿದ್ದಾರೆ.
ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಕವಿಗಳಾದ ಪಂಪ ,ರನ್ನ ,ಪೊನ್ನ, ಜನ್ನ, ರಾಘವಾಂಕ, ಕುವೆಂಪು ಮತ್ತು ವಚನ ಸಾಹಿತ್ಯಗಳು, ಬೇಂದ್ರೆ ಸಾಹಿತ್ಯ ಇವೆಲ್ಲವೂ ಉಳಿಸಿ ಬೆಳೆಸಬೇಕಿದೆ. ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೂ ಈ ಬಗ್ಗೆ ಆಸಕ್ತಿ ಮೂಡಿಸಬೇಕು.ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ತಂದೆ ತಾಯಿ ಗುರು ಹಿರಿಯರಿಗೆ ಗೌರವ ನೀಡುತ್ತಾರೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ರೇವಣಸಿದ್ದಯ್ಯ ಮಾತನಾಡಿ, ಪತ್ರಿಕಾಭವನದಲ್ಲಿ ಗ್ರಂಥಾಲಯ ಸ್ಥಾಪನೆಗೆ rs.25000 ಧನಸಹಾಯ ನೀಡುವುದಾಗಿ ಭರವಸೆ ನೀಡಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ .ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಂದ ಸಂಸ್ಕೃತಿ ಉಳಿವು- ದೊಡ್ಡಣ್ಣ.
Date: